ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮಹಿಳಾ ಮೀಸಲಾತಿ ಮಸೂದೆ ಸ್ವಾಗತ: ಸಿಹಿ ಹಂಚಿ ಸಂಭ್ರಮ..

ಶಿವಮೊಗ್ಗ:ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿರುವುದನ್ನು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಸ್ವಾಗತಿಸಿರುವುದಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಹಿ ಹಂಚಿ ಸಂಭ್ರಮಾಚರಿಸಿದರು.
ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗಲು ಅನೇಕ ಬಾರಿ ಲೋಕಸಭೆಯಲ್ಲಿ ಪ್ರಯತ್ನಿಸಲಾಗಿತ್ತು. ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಇದನ್ನು ಮಂಡಿಸಲಾಗಿತ್ತು. ಆದರೆ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಇದು ಆಗಿರಲಿಲ್ಲ. ಆದರೆ ಈಗ ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವರು ಇದನ್ನು ಮಂಡಿಸಿದ್ದಾರೆ. ರಾಜ್ಯ ಸಭೆಯಲ್ಲಿ ಕೂಡ ಮಂಡಿಸಲಿದ್ದಾರೆ. ಇದು ಜಾರಿಯಾಗುವ ಎಲ್ಲಾ ಸಾಧ್ಯತೆಗಳು ಇವೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಸ್ವಾಗತಿಸಿವೆ. ಹಾಗಾಗಿ ಮಸೂದೆ ಜಾರಿ ನಿಶ್ಚಿತ ಎಂದು ಟ್ರಸ್ಟ್‍ನ ಪದಾಧಿಕಾರಿಗಳು ತಿಳಿಸಿದರು.
ಇದರಿಂದ ಮಹಿಳೆಯರಿಗೆ ರಾಜಕೀಯ ಶಕ್ತಿ ಬರುತ್ತದೆ. ಪುರುಷರಿಗೆ ಸರಿಸಮಾನವಾಗಿ ಸ್ತ್ರೀಯರ ಜನಸಂಖ್ಯೆಯೂ ಇದೆ. ಜಗತ್ತಿನ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರಿದ್ದಾರೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಈ ಮೀಸಲಾತಿ ಸಹಕಾರಿಯಾಗಲಿದೆ. ಹಾಗಾಗಿ ಇದೊಂದು ಐತಿಹಾಸಿಕ ತೀರ್ಮಾನ ಎಂದು ಟ್ರಸ್ಟ್ ತಿಳಿಸಿದೆ.
ಈ ಸಂದರ್ಭದಲ್ಲಿ ಟ್ರಸ್ಟ್‍ನ ಟ್ರಸ್ಟಿ ಕಲ್ಲೂರು ಮೇಘರಾಜ್, ಹೆಚ್.ಎಂ. ಸಂಗಯ್ಯ, ಗೋಪಾಲಕೃಷ್ಣ, ಸುರೇಶ್, ಮಂಜಪ್ಪ, ಶಂಕ್ರಾ ನಾಯ್ಕ, ಟಿ.ಆರ್. ಕೃಷ್ಣಪ್ಪ, ಕೆ.ಆರ್. ಶಿವಣ್ಣ, ಬಿ.ಟಿ. ಮಂಜನಾಯ್ಕ, ಪುರದಾಳ್ ನಾಗರಾಜ್, ಚಿಕ್ಕಮಟ್ಟಿ ಗೋವಿಂದ ಸ್ವಾಮಿ, ಸೋಮಶೇಖರಯ್ಯ ಬಿ.ಟಿ. ಮುಂತಾದವರಿದ್ದರು.

Related posts

ತುಂಗಾ ನದಿ ಮಲೀನವಾಗುತ್ತಿದ್ದರೂ ಪಾಲಿಕೆ ಅತ್ಯಂತ ದಿವ್ಯ ನಿರ್ಲಕ್ಷ್ಯ- ಎಎಪಿ ಆರೋಪ.

ಸೀನಿಯರ್ ಚೇಂಬರ್ ಇಂಟರ್‍ನ್ಯಾಷನಲ್ ಸಂಸ್ಥೆ ವತಿಯಿಂದ ಪ್ರಾಂತೀಯ ಸಮ್ಮೇಳನ ಭಾವನೋತ್ಸವ.

ಸನ್ಮಾರ್ಗದಲ್ಲಿ ಜೀವನ ರೂಪಿಸಿಕೊಳ್ಳಲು ಸ್ಕೌಟ್ ಸಹಕಾರಿ- ವೈ.ಗಣೇಶ್