ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ವಿನೂತನ ಟೆಕ್ನಾಲಜಿ: ಭಾರದಲ್ಲಿ ವಿಶ್ವದ ಮೊದಲ ‘UPI ATM’

ಬೆಂಗಳೂರು: ಎಟಿಎಂ ಕಾರ್ಡ್ ಬಳಸದೆಯೇ, ಯಾವುದೇ ಯುಪಿಐ ಆ್ಯಪ್ ಮೂಲಕ ಎಟಿಎಂ ಸೆಂಟರ್ ನಲ್ಲಿ ನಗದು ಹಣ ವಿತ್ ಡ್ರಾ ಮಾಡಬಹುದಾದ ವಿಶ್ವದ ಮೊದಲ ‘UPI ATM’ಅನ್ನು ಭಾರತದಲ್ಲಿ ಸ್ಥಾಪಿಸಲಾಗಿದೆ.

ಹಿಟಾಚಿ ಪೇಮೆಂಟ್ ಸರ್ವಿಸಸ್  ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಸಹಯೋಗದಲ್ಲಿ ಭಾರತದಲ್ಲಿ ಮೊದಲ ಯುಪಿಐ ಎಟಿಎಂ ಅನ್ನು ಸ್ಥಾಪಿಸಿದೆ. ಇದರಲ್ಲಿ ಎಟಿಎಂ ಕಾರ್ಡ್ ಬಳಸದೆಯೇ, ಯಾವುದೇ ಯುಪಿಐ ಆ್ಯಪ್ ಮೂಲಕ ನಗದು ಹಣ ವಿತ್ ಡ್ರಾ ಮಾಡಬಹುದು.

ಈಗಾಗಲೇ ಎಸ್ ಬಿಐ ಮೊದಲಾದ ಬ್ಯಾಂಕುಗಳ ಕೆಲ ಎಟಿಎಂಗಳಲ್ಲಿ ಯುಪಿಐ ಫೆಸಿಲಿಟಿ ಇದೆಯಾದರೂ ಅದಕ್ಕೆ ಅ ಬ್ಯಾಂಕ್ನ ಆಯಪ್ ಬೇಕಾಗುತ್ತದೆ. ಆದರೆ, ಹಿಟಾಚಿಯ ಯುಪಿಐ ಎಟಿಎಂನಲ್ಲಿ ಯಾವುದೇ ಆಯಪ್ ಬಳಸಬಹುದು.

ಇಂತಹ ಯುಪಿಐ ಎಟಿಎಂ ಭಾರತದಲ್ಲಿ ಇದೇ ಪ್ರಥಮ ಪ್ರಯೋಗವಲ್ಲ. ಎಸ್ಬಿಐ, ಎಚ್ಡಿಎಫ್ಸಿ ಮೊದಲಾದ ಬ್ಯಾಂಕುಗಳ ಎಟಿಎಂಗಳಲ್ಲಿ ಯುಪಿಐ ಮೂಲಕ ಹಣ ವಿತ್ಡ್ರಾ ಮಾಡುವ ಸೌಲಭ್ಯಗಳುಂಟು. ಆದರೆ, ಅದನ್ನು ಬಳಸಬೇಕಾದರೆ ಆಯಾ ಬ್ಯಾಂಕ್ ನ ಆ್ಯಪ್ಗಳೇ ಬೇಕಾಗುತ್ತದೆ. ಆದರೆ, ಯಾವುದೇ ಯುಪಿಐ ಪೇಮೆಂಟ್ ಪ್ಲಾಟ್ಫಾರ್ಮ್ ಬಳಸಿ ಕ್ಯಾಷ್ ಪಡೆಯಬಲ್ಲ ಸೌಲಭ್ಯ ಇದೇ ಮೊದಲ ಬಾರಿಗೆ ಆರಂಭವಾಗಿದೆ.

