ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನೈಸರ್ಗಿಕ ವಿಪತ್ತಿಗೆ ಮಾಂಸ ಭಕ್ಷಣೆಯೇ ಮೂಲ ಕಾರಣವಂತೆ: ಹೀಗೆ ಹೇಳಿದ್ದು ಯಾರು ಗೊತ್ತೆ..?

ಬೆಂಗಳೂರು: ಇತ್ತೀಚಿಗೆ ಮಾಂಸಹಾರ ಮತ್ತು ಸಸ್ಯಹಾರದ  ವಿಚಾರಗಳು ಚರ್ಚೆಗೆ ಬರುತ್ತಲೇ ಇರುತ್ತವೆ.  ಮಾಂಸಪ್ರಿಯರು ಮಾಂಸಹಾರಕ್ಕೆ ಮಾರುಹೋದರೇ ಸಸ್ಯಹಾರಿಪ್ರಿಯರು ಸಸ್ಯಹಾರಿ ಆಹಾರವನ್ನ ಇಷ್ಟಪಡುತ್ತಾರೆ. ಈ ಮಧ್ಯೆ ಮಾಂಸ ಸೇವನೆ ಬಗ್ಗೆ ಐಐಟಿ ನಿರ್ದೇಶಕರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಭೂಕುಸಿತ ಹಾಗೂ ಮೇಘ ಸ್ಫೋಟದಂತಹ ನೈಸರ್ಗಿಕ ವಿಪತ್ತು ಸಂಭವಿಸಲು ಮೂಕ ಪ್ರಾಣಿಗಳ ಹತ್ಯೆ ಹಾಗೂ ಮಾಂಸ ಭಕ್ಷಣೆಯೇ ಮೂಲಕ ಕಾರಣ ಎಂದು ಐಐಟಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಹೇಳಿದ್ದಾರೆ.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಐಐಟಿ – ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಈ ಮಾತುಗಳನ್ನಾಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಇದು ಈಗ ಪರ – ವಿರೋಧದ ಚರ್ಚೆಯನ್ನು ಸಹ ಹುಟ್ಟು ಹಾಕಿದೆ.

ಮೂಕ ಪ್ರಾಣಿಗಳ ಹತ್ಯೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನಿಸರ್ಗವೂ ಸಹ ಅವನತಿ ಹೊಂದಲಿದೆ. ಹಿಮಾಲಯ ಪ್ರದೇಶದಲ್ಲಿ ಭಾರಿ ಭೂಕುಸಿತ ಹಾಗೂ ಮೇಘ ಸ್ಪೋಟ ಸಂಭವಿಸಲು ಮಾಂಸ ಭಕ್ಷಣೆಯೇ ಕಾರಣ

ಪ್ರಾಣಿಗಳು ಮತ್ತು ನಿಸರ್ಗದ ನಡುವೆ ಸಹ ಜೀವನ ಸಂಭಂಧವಿದೆ. ಆರೆ ಇದು ನಿಮ್ಮ ಕಣ್ಣಿಗೆ ಕಾಣುವುದಿಲ್ಲ ಮೂಕ ಜೀವಿಗಳ ಹತ್ಯೆ ಮುಂದುವರೆದರೇ ನಿಸರ್ಗವೂ ಅವನತಿ ಕಾಣಲಿದೆ. ಜೊತೆಗೆ ಹಿಮಾಚಲ ಪ್ರದೇಶವೂ ಅವನತಿ ಹೊಂದಲಿದೆ ಎಂದು ಲಕ್ಷ್ಮೀಧರ್ ಹೇಳಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

 

Related posts

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ , ಕುಡಿಯುವ ನೀರು ಪೂರೈಕೆ- ಸಿಎಂ ಸಿದ್ದರಾಮಯ್ಯ ಘೋಷಣೆ.

ನಾಳೆ ಇಸ್ರೋಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಬೆಂಗಳೂರಿನಲ್ಲಿ ಮಾರ್ಗ ಬದಲಾವಣೆ.

ಅಯೋಧ್ಯೆ ರಾಮ ಮಂದಿರಕ್ಕಾಗಿ 8 ಅಡಿಯ ಬಾಲರಾಮನ ವಿಗ್ರಹ ಕೆತ್ತನೆ ಮುಗಿಸಿದ ಮೈಸೂರಿನ ಅರುಣ್‌

TOD News