ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಪ್ರತಿ ಐವರಲ್ಲಿ ಇಬ್ಬರು ಭಾರತೀಯರಿಗೆ ಆನ್ ಲೈನ್ ಶಾಪಿಂಗ್ ಒಲವು.

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ  ಆನ್ ಲೈನ್ ಶಾಪಿಂಗ್  ಸಂಸ್ಕೃತಿ  ಹೆಚ್ಚಾಗುತ್ತಿದ್ದು,  ಬಹಳ ಜನರು ಅಂಗಡಿ ಮುಂಗಟ್ಟು, ಮಾರುಕಟ್ಟೆ ಬದಲು ಇಕಾಮರ್ಸ್ ತಾಣಗಳ ಮೂಲಕವೇ ಶಾಪಿಂಗ್ ಮಾಡಲು ಇಚ್ಛಿಸುತ್ತಿದ್ದಾರೆ. ಉತ್ತಮ ಬೆಲೆ, ಡಿಸ್ಕೌಂಟ್, ಸುಲಭ ಬಳಕೆ ಇತ್ಯಾದಿ ಕಾರಣಕ್ಕೆ ಜನರು ಆನ್ಲೈನ್ ಶಾಪಿಂಗ್ನತ್ತ ವಾಲುತ್ತಿದ್ದಾರೆ. 

ಈ ನಡುವೆ ಭಾರತದ ಐದರಲ್ಲಿ ಇಬ್ಬರು ಗ್ರಾಹಕರು ಈ ಹಬ್ಬದ ಋತುವಿನಲ್ಲಿ ಡೈರೆಕ್ಟ್-ಟು-ಕನ್ಸ್ಯೂಮರ್ (ಡಿ2ಸಿ) ವ್ಯಾಪಾರಿಗಳಿಂದ ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೊಸ ವರದಿಯೊಂದು ತಿಳಿಸಿದೆ.

ಹಬ್ಬದ ಋತುವಿನಲ್ಲಿ ಶೇ.41 ರಷ್ಟು ಗ್ರಾಹಕರು ಆನ್ ಲೈನ್ ಶಾಪಿಂಗ್ ಯೋಜನೆಗಳನ್ನು ಹೊಂದಿದ್ದಾರೆ ಎಂದು ವರದಿಯು ಕಂಡುಕೊಂಡಿದೆ. ಶೇ.33 ರಷ್ಟು ಜನರು ಫ್ಯಾಷನ್ ಮತ್ತು ಪರಿಕರಗಳನ್ನು ಖರೀದಿಸಲು ಯೋಜಿಸಿದ್ದರೆ, ಶೇ. 23 ರಷ್ಟು ಪ್ರಯಾಣಕ್ಕಾಗಿ, ಶೇ. 11 ರಷ್ಟು ವೈಯಕ್ತಿಕ ಆರೈಕೆಗಾಗಿ ಬಳಸುತ್ತಾರೆ ಎನ್ನಲಾಗಿದೆ.

ಸುಮಾರು ಶೇ. 70 ರಷ್ಟು ಡೈರೆಕ್ಟ್-ಟು-ಕನ್ಸ್ಯೂಮರ್ ವ್ಯಾಪಾರಿಗಳು ಹಬ್ಬದ ಋತುವಿನಲ್ಲಿ ಮಾರಾಟದಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ.

ವ್ಯಾಪಾರಿಗಳು ಗಣನೀಯವಾಗಿ ಉತ್ಪಾದನೆ ಮತ್ತು ಉಗ್ರಾಣದ ಸಾಮರ್ಥ್ಯಗಳನ್ನು ಸೇರಿಸುತ್ತಿದ್ದಾರೆ. ಜೊತೆಗೆ ಮಾನವಶಕ್ತಿಯನ್ನು ಹೆಚ್ಚಿಸುವುದು ಮತ್ತು ಮಾರ್ಕೆಟಿಂಗ್ಗೆ ಖರ್ಚು ಮಾಡುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

ಆನ್ ಲೈನ್ ಶಾಪಿಂಗ್ ಮಾಡುವವರು ಅತಿಹೆಚ್ಚು ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಸ್ಮಾರ್ಟ್ಫೋನ್, ಸ್ಮಾರ್ಟ್ವಾಚ್, ಲ್ಯಾಪ್ಟಾಪ್ ಇತ್ಯಾದಿಯವು ಎಲೆಕ್ಟ್ರಾನಿಕ್ ವಸ್ತುಗಳನ್ನ ಖರೀದಿಸುತ್ತಾರೆ.

 

Related posts

ಕರ್ನಾಟಕಕ್ಕೆ ಮತ್ತೆ ಹಿನ್ನೆಡೆ: ತಮಿಳುನಾಡಿಗೆ ನೀರು ಹರಿಸುವಂತೆ CWMA ಆದೇಶ.

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ.

ಬಗರ್‍ಹುಕುಂ ಮತ್ತು ಶರಾವತಿ ಸಂತ್ರಸ್ತರ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು-ತೀ.ನ. ಶ್ರೀನಿವಾಸ್