ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಿಂದೂಗಳನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಕೆಲಸ ಹಿಂದಿನಿಂದಲೂ ಮಾಡುತ್ತಿದೆ-ಕೆ.ಆರ್. ಸುನೀಲ್

ಸೊರಬ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಹಿಂದೂಗಳನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಕೆಲಸ ಹಿಂದಿನಿಂದಲೂ ಮಾಡುತ್ತಿದೆ. ತ್ಯಾಗದ ಪರಂಪರೆ ನಮ್ಮದು ಎನ್ನುವುದನ್ನು ಇಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಕೆ.ಆರ್. ಸುನೀಲ್ ಹೇಳಿದರು.
ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳದಿಂದ ಹಮ್ಮಿಕೊಂಡ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೂ ಧರ್ಮದ ಮೇಲೆ ನೂರಾರು ವರ್ಷಗಳ ಕಾಲ ಪರಕೀಯರ ದಾಳಿ ನಡೆದಾಗಲೂ ಧರ್ಮವೂ ಈ ನೆಲದಲ್ಲಿ ನೆಲೆಯೂರಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನವಿದೆ. ಇದನ್ನೂ ಇಂದಿನ ಪೀಳಿಗೆಗೆ ತಿಳಿಸುವುದು ಆದ್ಯ ಕರ್ತವ್ಯವಾಗಿದೆ. ಹಿಂದೂ ಧರ್ಮದ ಮೇಲೆ ಅನೇಕ ಆಕ್ರಮಣಗಳಾಗಿವೆ. ಇಸ್ಲಾಂ ಕ್ರೈಸ್ತರ ದಾಳಿಯನ್ನು ಶೌರ್ಯ ಮತ್ತು ತ್ಯಾಗದ ಮೂಲಕ ಹಿರಿಯರು ಎದುರಿಸಿದ್ದಾರೆ. ಹಿಂದೂ ಸಮಾಜದ ಯುವಕರನ್ನು ಬಡಿದೆಬ್ಬಿಸಲು ಶೌರ್ಯ ಜಾಗರಣ ರಥ ಯಾತ್ರೆ ದೇಶಾದ್ಯಂತ ನಡೆಯುತ್ತಿದೆ ಎಂದರು.
ವಿಹಿಂಪ ಕ್ಷೇತ್ರೀಯ ಸತ್ಸಂಗ ಪ್ರಮುಖ್ ಮಹಾಬಲೇಶ್ವರ ರಾವ್ ಮಾತನಾಡಿ, ಭಾರತದ ಮೇಲೆ ಅಕ್ರಮಣ ನಡೆದಾಗಲೂ ಹಿಂದೂ ಧರ್ಮ ಉಳಿದಿದೆ. ಹಿಂದೂ ಧರ್ಮದು ಸೋಲಿನ ಇತಿಹಾಸವಲ್ಲ ಪರಾಕ್ರಮದ ಇತಿಹಾಸ ಎನ್ನುವುದನ್ನು ಸಮಾಜಕ್ಕೆ ತಿಳಿಸುವುದು ಅಗ್ಯವಿದೆ. ಅನ್ಯಧರ್ಮಿಯರಿಂದ ಹಿಂದೂ ಸಮಾಜದ ಮೇಲೆ ಅನೇಕ ಅಕ್ರಮಗಳಾಗಿವೆ. ಜಗತ್ತಿನಲ್ಲಿ ಹಿಂದೂಗಳಿಗೆ ಉಳಿದಿರುವುದು ಭಾರತ ಮಾತ್ರ. ದೇಶ ಹಿಂದೂಸ್ತಾನವಾಗಬೇಕು. ವಿಹಿಂಪ ಸ್ಥಾಪನೆಯಾಗಿ ಅರವತ್ತು ವರ್ಷ ಹಾಗೂ ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯುತ್ತಿದೆ ಎಂದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮುಂಭಾಗ ಶೌರ್ಯ ಜಾಗರಣ ರಥಯಾತ್ರೆಯನ್ನು ಸ್ವಾಗತಿಸಿ, ರಾಜಬೀದಿಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕøತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಬಜರಂಗದಳ ವಿಭಾಗ ಸಂಯೋಜಕ ರಾಜೇಶ್‍ಗೌಡ, ಜಿಲ್ಲಾ ಸಹ ಸಂಯೋಜಕ್ ಶಶಿಕುಮಾರ್, ತಾಲೂಕು ಸಹ ಸಂಯೋಜಕ ಮಣಿಕಂಠ, ನಗರ ಸಂಯೋಜಕ ಎಸ್.ಎನ್. ಶರತ್, ವಿಹಿಂಪ ಸಾಗರ ಜಿಲ್ಲಾ ಕಾರ್ಯದರ್ಶಿ ಎಚ್.ಎಲ್. ಚಂದನ್, ಜಿಲ್ಲಾ ಮಂದಿರ ಅರ್ಚಕ ಪರೋಹಿತ ಸಂಪರ್ಕ ಪ್ರಮುಖ್ ಎಂ.ಎಸ್. ಕಾಳಿಂಗ್‍ರಾಜ್, ಮಾತೃ ಮಂಡಳಿಯ ವಾಸಂತಿ ನಾವುಡಾ, ವೀಣಾ ಶ್ರೀಧರ್, ದುರ್ಗಾ ವಾಹಿನಿ ಕೋಮಲಾ ಪುರಾಣಿಕ್, ಪ್ರಮುಖರಾದ ಡಾ.ಎಚ್.ಇ. ಜ್ಞಾನೇಶ್, ಪಾಣಿ ರಾಜಪ್ಪ, ಸಂಜೀವ್ ಆಚಾರ್, ನಾಗರಾಜ ಗುತ್ತಿ, ಸಿ.ಪಿ. ಈರೇಶ್‍ಗೌಡ, ಮಹೇಶ್ ಖಾರ್ವಿ, ಮಹೇಶ್ ಗೋಖಲೆ, ಆಶೀಕ್ ನಾಗಪ್ಪ, ನಿರಂಜನ್, ನೆಮ್ಮದಿ ಶ್ರೀಧರ್, ಅಮೃತ, ಕೆ.ವಿ. ವಿನಾಯಕ, ರಾಘು ಮಡಿವಾಳ, ಉಮಾಶಂಕರ, ಪ್ರವೀಣ, ಆನಂದ, ಅಭಿ ಹೊಯ್ಸಳ ಸೇರಿದಂತೆ ಇತರರಿದ್ದರು.

Related posts

ಸರ್ಕಾರ ಮತ್ತು ಸಿಎಂ ಸಿದ್ಧರಾಮಯ್ಯ ಬಗ್ಗೆ ಹಗುರ ಮಾತು ತರವಲ್ಲ- ಬಿ.ಕೆ ಹರಿಪ್ರಸಾದ್ ವಿರುದ್ಧ ಎಸ್.ಪಿ. ಶೇಷಾದ್ರಿ ಅಸಮಾಧಾನ.

ಜನತಾ ದರ್ಶನ : ಜಿಲ್ಲೆಯಲ್ಲಿ 328 ಅರ್ಜಿ ಸ್ವೀಕಾರ

ರಾಜ್ಯದಲ್ಲಿ ದಸರಾ ರಜೆ ಅಕ್ಟೋಬರ್ 31ರವರೆಗೆ ವಿಸ್ತರಣೆಗೆ ಆಗ್ರಹ..!