ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪುಣ್ಯಭೂಮಿ ಭಾರತದಲ್ಲಿ ಜನಿಸಿದ ನಾವೇ ಧನ್ಯರು-ಡಾ. ಧನಂಜಯ್ ಸರ್ಜಿ

ಶಿವಮೊಗ್ಗ: ಶ್ರೇಷ್ಠ ಮತ್ತು ಪುಣ್ಯ ಭೂಮಿ ಭಾರತ ದೇಶದಲ್ಲಿ ಜನಿಸಿದ ನಾವೇ ಧನ್ಯರು ಎಂದು ಸಂಸ್ಥಾಪಕರು ಸರ್ಜಿ ಗ್ರೂಪ್ ಆಫ್ ಹಾಸ್ಪಿಟಲ್ಸ್ ಸಂಸ್ಥಾಪಕ, ಮಕ್ಕಳ ತಜ್ಞ ಡಾ. ಧನಂಜಯ್ ಸರ್ಜಿ ಹೇಳಿದರು.
77 ನೇ ಸ್ವಾತಂತ್ರೋತ್ಸವ ದಿನಾಚರಣೆ ಪ್ರಯುಕ್ತ ಶಾಂತಲಾ ಸಮೂಹ ಸಂಸ್ಥೆಗಳ ವತಿಯಿಂದ ಮಾಚೇನಹಳ್ಳಿಯ ಪ್ರಾರ್ಥನಾ ಇಂಜಿನಿಯರಿಂಗ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭವ್ಯ ಭಾರತದ ಇತಿಹಾಸ, ಸ್ವಾತಂತ್ರ‍್ಯದ ಹಿನ್ನಲೆ, ಭಾರತದ ಹಿರಿಮೆ, ಗರಿಮೆ, ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ತ್ಯಾಗಮಾಡಿದ ಸಹಸ್ರಾರು ವೀರರ ಬಗ್ಗೆ ಪ್ರಸ್ತುತ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಶಾಂತಲಾ ಸಮೂಹ ಸಂಸ್ಥೆಗಳು ದೇಶ ವಿದೇಶಗಳಿಗೆ ಉತ್ತಮ ಗುಣಮಟ್ಟದ ಕ್ಯಾಸ್ಟಿಂಗ್‌ಗಳನ್ನು ಸರಬರಾಜು ಮಾಡುವುದರ ಮೂಲಕ ದೇಶದ ಆರ್ಥಿಕತೆಗೆ ತಮ್ಮದೇ ಆದ ಉತ್ತಮ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ಶಾಂತಲಾ ಸಮೂಹ ಸಂಸ್ಥೆ ಕಟ್ಟಿ ಬೆಳೆಸುವುದರೊಂದಿಗೆ ಸಾವಿರಾರು ಉದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದ ಎಸ್.ರುದ್ರೇಗೌಡ ಮತ್ತು ತಂಡದ ಸಾಧನೆ ವಿಶೇಷ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಗತಿ ಸ್ಟೀಲ್ ಕ್ಯಾಸ್ಟಿಂಗ್ಸ್ ಸಂಸ್ಥೆ ಉಪಾಧ್ಯಕ್ಷ ಶಾಂತಪ್ಪ ಕೆ.ಸಿ. ಮಾತನಾಡಿ, ಸಹಸ್ರಾರು ವೀರರ ತ್ಯಾಗ ಬಲಿದಾನಗಳಿಂದ ಭಾರತ ದೇಶ ಸ್ವಾತಂತ್ರ್ಯಯವಾಯಿತು. ಭವಿಷ್ಯ ಸದೃಢ ಭಾರತ ನಿರ್ಮಾಣ ನಮ್ಮ ಜವಾಬ್ದಾರಿ ಎಂದು ಹೇಳಿದರು.
77ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಶಾಂತಲಾ ಸಮೂಹ ಸಂಸ್ಥೆಗಳ ಮಹಿಳಾ ಮತ್ತು ಪುರುಷ ಉದ್ಯೋಗಿಗಳಿಗೆ ಏರ್ಪಡಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ರಾಣಿ, ಮಧು.ಎಸ್, ಸೋಮಶೇಖರ್.ಸಿ.ಆರ್, ಉಮೇಶ್.ಕೆ.ಆರ್, ಸಿಂಧುಶ್ರೀ.ವಿ, ನಾಗರಾಜ್.ವಿ.ಡಿ, ಶೃತಿ ಹಿರೇಮಠ, ಮ್ಯಾನೇಜರ್ ನಂಜುಂಡೇಶ್ವರ ಎಚ್.ಬಿ, ಶಾಂತಲಾ ಸಮೂಹ ಸಂಸ್ಥೆಗಳ ನಿರ್ದೇಶಕರು, ಸಿಬ್ಬಂದಿ ಮತ್ತು ಉದ್ಯೋಗಿಗಳು ಮತ್ತಿತರರು ಉಪಸ್ಥಿತರಿದ್ದರು.

Related posts

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಚಾಂಪಿಯನ್ 

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮನೋ ವೈದ್ಯರು ಮತ್ತು ಸಿಬ್ಬಂದಿಗಳ ಪಾತ್ರ ಮಹತ್ತರ-ಡಾ. ಚಂದ್ರಶೇಖರ್

ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..