ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಸಿಎಂ ಸಿದ್ಧರಾಮಯ್ಯ ವಿರುದ್ದ ಕೆ.ಎಸ್ ಈಶ್ವರಪ್ಪ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ-ವೈ.ಹೆಚ್. ನಾಗರಾಜ್ ವಾಗ್ದಾಳಿ

ಶಿವಮೊಗ್ಗ: ಈಗಾಗಲೇ ಸ್ವಪಕ್ಷದಿಂದಲೇ ತಳ್ಳಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಮೈಮೇಲೆ ಇರುವೆ ಬಿಟ್ಟುಕೊಂಡವರಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತಮ್ಮ ನಾಲಗೆಯನ್ನು ಮತ್ತೆ ಹರಿಬಿಟ್ಟಿದ್ದಾರೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದ್ದಾರೆ.
ರಾಗಿಗುಡ್ಡ ಘಟನೆ ನೆಪವಾಗಿಟ್ಟುಕೊಂಡು ಈಶ್ವರಪ್ಪ ಸೇರಿದಂತೆ  ಶಿವಮೊಗ್ಗದ ಬಿಜೆಪಿಗರು ಬೇಕಾಬಿಟ್ಟಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆ. ಅವರು ಹಿಂದೂನೇ ಅಲ್ಲ, ನಮಗೂ ಆಯುಧ ಹಿಡಿಯಲು ಬರುತ್ತದೆ. ಕೊಚ್ಚಿ ಹಾಕುತ್ತೇವೆ, ಉಫ್ ಎಂದು ಊದಿದರೆ ಮುಸ್ಲಿಮರು ತುಂಗಾ ನದಿಗೆ ಹೋಗಿ ಬೀಳುತ್ತಾರೆ ಎಂಬಿತ್ಯಾದಿ ಭೀಭತ್ಸ, ಭಯಾನಕ ಹೇಳಿಕೆಗಳನ್ನು ನೀಡುತ್ತಾ ಭಯೋತ್ಪಾದಕರಾಗುತ್ತಿದ್ದಾರೆ. ಪೆÇಲೀಸರು ಇವರೆಲ್ಲರ ಹೇಳಿಕೆಗಳನ್ನು ಗಮನಿಸಿ ಪ್ರತಿಯೊಬ್ಬರ ಮೇಲೆ ಸುಮೊಟೊ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಂದುವರೆದು ಹೇಳಿಕೆ ನೀಡಿರುವ ಈಶ್ವರಪ್ಪ ಹಿಂದೂಗಳು ಕನಿಷ್ಠ 5 ಮಕ್ಕಳನ್ನಾದರೂ ಮಾಡಿಕೊಳ್ಳಲಿ. ನನಗೆ 5 ಮಕ್ಕಳು, 8 ಮೊಮ್ಮಕ್ಕಳು ಇದ್ದಾರೆ. ಅμÁ್ಟದರೂ ಮಾಡಿಕೊಳ್ಳಲಿ ಎಂದು ಹೇಳುತ್ತಾರೆ. ಸ್ವಲ್ಪವಾದರೂ ಅವರಿಗೆ ವಿವೇಕವಿಲ್ಲ. ಹಿಂದೂ ಧರ್ಮವನ್ನು ಮೈಮೇಲೆ ಹೊತ್ತುಕೊಂಡವರಂತೆ ಅಜ್ಞಾನದ ಹೇಳಿಕೆ ನೀಡಿರುವ ಈಶ್ವರಪ್ಪರನ್ನು ಆ ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಸರ್ಕಾರ, ಪೆÇಲೀಸ್ ಇಲಾಖೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿವೆ. ಪರಿಸ್ಥಿತಿ ಕೂಡ ಹತೋಟಿಗೆ ಬಂದಿದೆ. ಹೀಗಿದ್ದರೂ ರಸ್ತೆ ನಡುವೆ ಸಾರ್ವಜನಿಕರಿಗೆ ತೊಂದರೆ ನೀಡಿ ಸಭೆ ನಡೆಸಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಬಿಜೆಪಿಗರು ಚುನಾವಣೆ ಗಿಮಿಕ್ ಆರಂಭಿಸಿದ್ದಾರೆ ಎಂದೇ ಅರ್ಥ ಎಂದು ಟೀಕಿಸಿದ್ದಾರೆ.
ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ. ಆದರೆ, ಈಶ್ವರಪ್ಪನಂತಹವರಿಗೆ ಕೆಟ್ಟ ಮೇಲೆಯೂ ಬುದ್ಧಿ ಬರುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಬೈದರೆ ತನ್ನ ಮಗನಿಗೆ ರಾಜಕೀಯ ಭವಿಷ್ಯವಿದೆ ಎಂದು ಅವರು ತಿಳಿದುಕೊಂಡಂತಿದೆ. ಅವರ ರಾಜಕೀಯ ತಂತ್ರ, ಧರ್ಮ ತಂತ್ರಗಳೆಲ್ಲಾ ಮುಗಿದು ಹೋದ ಅಧ್ಯಾಯ. ಮಹಾನ್ ದೈವ ಭಕ್ತರಾದ ಈಶ್ವರಪ್ಪ ಅವರು ಸಿದ್ದರಾಮಯ್ಯರನ್ನು ಟೀಕಿಸುವುದನ್ನು ಬಿಟ್ಟು ದೇವಸ್ಥಾನಗಳಲ್ಲಿ ಭಜನೆ ಮಾಡಿಕೊಂಡಿರುವುದು ಒಳಿತು ಎಂದು ವೈ.ಹೆಚ್. ನಾಗರಾಜ್ ಹೇಳಿದ್ದಾರೆ.

Related posts

ಆದಿತ್ಯ ಎಲ್ -1 ಉಡಾವಣೆ ವೀಕ್ಷಿಸಿ ಖುಷಿಪಟ್ಟು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ ಶಾಲೆಯ ವಿದ್ಯಾರ್ಥಿಗಳು

ಕನ್ನಡ ಸಾಹಿತ್ಯ ಪರಿಷತ್ತಿನ  ʻಕನ್ನಡ ಪ್ರವೇಶʼ, ʻಕಾವʼ, ʻಜಾಣʼ ʻರತ್ನʼ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಕರಕುಚ್ಚಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಉತ್ತಮ ಶಾಲೆ ಪ್ರಶಸ್ತಿ.