ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಲಕ್ಷಾಂತರ ಹೋರಾಟಗಾರರ ಶ್ರಮದಿಂದ ದೇಶ ಸ್ವತಂತ್ರ- ಜ್ಯೋತಿಕುಮಾರಿ ಕೆ.ವಿ. 

ಶಿವಮೊಗ್ಗ: ಲಕ್ಷಾಂತರ ಹೋರಾಟಗಾರ ತ್ಯಾಗ, ಪರಿಶ್ರಮದ ಫಲವಾದ ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಸಮಾನತೆಯ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕಿ ಜ್ಯೋತಿಕುಮಾರಿ ಕೆ.ವಿ. ಹೇಳಿದರು.
ನಗರದ ಬಸವಕೇಂದ್ರದಲ್ಲಿ ಸಮಾನ ಮನಸ್ಕರ ಬಳಗ ಶಿವಮೊಗ್ಗ ಹಾಗೂ ಬಸವ ಕೇಂದ್ರ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಬೆಳಕಿನಲ್ಲಿ ಸಾಂವಿಧಾನಿಕ ಮೌಲ್ಯಗಳು ವಿಷಯ ಕುರಿತು ಮಾತನಾಡಿದರು.
ಭಾರತ ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಪ್ರಮುಖ ಮೌಲ್ಯಗಳಾಗಿದ್ದು, 84 ಮೌಲ್ಯಗಳನ್ನು ಗುರುತಿಸಲಾಗಿದೆ. ಭಾರತದ ಐತಿಹಾಸಿಕ ಹಿನ್ನೆಲೆ ಗಮನಿಸಿದರೆ ಪ್ರತಿಯೊಂದು ಕಾಲ ಘಟ್ಟದಲ್ಲಿಯೂ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಬಿಂಬಿಸಿದೆ. ಶ್ರೇಷ್ಠ ಸಂಸ್ಕೃತಿಯು ಎಲ್ಲ ಕಾಲಕ್ಕೂ ಅನ್ವಯಿಸುವಂತಹ ಮೌಲ್ಯಗಳನ್ನು ಕಲಿಸಿದೆ ಎಂದು ತಿಳಿಸಿದರು.
ಬಸವಾದಿ ಶರಣರು ಅನುಭವ ಮಂಟಪದಲ್ಲಿ ಅಂದೋಲನ ರೂಪದಲ್ಲಿ ಜಾತಿ, ಧರ್ಮ ಮೀರಿದ ಸಮಾಜ ನಿರ್ಮಾಣ ಮಾಡಲು ಮೌಲ್ಯಯುತ ಅಂಶಗಳನ್ನು ತಿಳಿಸಿದರು. ಕಾಯಕ, ದಾಸೋಹ, ಸಾಮಾಜಿಕ ನ್ಯಾಯದ ಮಹತ್ವ ಸಾರಿದರು. ಅತ್ಯಮೂಲ್ಯ ಮೌಲ್ಯಗಳನ್ನು ವಚನ ಸಾಹಿತ್ಯದಲ್ಲಿ ಕಾಣಬಹುದಾಗಿದೆ ಎಂದರು.
ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಮಾತನಾಡಿ, ಸಮಾನ ಮನಸ್ಕರ ಬಳಗವು ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸುವ ಜತೆಯಲ್ಲಿ ಉತ್ತಮ ವಿಷಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸುತ್ತಿರುವುದು ಅಭಿನಂದನೀಯ ಕಾರ್ಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯ ಹಾಗೂ ಉಪನ್ಯಾಸ ಚಟುವಟಿಕೆಗಳನ್ನು ನಡೆಸಲಿ ಎಂದು ಆಶಿಸಿದರು.
ಸಮಾನ ಮನಸ್ಕರ ಬಳಗದ ಚನ್ನಬಸಪ್ಪ ನ್ಯಾಮತಿ ಮಾತನಾಡಿ, ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುವ ಉದ್ದೇಶದಿಂದ ಸಮಾನ ಮನಸ್ಕರು ಒಟ್ಟುಗೂಡಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಹಿತ್ಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಶಿಕ್ಷಕ ಸತೀಶ್ ಕೆ., ಮಾಧವ್, ವಾಣಿ ಮತ್ತು ಸಂಗಡಿಗರಿಂದ ಗಾಯನ ಕಾರ್ಯಕ್ರಮ ನಡೆಯಿತು. ನಿವೃತ್ತ ಅಭಿಯಂತರ ಚಂದ್ರಪ್ಪ, ಸಮಾನ ಮನಸ್ಕರ ಬಳಗದ ಸದಸ್ಯರಾದ ಹಸನ್‌‌ ಬೆಳ್ಳಿಗನೂಡು, ಅನಂತ ಜಿ.ಎಸ್.‌, ಶಿವಕುಮಾರ್‌, ಅಣ್ಣಪ್ಪ ಒಂಟಮಾಳಗಿ, ಬಸವನಗೌಡ, ಸತೀಶ್, ಪಾಲಾಕ್ಷಪ್ಪ,‌ ಪ್ರವೀಣ ಜವಳಿ‌, ಅಣ್ಣಪ್ಪ ಹರಳೇಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Related posts

ಬಿಜೆಪಿ ಮೈತ್ರಿ ವಿಚಾರ ಇನ್ನೂ ಸಮಯ ಇದೆ- ಮಾಜಿ ಸಿಎಂ ಹೆಚ್.ಡಿಕೆ

ಸರ್ಕಾರ ಬೀಳುತ್ತೆ ಅನ್ನೋದು ಭ್ರಮೆ: ಬಿಜೆಪಿ ನಾಯಕರಿಗೆ ವರಿಷ್ಠರ ಜೊತೆ ಮಾತನಾಡಲು ಧೈರ್ಯವಿಲ್ಲ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್.

ಮಾಜಿ ಸಿಎಂ.ದಿ. ಎಸ್ ಬಂಗಾರಪ್ಪನವರ ಹುಟ್ಟು ಹಬ್ಬ: ಹಸಿರು ಬಂಗಾರ DRS -ಪಾರ್ಕ್ “ನ ಉದ್ಘಾಟನೆ- ಪ್ರಶಾಂತ್ ದೊಡ್ಡಮನೆ