ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನಕ್ಕೆ ಭಾರತ ಆಗ್ರಹ: ಟರ್ಕಿ ಬೆಂಬಲ

ನವದೆಹಲಿ:  ಬಹುಕಾಲದ ಬೇಡಿಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ನೀಡುವಂತೆ  ಭಾರತ ಮತ್ತೆ ಆಗ್ರಹಿಸಿದ್ದು ಭಾರತದ ಬೆಂಬಲಕ್ಕೆ ಟರ್ಕಿಯೂ ಸಹ ನಿಂತಿದೆ.

ಭಾರತವು  ತನಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ನೀಡಬೇಕೆಂದು ದಶಕಗಳಿಂದ ಬೇಡಿಕೆ ಇಟ್ಟಿದೆ. ಆರು ರಾಷ್ಟ್ರಗಳ ಈ ಸಮಿತಿಯಲ್ಲಿನ ಚೀನಾ ವಿರೋಧ ಕಾರಣಕ್ಕಾಗಿ ಈವರೆಗೂ ಭಾರತದ ಬೇಡಿಕೆ ಈಡೇರಿಲ್ಲ. ಅಮೆರಿಕ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ಬೇಡಿಕೆಯನ್ನು ಬೆಂಬಲಿಸಿವೆ.ಈಗ ಈ ಸಾಲಿಗೆ ಟರ್ಕಿ (Turkey) ಕೂಡ ಸೇರಿದೆ.

ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಟರ್ಕಿ ಈಗ ಭಾರತದ ಬೆಂಬಲಿಗೆ ನಿಂತಿರುವುದು ಪಾಕಿಸ್ತಾನಕ್ಕೆ (Pakistan) ಸಹಿಸದಾಗಿದೆ. ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಮಾತನಾಡಿ, ಭಾರತವು ಭದ್ರತಾ ಸಮಿತಿಯ ಕಾಯಂ ಸದಸ್ಯ ರಾಷ್ಟ್ರವಾದರೆ ಟರ್ಕಿ ಸಂತೋಷ ಪಡುತ್ತದೆ ಎಂದು ಹೇಳಿದ್ದಾರೆ.

ಭಾರತದಂಥ ರಾಷ್ಟ್ರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ದೊರಕಿದರೆ ನಮಗೆ ಹೆಮ್ಮೆಯಾಗುತ್ತದೆ. ನಿಮಗೆ ತಿಳಿದಿರುವ ಹಾಗೆ ಜಗತ್ತು 5 ರಾಷ್ಟ್ರಗಳಿಂದ ವಿಶಾಲವಾಗಿದೆ’ ಎಂದು ಹೇಳಿದ್ದಾರೆ.

ಜಗತ್ತು ಐದು ದೊಡ್ಡ ರಾಷ್ಟ್ರಗಳಿಗಿಂತಲೂ(ಭದ್ರತಾ ಸಮಿತಿ ಸದಸ್ಯ ದೇಶಗಳು) ದೊಡ್ಡದಾಗಿದೆ. ವಿಶ್ವ ಸಂಸ್ಥೆಯ ಎಲ್ಲ 195 ರಾಷ್ಟ್ರಗಳು ನಿಯಮತವಾಗಿ ಭದ್ರತಾ ಸಮಿತಿಯ ಸದಸ್ಯರಾಷ್ಟ್ರಗಳಾಗುವ ಅವಕಾಶವನ್ನು ಕಲ್ಪಿಸಿಕೊಡಬೇಕು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

ಭಾರತದಂತಹ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆದರೆ ನಾವು ಹೆಮ್ಮೆಪಡುತ್ತೇವೆ. ನಿಮಗೆ ತಿಳಿದಿರುವಂತೆ, ಪ್ರಪಂಚವು ಐದು ರಾಷ್ಟ್ರಗಳಿಗಿಂತಲೂ ದೊಡ್ಡದಾಗಿದೆ. ಐದು ರಾಷ್ಟ್ರಗಳಿಗಿಂತಲೂ ಜಗತ್ತು ದೊಡ್ಡದಾಗಿದೆ ಎಂದರೆ ಕೇವಲ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಚೀನಾ ಮತ್ತು ರಷ್ಯಾಗಳಲ್ಲ, ನಾವು ಕೇವಲ ಈ ಐದು ರಾಷ್ಟ್ರಗಳೇ ಭದ್ರತಾ ಸಮಿತಿಯ ಸದಸ್ಯ ರಾಷ್ಟ್ರಗಳಾಗಿರಬೇಕು ಎಂದು ಬಯಸುವುದಿಲ್ಲ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

 

Related posts

ಶೀಘ್ರದಲ್ಲೇ ಡಿಜಿಟಲ್ ಗ್ರಂಥಾಲಯ ಮರು ಪ್ರಾರಂಭ : ಸಚಿವ ಎಸ್. ಮಧು ಬಂಗಾರಪ್ಪ.

ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕಲೀಮ್ ಉಲ್ಲಾ ಪ್ರಥಮ ಸ್ಥಾನ

ಮಹಿಳಾ ಮೀಸಲಾತಿ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವುದು ಸ್ವಾಗತಾರ್ಹ- ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