ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಿಗೆ ಸನ್ಮಾನ.

ಶಿವಮೊಗ್ಗ: ಲಯನ್ಸ್ ಕ್ಲಬ್ ಶಿವಮೊಗ್ಗ ವತಿಯಿಂದ ಗುತ್ಯಪ್ಪ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.
ಶಿಕ್ಷಕರ ದಿನಾಚರಣೆ ಅಂಗವಾಗಿ ಮುಖ್ಯೋಪಾಧ್ಯಾಯಿನಿ ರುಕ್ಮಿಣಿ ಹಾಗೂ ಸಹ ಶಿಕ್ಷಕಿ ಭಾಗೀರಥಿ ಅವರನ್ನು ಸನ್ಮಾನಿಸಿ ಮಾತನಾಡಿದ ಲಯನ್ಸ್ ಕ್ಲಬ್‍ನ ರಾಜಮೋಹನ್ ಹೆಗಡೆ, ಶಿಷ್ಯರ ಶ್ರೇಯಸ್ಸನ್ನು ಬಯಸುವ ಏಕೈಕ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಮಾತ್ರ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾರ್ಪಡಿಸುವಲ್ಲಿ ಶಿಕ್ಷಕರ ಪಾತ್ರ ಹೆಚ್ಚಾಗಿದೆ. ಸಮಾಜದಲ್ಲಿ ಶಿಕ್ಷಕರನ್ನು ಗೌರವದಿಂದ ಕಾಣುವಂತಾಗಬೇಕು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಭಾಗೀರಥಿ, ಸಂಘ ಸಂಸ್ಥೆಗಳು ಶಿಕ್ಷಕರನ್ನ ಗೌರವಿಸಿದಾಗ ಮತ್ತಷ್ಟು ಸ್ಫೂರ್ತಿ ಬರುತ್ತದೆ. ಗುರು ಪರಂಪರೆಯ ಶ್ರೇಷ್ಠತೆಯನ್ನು ಸ್ಮರಿಸಿದಂತಾಗುತ್ತದೆ. ಲಯನ್ಸ್ ಕ್ಲಬ್‍ನವರು ಸರ್ಕಾರಿ ಶಾಲೆಗಳ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ನಮ್ಮ ಶಾಲೆಗೂ ಕೂಡ ಹಲವು ಉಪಕರಣಗಳನ್ನು ನೀಡಿದ್ದಾರೆ ಎಂದರು.
ಎಸ್‍ಡಿಎಂಸಿ ಅಧ್ಯಕ್ಷ ಅಮೀರ್ ಪಾμÁ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ. ಬಿರಾದಾರ್, ಜೋಸೆಫ್ ಸಾಂತಮಯರ್, ಟಿ.ಹುಸೇನ್, ಡಾ. ಪರಮೇಶ್ವರಪ್ಪ, ಗಿರೀಶ್ ನಾಯ್ಕ್, ಪಾಲ್ ಗೋವೀಸ್, ಐರಿನ್ ಗೋವೀಸ್ ಮುಂತಾದವರಿದ್ದರು.

Related posts

2024ರ ಲೋಕಸಭೆ ಚುನಾವಣೆ: ಒಟ್ಟಾಗಿ ಹೋರಾಡಲು INDIA ಮೈತ್ರಿಕೂಟ ನಿರ್ಧಾರ.

ಎಫ್ ಡಿಎ, ಎಸ್ ಡಿಎ ನೇಮಕಾತಿಗಾಗಿ ಕಾದು ಕುಳಿತ ಲಕ್ಷಾಂತರ ಆಕಾಂಕ್ಷಿಗಳು: ಅರ್ಜಿ ಕರೆಯುವುದು ಯಾವಾಗ..?

ದಸರಾ ಮೆರವಣಿಗೆಯಲ್ಲಿ ಆನೆಯ ಮಾವುತರು ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವ.