ಕನ್ನಡಿಗರ ಪ್ರಜಾನುಡಿ
ಕ್ರೀಡೆದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಇಂದಿನಿಂದ ಏಕದಿನ ವಿಶ್ವಕಪ್ ಸಮರ: ಇಂದು ಅಂಗ್ಲೋ-ಕಿವಿಸ್ ಕದನ.

ಬೆಂಗಳೂರು : ಇಂದು ವಿಶ್ವಕಪ್ ಕ್ರಿಕೆಟ್’ಗೆ ಅಧಿಕೃತ ಚಾಲನೆ ಸಿಗಲಿದೆ. ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಡಲಿವೆ. ನವೆಂಬರ್ 19 ರವರೆಗೆ ಕ್ರಿಕೆಟ್ ಕದನ ನಡೆಯಲಿದೆ.

ಇಂದು ವಿಶ್ವಕಪ್ ಪಂದ್ಯಕ್ಕೆ ಸರಳವಾಗಿ ಚಾಲನೆ ನೀಡಲಾಗುತ್ತಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ಟೀಂ ನ್ಯೂಜಿಲೆಂಡ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಸಚಿನ್ ತೆಂಡೂಲ್ಕರ್ 2023ರ ವಿಶ್ವಕಪ್ ಟ್ರೋಫಿಯೊಂದಿಗೆ ಕ್ರೀಡಾಂಗಣಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ವೇಳೆ ಎಲ್ಲಾ 10 ತಂಡದ ನಾಯಕರು ಉಪಸ್ಥಿತರಿಲಿದ್ದಾರೆ.

ಅದ್ಧೂರಿ ಕಾರ್ಯಕ್ರಮ ಇಲ್ಲ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ಕೈಬಿಟ್ಟಿದೆ. ಕೊನೆಗಳಿಗೆಯಲ್ಲಿ ಏಕಾಏಕಿ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಸ್ಟಾರ್ ನಟರ ವೇದಿಕೆ ಕಾರ್ಯಕ್ರಮ, ಲೇಸರ್ ಲೈಟಿಂಗ್ ಮೂಲಕ ಅದ್ಧೂರಿ ಸಮಾರಂಭದ ಯೋಜನೆ ರೂಪಿಸಿದ್ದ ಬಿಸಿಸಿಐ ಕೊನೆ ಗಳಿಗೆಯಲ್ಲಿ ಇದನ್ನು ಕೈಬಿಟ್ಟಿದೆ.

ಇಂದಿನಿಂದ ನವೆಂಬರ್ 19ರವರೆಗೆ ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಡಲಿವೆ. ಅಭಿಮಾನಿಗಳಿಗೆ ಇನ್ನು ಒಂದು ತಿಂಗಳು ಕ್ರಿಕೆಟ್ ಹಬ್ಬ ಮನರಂಜನೆಯ ರಸದೌತಣ ಸಿಗಲಿದೆ.

Related posts

ಅತ್ಯಾಚಾರ ಬೆದರಿಕೆ ಆರೋಪ: ನಟ ನಿರ್ಮಾಪಕ ವೀರೇಂದ್ರ ಬಾಬು ಅರೆಸ್ಟ್.

ಬೊಮ್ಮಾಯಿ ಸರ್ಕಾರ ಇದ್ದಾಗ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿಲ್ವಾ..?- ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು.

ಬಿಜೆಪಿ ನಾಯಕರು ದೆಹಲಿಗೆ ಹೋಗಿ ಪ್ರಧಾನಿಗೆ ಒತ್ತಡ  ಹೇರಲಿ- ಡಿಸಿಎಂ ಡಿ.ಕೆ ಶಿವಕುಮಾರ್ ಲೇವಡಿ.