ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಸ್ವಪಕ್ಷದ ಶಾಸಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್: ಏನು ಗೊತ್ತೆ..?

ಬೆಂಗಳೂರು: ನಮ್ಮ ಪಕ್ಷದ ಯಾವ ಶಾಸಕರೂ ಕೂಡ ಪಕ್ಷದ ವಿಚಾರವನ್ನು ಮಾಧ್ಯಮದ ಮುಂದೆ ಮಾತಾಡಬಾರದು. ಅಲ್ಲದೆ ಯಾವುದೇ ಬೆಂಬಲ, ಯಾರ ಬೆಂಬಲ ವಿಚಾರವನ್ನೂ ಕೂಡ ಮಾತನಾಡಬಾರದು. ನಾನಿದ್ದೀನಿ, ಮುಖ್ಯಮಂತ್ರಿಗಳಿದ್ದಾರೆ ಎಂದು  ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಸ್ವಪಕ್ಷದ ಶಾಸಕರಿಗೆ ಖಡಕ್ ಸಂದೇಶ  ನೀಡಿದರು.

ಶಿವಕುಮಾರ್ ಒಬ್ಬರೇ ಪಕ್ಷ ಅಧಿಕಾರಕ್ಕೆ ತಂದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್,  “ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರಗಳು ಏನೇ ಇದ್ದರೂ ಶಾಸಕರು ಮುಖ್ಯಮಂತ್ರಿಗಳು ಹಾಗೂ ನನ್ನ ಬಳಿ ಚರ್ಚೆ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಮಾತನಾಡಬಾರದು” ಎಂದರು.

ಪಕ್ಷದ ಕಾರ್ಯಕರ್ತರು, ನಾವು, ನೀವು, ರಾಜ್ಯದ ಜನರು ಸೇರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬನೇ ಅಧಿಕಾರಕ್ಕೆ ತಂದಿದ್ದಾನೆ ಎಂದು ಇಂದು, ನಾಳೆ, ಮುಂದೆ, ಯಾವತ್ತಿಗೂ ಹೇಳುವುದಿಲ್ಲ” ಎಂದರು.

2.5 ವರ್ಷದಲ್ಲಿ ಕ್ಯಾಬಿನೆಟ್ ಪುನರ್ ರಚನೆ ವಿಚಾರವಾಗಿ ಮಾತನಾಡಿದ ಅವರು ನಾನು ಒಂದು ದೊಡ್ಡ ಸಂಕಟದಲ್ಲಿ ತಗಲಾಗಿಕೊಂಡಿದ್ದೇನೆ. ಪಕ್ಷದ ವಿಚಾರವಾಗಿ ಏನ್ ಬೇಕು ಅದು ಚರ್ಚೆಯಾಗಿದೆ. ಕಲವೊಂದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ. ಸದ್ಯಕ್ಕೆ ಆ ರೀತಿಯ ಮಾಹಿತಿ ನನ್ನ ಬಳಿ ಇಲ್ಲ ಎಂದರು.

ನಮ್ಮ ಹತ್ತಿರ ಬಂದು ತಿಂದು ಉಂಡು ಮಜಾ ಮಾಡಿಕೊಂಡಿರುವವರು ಅವರು, ಸಾಲ ತೀರಿಸಿಕೊಂಡು ಕುತ್ತಿಗೆ ಕುಯ್ಯಿಸಿಕೊಂಡು ಸಾಯುತ್ತಿರುವವರು ನಾವು ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಉಪಮುಖ್ಯಮಂತ್ರಿ  ಡಿಕೆ ಶೀವಕುಮಾರ್ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರ ಮಾತುಗಳಿಗೆಲ್ಲ ಸೊಪ್ಪು ಹಾಕುವ ಹಂತದಲ್ಲಿ ನಾನಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ದೇಶದ ಆಸ್ತಿ, ಜನರು ಬದುಕು ಮತ್ತು ನಮ್ಮ ಸಂಸ್ಕೃತಿ. ಅವರ ಮಗ ನಟನೆ ಮಾಡುತ್ತಾನೆ, ಇವರು ದೇವಾಲಯಗಳು, ಚರ್ಚ್, ಮಸೀದಿ ಮತ್ತು ಕ್ರೀಡೆ ಅಂತ ಸಿನಿಮಾ ತಯಾರು ಮಾಡುತ್ತಾರೆ. ಎಲ್ಲ ಮುಖ್ಯಮಂತ್ರಿಗಳು ಕೆಲವು ಸಂಘಟನೆಗಳ ಅಧ್ಯಕ್ಷರಾಗಿದ್ದರು. ನನಗೂ ಬಂದಿತ್ತು. ರಾಜಕಾರಣ ಮಾಡುವವರು ಮಾಡಲಿ. ಅವರಿಗೆ ಒಳ್ಳೆದಾಗ್ಲಿ. ಬರಗಾಲದಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನುವುದು ನಮಗೆ ಗೊತ್ತಿದೆ ಎಂದರು.

ದುಡ್ಡು ಮಾಡುವುದು, ಕೃತಕ ವಿದ್ಯುತ್ ಅಭಾವ ಸೃಷ್ಟಿ ಬಗ್ಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಿಲ್ಲ. ಪ್ರತೀ ವರ್ಷ ಶೇ 10 ರಿಂದ 15 ಹೆಚ್ಚಿಗೆ ಉತ್ಪಾದನೆ ಮಾಡಬೇಕು. ಅವರಿಗೇನಾದರು ರೈತರ ಬಗ್ಗೆ ಕಾಳಜಿ ಇದ್ದಿದ್ದರೇ ಅವರಿಗೆ ಗೊತ್ತಾಗುತ್ತಿತ್ತು. 192 ತಾಲೂಕುಗಳನ್ನು ಸುಮ್ಮನೇ ಘೋಷಣೆ ಮಾಡುತ್ತಿದ್ವಾ? ಎಂದು ಪ್ರಶ್ನಿಸಿದರು.

 

Related posts

ಕಾವೇರಿ ನೀರು ಹಂಚಿಕೆ ವಿವಾದ: ಕೇಂದ್ರ ಜಲ ಶಕ್ತಿ ಸಚಿವರ ಪ್ರತಿಕ್ರಿಯೆ ಸಕಾರಾತ್ಮಕ: ಸಿಎಂ ಸಿದ್ದರಾಮಯ್ಯ

ನ.18 ಮತ್ತು 19ರಂದು ಎರಡು ಹೊಸ ನಾಟಕಗಳ ಪ್ರದರ್ಶನ.

ನೆಹರೂ ಸ್ಮಾರಕ ಮ್ಯೂಸಿಯಂ ಇನ್ಮುಂದೆ ಪ್ರಧಾನ ಮಂತ್ರಿ ಮ್ಯೂಸಿಯಂ…