ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಸಿಎಂ ಆಗಿ ಸಿದ್ಧರಾಮಯ್ಯ ಐದು ವರ್ಷ ಪೂರೈಸುತ್ತಾರೆಯೇ..? ಕೋಡಿ ಮಠದ ಸ್ವಾಮೀಜಿ ನುಡಿದ ಭವಿಷ್ಯವೇನು..?

ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನ ಗೆಲ್ಲುತ್ತಿದ್ದಂತೆಯೇ ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಉಂಟಾಗಿ ಕೊನೆಗೆ ಹೈಕಮಾಂಡ್ ನಿಲುವಿಗೆ ತಲೆಬಾಗಿದ ಡಿಕೆ ಶಿವಕುಮಾರ್ ಅವರು ಸಿದ್ಧರಾಮಯ್ಯಗೆ ಸಿಎಂ ಕುರ್ಚಿ ಬಿಟ್ಟುಕೊಟ್ಟು ತಾವು ಡಿಸಿಎಂ ಆದರು. ಈ ಮಧ್ಯೆ  ಸಿದ್ಧರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಲಿದ್ದಾರೆಯೇ? ಈ ಪ್ರಶ್ನೆಗೆ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ   ಭವಿಷ್ಯ ನುಡಿದಿದ್ದಾರೆ.

ರಾಜ್ಯ ಸರ್ಕಾರಕ್ಕೆ ಏನೂ ತೊಂದರೆಯಿಲ್ಲ. ಆದರೆ, ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೋ ಇಲ್ಲವೋ ಎಂಬುದು 2024ರ ಲೋಕಸಭೆ ಚುನಾವಣೆಯ ನಂತರ ತೀರ್ಮಾನ ಆಗಲಿದೆ ಎಂದು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ   ಹೇಳಿದ್ದಾರೆ. ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಬರಲಿದೆ, ಏನಾಗಲಿದೆ ಎಂಬುದನ್ನು ಚುನಾವಣೆ ಸಮೀಪಿಸಿದಾಗ ತಿಳಿಸುತ್ತೇನೆ ಎಂದು ಸ್ವಾಮಿಜಿ ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ಮಳೆ ಬರಲಿದೆ ತೊಂದರೆ ಏನಿಲ್ಲ. ಹಿಂದೆ ಒಂದು ಬಾರಿ ಮಳೆ ಬಂದಂತೆ ಇನ್ನೊಂದು ಸಾರಿ ಮಳೆಯಾಗಲಿದೆ. ಮಳೆಗೇನು ತೊಂದರೆ ಆಗಲ್ಲ. ಕಾಲ ಹೇಳ್ತಿನಿ ಅಷ್ಟೇ, ಮಳೆ ಬರಲಿದೆ. ಅನ್ನಕ್ಕೆ ತೊಂದರೆಯಾಗದು ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ. ವಿಪರೀತ ಮಳೆಯಾಗುವ ಲಕ್ಷಣ ಇದೆ, ಬೇಕಾದಷ್ಟು ಮಳೆ ಬರಲಿದೆ ಎಂದೂ ಅವರು ಹೇಳಿದ್ದಾರೆ.

ಮಳೆ, ಗುಡುಗು, ಭೂಮಿ ಬಿರುಕು ಬಿಡುವುದು, ದ್ವೇಷ ಹೆಚ್ಚಾಗುವುದು, ಅಪಮೃತ್ಯು ಎಲ್ಲ ಹೆಚ್ಚಾಗಲಿವೆ. ಪ್ರಕೃತಿಯಿಂದಲೂ ಹಾನಿ ಇದೆ. ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ಗೊತ್ತಾಗಲಿದೆ. ಶ್ರಾವಣದ ಮಧ್ಯಭಾಗದ ನಂತರ ಕಾರ್ತಿಕದವರೆಗೂ ಮಳೆಯಾಗಲಿದೆ. ಮತ್ತೆ ಮಳೆಯಿಂದ ಅಪಾಯ ಆಗುವ ಲಕ್ಷಣಗಳಿವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

 

Related posts

ಕನ್ನಡ ಶಿಕ್ಷಕಿ ಫೌಜಿಯಾ ಸರಾವತ್ ರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.

ಮೈಸೂರು ರಾಜವಂಶಸ್ಥ ಯಧುವೀರ ಒಡೆಯರ್ ಅವರಿಗೆ ಸನ್ಮಾನ.

ಯುವ ಕಾಂಗ್ರೆಸ್ ಉಸ್ತುವಾರಿಗಳಾಗಿ ಉತ್ತರ ಕನ್ನಡ ಜಿಲ್ಲೆಗೆ ಎಂ ಪ್ರವೀಣ್ ಕುಮಾರ್,- ಚಿತ್ರದುರ್ಗಕ್ಕೆ ಆರ್ ಕಿರಣ್ ನೇಮಕ