ಭಾರತದಲ್ಲಿ ಯುಪಿಐ ಪಾವತಿಯ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಬಹುತೇಕ ಭಾರತೀಯರು ಹಣದ ವಹಿವಾಟಿಗೆ ಯುಪಿಐ ಸಾಧನವನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಹಣಕಾಸು ತಂತ್ರಜ್ಞಾನ (ಪಿನ್ಟೆಕ್) ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿರುವುದರ ಫಲವಾಗಿ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ನಿರಂತರವಾಗಿ ಸುಧಾರಣೆಗಳಾಗುತ್ತಿವೆ. ವಿಶ್ವದ ಫಿನ್ಟೆಕ್ (FinTech) ವಲಯದಲ್ಲಿ ಭಾರತ ಮುಂಚೂಣಿ ಆಟಗಾರನಾಗಿ ಮಿಂಚುತ್ತಿದೆ. ಇದೀಗ ಭಾರತದಲ್ಲಿ ಯುಪಿಐ ಎಟಿಎಂ ಆರಂಭವಾಗಿದೆ. ಎಟಿಎಂ ಕಾರ್ಡ್ ಬಳಸದೆಯೇ, ಯುಪಿಐ ಆಯಪ್ ಮೂಲಕ ಎಟಿಎಂನಲ್ಲಿ ಕ್ಯಾಷ್ ವಿತ್ಡ್ರಾ ಮಾಡಬಹುದು.

ಭಾರತದ ಪ್ರಮುಖ ವೈಟ್ ಲೇಬಲ್ ಎಟಿಎಂ ಆಪರೇಟರ್ಗಳಲ್ಲಿ ಒಂದಾದ ಹಿಟಾಚಿ ಪೇಮೆಂಟ್ ಸರ್ವಿಸ್ ಈ ಯುಪಿಐ ಎಟಿಎಂ ಹಿಂದಿರುವ ಶಕ್ತಿ. ಯುಪಿಐ ಅನ್ನು ಅಭಿವೃದ್ದಿಪಡಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಸಹಯೋಗದೊಂದಿಗೆ ಹಿಟಾಚಿ ಪೇಮೆಂಟ್ ಸರ್ವಿಸಸ್ ಯುಪಿಐ ಎಟಿಎಂ ಅನ್ನು ಅಭಿವೃದ್ಧಿಪಡಿಸಿದೆ.

ಎಟಿಎಂ ಸೆಂಟರ್ಗಳಲ್ಲಿ ಕಾರ್ಡ್ ಸ್ಕಿಮ್ಮಿಂಗ್ ಇತ್ಯಾದಿ ಅಪರಾಧಗಳಾಗುವ ಅಪಾಯ ಇದ್ದೇ ಇದೆ. ಯುಪಿಐ ಎಟಿಎಂನಿಂದ ಇದು ತಪ್ಪುತ್ತದೆ. ಎಟಿಎಂನ ಪರದೆಯಲ್ಲಿ ಕಾಣುವ ಕ್ಯುಆರ್ ಕೋಡ್ ಅನ್ನು ಯುಪಿಐ ಆಯಪ್ನಿಂದ ಸ್ಕ್ಯಾನ್ ಮಾಡಿ ಹಣವನ್ನು ಸುಲಭವಾಗಿ ವಿತ್ಡ್ರಾ ಮಾಡಬಹುದು.

 

Related posts

ದೈವಜ್ಞ ಸಮಾಜ ಸ್ವಾಭಿಮಾನಿ ಸಮಾಜವಾಗಿದೆ-ಶಾಸಕ ಎಸ್.ಎನ್.ಚನ್ನಬಸಪ್ಪ

ಬೆಂಗಳೂರಿನಲ್ಲಿಇಂದಿನಿಂದ  ಕಡಲೆಕಾಯಿ ಪರಿಷೆ..

ನ.26 ರಂದು ನಾರೀ ಶಕ್ತಿ ಸಂಗಮ.