ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಲೇಖಕರು, ಬುದ್ದಿಜೀವಿಗಳಿಗೆ ಬೆದರಿಕೆ ಪತ್ರ: ಕ್ರಮಕ್ಕೆ ಆಗ್ರಹಿಸಿ ಸರ್ಕಾರದ  ಬಾಗಿಲು ತಟ್ಟಿದ ಸಾಹಿತಿಗಳು.

ಬೆಂಗಳೂರು: ಕೋಮುವಾದಿ ಜಾತಿವಾದ ವಿರುದ್ಧದ ನಿಲುವುಳ್ಳ ಲೇಖಕರು, ಬುದ್ಧಿಜೀವಿಗಳಿಗೆ ಬೆದರಿಕೆ ಪತ್ರ ಬರುತ್ತಿರುವ ಹಿನ್ನೆಲೆ ಕ್ರಮಕ್ಕೆ ಆಗಹಿಸಿ ಹಾಗೂ ರಕ್ಷಣೆ ನೀಡುವಂತೆ ಕೋರಿ ಸಾಹಿತಿಗಳು ಸರ್ಕಾರದ ಮೊರೆ ಹೋಗಿದ್ದಾರೆ.

ಪ್ರೊ ಕೆ. ಮರಳಸಿದ್ದಪ್ಪ ಎಸ್ ಜಿ ಸಿದ್ದರಾಮಯ್ಯ, ವಸುಂದರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿ 15ಕ್ಕೂ ಹೆಚ್ಚು ಸಾಹಿತಿಗಳಿಗೆ ಕಳೆದ ಒಂದು ವರ್ಷದಿಂದ ಬೆದರಿಕೆ ಪತ್ರ ಬರುತ್ತಿದೆ ಎನ್ನಲಾಗಿದೆ. ಹೀಗಾಗಿ ಬೆದರಿಕೆ ಪತ್ರ ವಿಚಾರ ಗಂಭೀರವಾಗಿ ಪರಿಗಣಿಸಬೇಕು. ಬೆದರಿಕೆ ಪತ್ರ ಬರೆದವರನ್ನ ಪತ್ತೆ ಮಾಡಿ ಕ್ರಮ ಕೈಗೊಳ್ಳವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದಾರೆ.

ಕೋಮುವಾದಿ ಗುಂಪಿನಿಂದಲೇ ಈ ಪತ್ರಗಳು ಬರುತ್ತಿವೆ . ನಿಮ್ಮನ್ನು ಮುಗಿಸಿ ಬಿಡ್ತೀವಿ ಎಂದು ಪತ್ರ ಬರ್ತೀವೆ  ಜಾತಿವಾದ ಕೋಮುವಾದ ವಿರುದ್ದ ಮಾತನಾಡಿದಾಗ ಬೆದರಿಕೆ ಬರುತ್ತಿದೆ. ಒಂದೇ ಬಗೆಯಲ್ಲಿ ಒಂದೇ ರೀತಿಯಲ್ಲಿ ಎಲ್ಲರಿಗೂ ಪತ್ರ ಬರುತ್ತಿವೆ.  ಗೌರಿ ಲಂಕೇಶ್ , ಕಲ್ಬುರ್ಗಿ ಹತ್ಯೆ ಮಾಡಿದ ಗುಂಪು ನಮ್ಮನ್ನು ಹತ್ಯೆ ಮಾಡಬಹುದು ಹೀಗಾಗಿ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ಸಾಹಿತಿ ಡಾ.ಕೆ.ಮರಳಸಿದ್ದಪ್ಪ ತಿಳಿಸಿದ್ದಾರೆ.

Related posts

ಬಿವೈ ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದೂ ಬೇಡ- ಮತ್ತೆ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್

ರೇಖಾ ರಂಗನಾಥ್ ಹಾಗೂ ಕುಟುಂಬ ವರ್ಗದಿಂದ ಕಾರ್ತಿಕ ದೀಪೋತ್ಸವ.

ಕಷ್ಟಗಳನ್ನು ಅರಗಿಸಿಕೊಂಡು ಪರಿಪಕ್ವವಾದವರು ಆರ್.ಎಂ ಮಂಜುನಾಥ ಗೌಡರು-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ನುಡಿ