ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ್ರು ಇಬ್ಬರು ಸ್ನೇಹಿತರು

ಪಂಜಾಬ್: ಯಾವ ಸಮಯದಲ್ಲಿ ಯಾರಿಗೆ ಅದೃಷ್ಟ ಒಲಿದು ಬರುತ್ತದೆ ಎಂಬುದನ್ನ ಹೇಳಲು ಅಸಾಧ್ಯ. ಜೀವನ ನಿರ್ವಹಿಸಲು ಕಷ್ಟಪಡುವಂತಹ ಬಡಜನರು ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳಾದ ಘಟನೆಯನ್ನ ಹಲವು ಬಾರಿ ನಾವು ಕೇಳಿದ್ದೇವೆ ಇದೀಗ ಅಂತಹದ್ದೇ ಘಟನೆಯೊಂದು ಪಂಜಾಬ್ ನಲ್ಲಿ ನಡೆದಿದೆ.

ಹೌದು, ಕಳೆದ 14 ವರ್ಷಗಳಿಂದ ಸತತವಾಗಿ ಲಾಟರಿ ಖರೀದಿಸುತ್ತಿದ್ದ ಇಬ್ಬರು ಇಬ್ಬರು ಸ್ನೇಹಿತರು 200 ರೂ ನೀಡಿ ಖರೀದಿಸಿದ್ದ ಲಾಟರಿಯಿಂದ 1.5 ಕೋಟಿ ರೂ. ಹಣವನ್ನ ತಮ್ಮದಾಗಿಸಿಕೊಂಡಿದ್ದಾರೆ. ಪಂಜಾಬ್ನ ಅಬೋಹರ್ ನಗರದ ಇಬ್ಬರು ಸ್ನೇಹಿತರಾದ ಜೋಗಿಂದರ್ ಮತ್ತು ಆತನ ಸ್ನೇಹಿತ ರಮೇಶ್ ಸಿಂಗ್ಗೆ ಅದೃಷ್ಟ ಖುಲಾಯಿಸಿದ್ದು ₹ 1.5 ಕೋಟಿ ಲಾಟರಿ ಗೆದ್ದಿದ್ದಾರೆ. ಈ ಇಬ್ಬರು ಕಳೆದ 14 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಘಂಟಾಘರ್ನ ಅಂಗಡಿಯಲ್ಲಿ ಈ ಇಬ್ಬರು 100 ರೂ ನೀಡಿ 2 ಲಾಟರಿ ಟಿಕೆಟ್ ಖರೀದಿಸಿದ್ದರು. ಭಾನುವಾರ ಸ್ನೇಹಿತರು ಖರೀದಿಸಿದ್ದ ಆ ಟಿಕೆಟ್ ಇಬ್ಬನ್ನು ರಾತ್ರೋರಾತ್ರಿ ಮಿಲಿಯನೇರ್ ಗಳಾಗಿ ಪರಿವರ್ತಿಸಿದೆ.

ಇದೇನು ಜೋಗಿಂದರ್ ಮತ್ತು ರಮೇಶ್ ಅವರ ಮೊದಲ ಲಾಟರಿ ಗೆಲುವು ಅಲ್ಲ. ಈ ಸ್ನೇಹಿತ ಜೋಡಿಯು ಈ ಹಿಂದೆ 45,000 ಮತ್ತು ಒಮ್ಮೆ 20,000 ಮೊತ್ತವನ್ನು ಗೆದ್ದಿದ್ದಾಗಿ ತಿಳಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕೋಟಿ ಲೆಕ್ಕದಲ್ಲಿ ಗೆದ್ದಿದ್ದಾರೆ.

ಜೋಗಿಂದರ್ ಅವರು ಸಣ್ಣ ಬಟ್ಟೆ ಅಂಗಡಿಯನ್ನು ಹೊಂದಿದ್ದಾರೆ ಮತ್ತು ಲಾಟರಿ ಟಿಕೆಟ್ಗಳನ್ನು ಕೂಡ ಮಾರಾಟ ಮಾಡುತ್ತಾರೆ. ಘಂಟಾಘರ್ನಲ್ಲಿರುವ ಜ್ಞಾನ್ ಲಾಟರಿ ಕೇಂದ್ರಕ್ಕೆ ಜೋಗಿಂದರ್ ಮತ್ತು ರಮೇಶ್ ಟಿಕೆಟ್ ಸಹಿತ ಬಂದಿದ್ದು, ಅವರನ್ನು ಸ್ಥಳೀಯರು ಅಭಿನಂದಿಸುತ್ತಿದ್ದ ಸಂತೋಷದ ದೃಶ್ಯಗಳು ಕಂಡುಬಂದವು. ಪಟ್ಟಣದ ಹೊಸ ಲಕ್ಷಾಧಿಪತಿಗಳೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಲು ಜನರು ಸಾಲುಗಟ್ಟಿ ನಿಂತಿದ್ದರು. ಇಬ್ಬರು ಸ್ನೇಹಿತರಿಬ್ಬರು ಸಿಹಿ ಹಂಚಿ ಸಂಭ್ರಮವನ್ನು ಹಂಚಿಕೊಂಡರು.

ರಮೇಶ್ ಅವರು ತಮ್ಮ ಲಾಟರಿಯಿಂದ ಬರುವ ಹಣದಲ್ಲಿ ಮಕ್ಕಳ ಜೀವನದಲ್ಲಿ ಸೆಟ್ಲ್ ಮಾಡಲು ಉಪಯೋಗಿಸುವುದಾಗಿ ಹಾಗೂ ಸಣ್ಣ ವ್ಯಾಪಾರ ಮಾಡುವುದಕ್ಕೆ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

1968 ರಲ್ಲಿ ಸ್ಥಾಪಿತವಾದ ಪಂಜಾಬ್ ರಾಜ್ಯ ಲಾಟರಿಗಳ ನಿರ್ದೇಶನಾಲಯವು ಪಂಜಾಬ್ ಸರ್ಕಾರದ ಹಣಕಾಸು ಇಲಾಖೆಯ ಒಂದು ವಿಭಾಗವಾಗಿದೆ. ತನ್ನ ವೆಬ್ ಸೈಟ್ ನಲ್ಲಿ, ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ನಿಜವಾದ ಮತ್ತು ಪಾರದರ್ಶಕ ಯೋಜನೆಗಳನ್ನು ನಡೆಸುವುದು ಮತ್ತು ಉತ್ತೇಜಿಸುವುದು ಲಾಟರಿಗಳ ಗುರಿಯಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ..

 

Related posts

ಡಿವಿಎಸ್‌ನಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ರಾಗಿಗುಡ್ಡದಲ್ಲಿ ಗಲಾಟೆ ಪ್ರಕರಣ: ನಾಲ್ವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್.

ಜೀವನದ ಮಿಡಿತಗಳಿಗೆ ತಿರುವು ನೀಡುವ ಸಣ್ಣಕಥೆಗಳು-ಹಿರಿಯ ಸಾಹಿತಿ ಪ್ರೊ.ಎಂ.ಬಿ. ನಟರಾಜ