ಕನ್ನಡಿಗರ ಪ್ರಜಾನುಡಿ
ಕ್ರೀಡೆಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸೆ.2 ಮತ್ತು 3ರಂದು ವಾಲಿಬಾಲ್ ಪಂದ್ಯಾವಳಿ

ಶಿವಮೊಗ್ಗ: ಯುನೈಟೆಡ್ ಸ್ಪೋಟ್ರ್ಸ್ ಅಂಡ್ ಕಲ್ಚರ್ ಕ್ಲಬ್ ವತಿಯಿಂದ ಶಿವಮೊಗ್ಗ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಬಾಲಕರಿಗಾಗಿ ವಾಲಿಬಾಲ್ ಪಂದ್ಯಾವಳಿಯನ್ನು ನೆಹರು ಕ್ರೀಡಾಂಗಣದಲ್ಲಿ ಸೆ.2 ಮತ್ತು 3ರಂದು ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಕೆ.ಎಸ್. ಶಶಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪಂದ್ಯಾವಳಿಯು ಶಿವಮೊಗ್ಗ ವಾಲಿಬಾಲ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಯೋಗದಲ್ಲಿ ನಡೆಯಲಿದೆ. ಹಗಲು ಮತ್ತು ಹೊನಲು ಬೆಳಕಿನ ಈ ಪಂದ್ಯಾವಳಿಯನ್ನು ಸೆ. 2ರ ಸಂಜೆ 6-30ಕ್ಕೆ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಆದಿಚುಂಚನಗಿರಿ ಶ್ರೀಗಳಾದ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್,ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್ ಅರುಣ್, ಮೇಯರ್ ಶಿವಕುಮಾರ್ ಮುಂತಾದ ಗಣ್ಯರು ಉಪಸ್ಥಿತರಿರುವರು ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಸುಮಾರು 30 ತಂಡಗಳು ಹೆಸರು ನೊಂದಾಯಿಸಿಕೊಂಡಿವೆ. ನಮ್ಮ ಕ್ಲಬ್‍ನ ವಾಲಿಬಾಲ್ ಕ್ರೀಡಾಪಟು ದಿ. ಸರ್ದಾರ್ ಜಾಫರ್ ಹೆಸರಿನಲ್ಲಿ ವಿಜೇತರಿಗೆ ಟ್ರೋಫಿ ನೀಡಲಾಗುವುದು.ಜೊತೆಗೆ ಕ್ರಮವಾಗಿ 7777, 5555, 33333, 2222 ರೂ.ಗಳ ನಗದು ಬಹುಮಾನ ನೀಡಲಾಗುವುದು.ಕ್ರೀಡಾಪಟುಗಳಿಗೆ ಉಚಿತ ಊಟ ಮತ್ತು ಹೊರಗಿನ ತಂಡಗಳಿಗೆ ವ್ಯವಸ್ಥೆ ಸಹ ಮಾಡಲಾಗಿದ್ದು, ಆಸಕ್ತ ತಂಡಗಳು ಸೆ.2ರಂದು ಮಧ್ಯಾಹ್ನ 12 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು ಎಂದರು.
ಸಂಸ್ಥೆಯ ಮತ್ತು ಪಂದ್ಯಾವಳಿಯ ಸಂಚಾಲಕ ಡಾ.ಪ್ರಸನ್ನ ಎಸ್.ಹೆಚ್. ಮಾತನಾಡಿ, ಈ ಪಂದ್ಯಾವಳಿಯು ತುಂಬಾ ಆಕರ್ಷಕವಾಗಿದ್ದು, ಪೈಪೋಟಿ ಇದೆ. ನಾಲ್ಕು ಬಹುಮಾನಗಳ ಜೊತೆಗೆ ಬೆಸ್ಟ್ ಆಲ್‍ರೌಂಡ್ ಆಟಗಾರ, ಪಾಸರ್, ಹಿಟ್ಟರ್ ಮುಂತಾದ ಹಲವು ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿಗಳನ್ನು ಕೂಡ ನೀಡಲಾಗುವುದು ಎಂದರು.
ಸಮಾರೋಪ ಸಮಾರಂಭ ಸೆ. 3ರ ಸಂಜೆ 7-30ಕ್ಕೆ ನಡೆಯಲಿದ್ದು, ಆದಿಚುಂಚನಗಿರಿ ಶ್ರೀಗಳು ಸಾನಿಧ್ಯ ವಹಿಸಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಅಪೆಕ್ಷ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್‍ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಷಡಾಕ್ಷರಿ, ಪ್ರಮುಖರಾದ ಎಸ್.ಕೆ. ಮರಿಯಪ್ಪ, ಎಂ. ಶ್ರೀಕಾಂತ್, ಡಾ. ಧನಂಜಯ ಸರ್ಜಿ, ಭಾಸ್ಕರ್ ಜಿ. ಕಾಮತ್, ದಿನೇಶ್ ಸೇರಿದಂತೆ ಹಲವರು ಇರುವರು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕ್ಲಬ್ಬಿನ ಪದಾಧಿಕಾರಿಗಳಾದ ಎಸ್.ವಿಜಯಕುಮಾರ್, ಸಚಿನ್ ಪೂಜಾರಿ, ಸಂದೀಪ್, ಸಿಮ್ಸನ್ ಮುಂತಾದವರು ಇದ್ದರು.

Related posts

ಮೂತ್ರ ಸೋರುತ್ತಿದ್ದ ಮಹಿಳೆಗೆ ರೋಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ ಎನ್‍ಯು ಆಸ್ಪತ್ರೆಯ ವೈದ್ಯರ ಚಿಕಿತ್ಸೆ

ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ:  ಸಿದ್ಧರಾಮಯ್ಯ ನಮ್ಮ ನಾಯಕರು, ಅವರೇ ನಮ್ಮ ಸಿಎಂ- ಸಂಸದ ಡಿ.ಕೆ ಸುರೇಶ್.

ವೈವಿಧ್ಯ ಸಾಂಸ್ಕೃತಿಕ ಪರಂಪರೆ ಹೊಂದಿರುವ ದೇಶ ಭಾರತ- ಶ್ವೇತಾ ಆಶಿತ್