ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಚುನಾವಣಾ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಅವರ ಪ್ರತಿಕ್ರಿಯೆ ಏನು ಗೊತ್ತೆ..?

 

ಬೆಂಗಳೂರು: ಯುವಕರಿಗೆ ಅವಕಾಶ ಕೊಡುವ ಸಲುವಾಗಿ  ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದೇನೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡರು ಹೇಳಿದರು.

ತಮ್ಮ ಚುನಾವಣಾ ನಿವೃತ್ತಿ ಕುರಿತು ಮಾತನಾಡಿದ ಮಾಜಿ ಸಿಎಂ ಡಿ.ವಿ ಸದಾನಂದಗೌಡ, ಪಕ್ಷದಲ್ಲಿ ಇನ್ನು ಯಾವ ಹೊಣೆ ಬೇಕಾಗಿಲ್ಲ. ಬಿಜೆಪಿ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಯುವಕರಿಗೆ ಅವಕಾಶ ಕೊಡಲು ನಿವೃತ್ತಿ ಘೋಷಣೆ  ಮಾಡಿದ್ದೇನೆ ಎಂದರು.

ನನ್ನ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ.  ಪಕ್ಷದ ಕೆಲಸ ಮಾಡಲು ಅವಕಾಶ ಕೊಟ್ಟರೇ ಸಾಕು. ನಾನು ಬಿಜೆಪಿಯಲ್ಲಿ 30 ವರ್ಷ ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಎಲ್ಲಾ ರೀತಿಯ ಸ್ಥಾನ ಪಡೆದಿದ್ದೇನೆ. ಪಕ್ಷ ಸೇರಿ  25 ವರ್ಷವಾದ ಮೇಲೆ ನಿವೃತ್ತಿಗೆ ಯೋಚನೆ ಮಾಡಿದ್ದೆ. ಆದರೆ ನಾಯಕರ ಮನವೊಲಿಕೆಗೆ ಮಣಿದು ಸ್ಪರ್ಧಿಸಿದ್ದೆ ಎಂದು ಡಿ.ವಿ ಸದಾನಂದಗೌಡ ತಿಳಿಸಿದರು.

Related posts

ಹಮಾಲರ ಜೊತೆ ಕೂಲಿ ಡ್ರೆಸ್ ಹಾಕಿಕೊಂಡು ಲಗೇಜ್ ಹೊತ್ತು ಹೆಜ್ಜೆ ಹಾಕಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ರಾಜ್ಯದ ಹಲವೆಡೆ ಒಂದು ವಾರ ಮಳೆ- ಹವಮಾನ ಇಲಾಖೆ ಮುನ್ಸೂಚನೆ.

ಸಲಿಂಗ ವಿವಾಹ ಮಾನ್ಯತೆ ವಿಚಾರವಾಗಿ ಸರ್ಕಾರ ಸಮಿತಿ ರಚಿಸಲಿ- ಸುಪ್ರೀಂಕೋರ್ಟ್ ಸಲಹೆ.