ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಗುರುಗಳಿಂದ ಕಲಿತ ವಿದ್ಯೆ ಶಾಶ್ವತ- ಶೃತಿ ರಾಘವೇಂದ್ರನ್

ಶಿವಮೊಗ್ಗ: ಪಾಶ್ಚಿಮಾತ್ಯ ಕಲೆಯಿಂದ ದೇಶಿಯ ಸಂಗೀತ ಕಲೆಯ ಕಲಿಕೆಯ ಸಂಖ್ಯೆಯು ಕಡಿಮೆ ಆಗುತ್ತಿದೆ ಎಂದು ಬೆಂಗಳೂರಿನ ಶೃತಿ ಲಯ ಸಂಸ್ಥೆಯ ಸಂಗೀತ ಗುರು, ಆಕಾಶವಾಣಿ ಚಲನಚಿತ್ರ ಹಿನ್ನೆಲೆ ಗಾಯಕಿ ಶೃತಿ ರಾಘವೇಂದ್ರನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಪ್ರಪಂಚದಲ್ಲಿ ಮಕ್ಕಳಿಗೆ ಕೂಡಲೇ ಹಾಡು ಹೇಳಲು ಬರಬೇಕು. ಬೇಗ ವೇದಿಕೆ ಸಿಗುವಂತೆ ಆಗಬೇಕು. ಟಿವಿಯಲ್ಲಿ ಬರಬೇಕು ಎಂಬ ಆಲೋಚನೆ ಇದೆ. ಆದರೆ ಪಾಶ್ಚಿಮಾತ್ಯ ಕಲೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿರುವುದರಿಂದ ದೇಶಿಯ ಸಂಗೀತ ಕಲೆ ಕಲಿಕೆಯು ಕುಂಠಿತವಾಗುತ್ತಿದೆ ಎಂದು ತಿಳಿಸಿದರು.

ಸಂಗೀತಕ್ಕೆ ತನ್ನದೇ ಆದ ಶಾಸ್ತಿçÃಯ ಸ್ಥಾನಮಾನಗಳಿದ್ದು, ಗುರುಗಳಿಂದ ಕಲಿತ ವಿದ್ಯೆಯು ಶಾಶ್ವತ ಆಗಿರುತ್ತದೆ. ಶ್ರದ್ಧೆ, ಏಕಾಗ್ರತೆ ಹಾಗೂ ಇಚ್ಛಾಶಕ್ತಿಯಿಂದ ಕಲಿಯಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿ ಸಂಗೀತ ಸಾಧಕರಿದ್ದಾರೆ. ನಾನು ಸಹ ಶಿವಮೊಗ್ಗದವಳು ಎನ್ನಲು ಹೆಮ್ಮೆ ಎಂದರು.

ಮಕ್ಕಳು ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಬೇಕು. ಧ್ವನಿ ಸಂಸ್ಕರಣೆ ಆಗಬೇಕು. ಒಳ್ಳೆಯ ಸಂಗೀತ ಗುರುವಿನಿಂದ ಅಭ್ಯಾಸ ಮಾಡಬೇಕು. ಒಳ್ಳೆಯ ಕಲಾವಿದರಾಗಲು ನಿರಂತರ ಪರಿಶ್ರಮ ವಹಿಸಿ ಕೆಲಸ ಮಾಡಬೇಕು. ನಂತರ ಉತ್ತಮ ಕಲಾವಿದರಾಗಿ ರೂಪುಗೊಳ್ಳಲಬಹುದಾಗಿದೆ ಎಂದು ಹೇಳಿದರು.

ನಿರೂಪಕ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಸಂಗೀತದಿAದ ಖಿನ್ನತೆ ದೂರವಾಗುತ್ತದೆ, ಮನಸ್ಸಿಗೆ ಸಂತೋಷವಾಗುತ್ತದೆ. ಸಂಗೀತ ಸಾಧಕನ ಸ್ವತ್ತು, ಕಲೆ ಮನುಷ್ಯನಿಗೆ ಬೆಲೆ ತರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಊರಿನ ಪ್ರತಿಭೆ ಉನ್ನತ ಮಟ್ಟಕ್ಕೆ ಬೆಳೆದು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿರುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆ ವತಿಯಿಂದ ಶೃತಿ ರಾಘವೇಂದ್ರನ್ ಅವರಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು. ರೋಟರಿ ಮಿಡ್‌ಟೌನ್ ಸದಸ್ಯ ಜಿ.ಎನ್.ಎನ್.ಮೂರ್ತಿ, ಅನುರಾಧಾ ಮೂರ್ತಿ, ನಮ್ಮ ಟಿವಿಯ ಶ್ರೀಕಾಂತ್, ಸುಪ್ರಿಯಾ ಗೌತಮಿ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

Related posts

ಜೆಡಿಎಸ್-ಬಿಜೆಪಿ  ಮೈತ್ರಿ  ಬಗ್ಗೆ ದೆಹಲಿಯಲ್ಲೇ ಚರ್ಚೆಯಾಯಿತೇ..? -ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಸ್ಪಷ್ಟನೆ ಏನು..?

ಜಿಲ್ಲಾ ಮಟ್ಟದ ಖೋ – ಖೋ :  ತಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆ ಬಾಲಕಿಯರಿಗೆ ಪ್ರಥಮ ಸ್ಥಾನ. 

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಉಚ್ಛಾಟನೆ: ಹೆಚ್.ಡಿ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ.