ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯಶಿವಮೊಗ್ಗ

ಇಂದು ಸಂಜೆ ಶಂಕರಘಟ್ಟದಲ್ಲಿ 217 ನೇ ಸಾಹಿತ್ಯ ಹುಣ್ಣಿಮೆ ಸಂಭ್ರಮ

*ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪ್ರತಿ ತಿಂಗಳು ಹುಣ್ಣಿಮೆಯ ದಿನ ಏರ್ಪಡಿಸುವ* *ಮನೆ-ಮನ-ಸಾಹಿತ್ಯ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆ ಇಂದು ಸಂಜೆ ಸೆಪ್ಟೆಂಬರ್ 28*
*ರಂದು ಗುರುವಾರ ಸಂಜೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ*
*ಸಾಹಿತ್ಯ ಹುಣ್ಣಿಮೆ 217 ನೆಯ ತಿಂಗಳ ಕಾರ್ಯಕ್ರಮವನ್ನು ಬಿ.ಆರ್.ಪಿ. ಪಕ್ಕದ ಶಂಕರಘಟ್ಟ ದಲ್ಲಿರುವ ದೀನಬಂಧು ಸೇವಾ ಟ್ರಸ್ಟ್ ಇವರ ಸಹಯೋಗದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಸಂಭ್ರಮದಲ್ಲಿ ಏರ್ಪಡಿಸಲಾಗಿದೆ. ಶಂಕರಘಟ್ಟದ ನಿಮಿಷಾಂಭ ಕನ್ವೆನ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ.*
*ಸಂಜೆ 5 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಸಮಿತಿ ರಚನೆಗಾಗಿ ಸಮಾಲೋಚನೆ ಸಭೆ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ನೇತೃತ್ವದಲ್ಲಿ ನಡೆಯಲಿದೆ. ತಾಲ್ಲೂಕು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಂ. ರಮೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.*
*ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ದಲ್ಲಿ ಶಾಸಕರಾದ ಬಿ. ಕೆ. ಸಂಗಮೇಶ್ವರ ಅವರನ್ನು ಅಭಿನಂದಿಸಲಾಗುವುದು. ಸಹಕಾರಿ ಮುತ್ಸದ್ಧಿ ಡಾ. ಆರ್. ಎಂ. ಮಂಜುನಾಥ ಗೌಡ ಅವರು ಉದ್ಘಾಟಿಸಲಿದ್ದಾರೆ. ಸಾಹಿತಿಗಳು, ಚಿಂತಕರಾದ ಡಾ. ಪ್ರಶಾಂತ ನಾಯಕ ಅವರು ಉಪನ್ಯಾಸ ನೀಡಲಿದ್ದಾರೆ. ಮುಖಂಡರಾದ ಎಂ. ಶ್ರೀಕಾಂತ್, ಗ್ರಾ.ಪಂ. ಅಧ್ಯಕ್ಷರಾದ ಮಂಜುಳಮ್ಮ, ಸಾಹಿತಿಗಳು, ತಾ. ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ದಾಳೇಗೌಡರು, ಮುಖ್ಯ ಅತಿಥಿಗಳು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದ ರಘುರಾಮ ದೇವಾಡಿಗ ಅವರಿಗೆ ಸನ್ಮಾನ ಕಾರ್ಯಕ್ರಮವಿದೆ.*
*ನಮ್ಮೊಂದಿಗೆ ಶಿವಮೊಗ್ಗ ತಾ. ಕಸಾಪ ಅಧ್ಯಕ್ಷರಾದ ಮಹಾದೇವಿ, ಜೈ ಕರ್ನಾಟಕ ಸಂಘದ ಶಶಿಕುಮಾರ್, ತಾ ಕಸಾಸಾಂ ವೇದಿಕೆ ಅಧ್ಯಕ್ಷರಾದ ಸುಧಾಮಣಿ, ತಾ. ಕಜಾಪ ಅಧ್ಯಕ್ಷರಾದ ರೇವಣಪ್ಪ ಭಾಗವಹಿಸಲಿದ್ದಾರೆ.*
*ಕಾರ್ಯಕ್ರಮದಲ್ಲಿ ಹಾಡು, ಹಾಸ್ಯ, ಕವನ, ಹನಿಗವನ, ಕಥೆ, ವಿಚಾರ ಎಲ್ಲವೂ ಒಳಗೊಂಡಿದೆ. ಹಾಡುಗಾರರಾದ ಪ್ರಸನ್ನ ಎನ್, ಆರ್. ನಾಗೇಶ್, ಸೋಮಶೇಖರ್ ಹಾಡುಹೇಳಲಿದ್ದಾರೆ. ಉಪನ್ಯಾಸಕ ಡಾ. ಜಿ. ಆರ್. ಲವ ಕಥೆ ಹೇಳುತ್ತಾರೆ. ಡಾ. ಸಿದ್ದೇಶ್ ನೆಲ್ಲಿಕಟ್ಟೆ, ಗುಣ, ಚೈತ್ರಾ ಕಾಳನಕಟ್ಟೆ, ಲೋಕೇಶ್ ಕುಮಾರ್, ಸಂಪತ್, ಸಂದೀಪ್ ಎಲ್., ಗುರುಶಾಂತಾ, ಮಂಜುನಾಥ ಸ್ವಾಮಿ, ಪೂಜಾ, ಹರ್ಷಿತಾ, ಕು. ಆಶಾ, ಪ್ರಕಾಶ್, ಗಿರೀಶ್, ಮಧು, ಸಿದ್ಧರಾಮ ಅವರುಗಳು ಕವನ, ಹನಿಗವನ ವಾಚಿಸಲಿದ್ದಾರೆ.*
*ಕಸಾಪ ಹೋಬಳಿ ಸಮಿತಿಯ ಸಮಾಲೋಚನೆ ಮತ್ತು ಸಾಹಿತ್ಯ ಹುಣ್ಣಿಮೆ ೨೧೭ ನೆಯ ತಿಂಗಳ ಕಾರ್ಯಕ್ರಮ ದಲ್ಲಿ ಕನ್ನಡ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.*

Related posts

ಜಾತಿಗಣತಿಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷ: ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಲಿ-ಶಾಮನೂರು ಶಿವಶಂಕರಪ್ಪ ಆಗ್ರಹ.

ಮೂರು ಡಿಸಿಎಂ ಸ್ಥಾನ ಸೃಷ್ಠಿಗೆ ಹೈಕಮಾಂಡ್ ಗೆ ಪತ್ರ ಬರೆಯುವೆ- ಸಚಿವ ಕೆ.ಎನ್ ರಾಜಣ್ಣ.

ಮೈಸೂರು ಕಾಗದ ಕಾರ್ಖಾನೆ ಪುನಾರಂಭಕ್ಕೆ ಸಚಿವ ಎಂ ಬಿ ಪಾಟೀಲ್ ಹೆಜ್ಜೆ: ಸಭೆ ನಡೆಸಿ ಚರ್ಚೆ…