ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ದಲಿತ ಸಿಎಂ ವಿಚಾರದ ಬಗ್ಗೆ  ಕಾದು ನೋಡಿ – ಸಚಿವ ಕೆ.ಎಚ್ ಮುನಿಯಪ್ಪ.

ಹುಬ್ಬಳ್ಳಿ: ಅಧಿಕಾರ ಹಂಚಿಕೆ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿದ್ದು ಐದು ವರ್ಷ ನಾನೇ ಸಿಎಂ ಎಂದು ಸಿದ್ಧರಾಮಯ್ಯ ಹೇಳಿಕೆ ಬೆನ್ನಲ್ಲೆ ಸಚಿವರು ಮತ್ತು ಕಾಂಗ್ರೆಸ್ ಮುಖಂಡರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಈ ಮಧ್ಯೆ ದಲಿತ ಸಿಎಂ ಕೂಗು ಕೂಡ ಕೇಳಿ ಬರುತ್ತಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ದಲಿತ ಸಿಎಂ ಬಗ್ಗೆ ಕಾದು ನೋಡಿ ಎಂದಿದ್ದಾರೆ.

ಒಬ್ಬರು ಸಿಎಂ ಇರುವಾಗ ನಾನು ಮಾತನಾಡಲು ಆಗಲ್ಲ. ಸಿಎಂ  ಸ್ಥಾನ ಖಾಲಿ ಇಲ್ಲ. ಸಮುದಾಯದ ಬೇಡಿಕೆ ಸಮಂಜಸವಾಗಿದೆ. ಸಿಎಂ ಸ್ಥಾನ ಖಾಲಿ ಇದ್ದಾಗ ಮಾತನಾಡಬಹುದು ಸದ್ಯ ಸಿಎಂ ಸಿದ್ಧರಾಮಯ್ಯ  ಡಿಸಿಎಂ ಡಿಕೆ ಶಿವಕುಮಾರ್ ಇದ್ದಾರೆ. ಎಲ್ಲವೂ ಹೈಕಮಾಂಡ್ ತೀರ್ಮಾನ  ಮಾಡಲಿದೆ ಎಂದು  ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.

Related posts

ಒಂದು ದಿನ ಮಳೆ ಆಗದಿದ್ರೆ ಸರ್ಕಾರಕ್ಕೆ 1 ಸಾವಿರ ಕೋಟಿ ನಷ್ಟ- ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ.

ಹೆಂಡತಿ- ಮಕ್ಕಳ ಮುಂದೆಯೇ ಎಂಎಲ್ ಸಿ 3ನೇ ಮದುವೆ : ಸಾಕ್ಷಿಯಾಗಿ ಸಹಿ ಹಾಕಿದ ಸಾಥ್ ನೀಡಿದ 2ನೇ ಪತ್ನಿ.

ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ-ಡಿಸಿಎಂ ಡಿಕೆ ಶಿವಕುಮಾರ್ ಕಿಡಿ.