ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಮಾರಾಟವಾಯ್ತು 20 ಕೋಟಿ ರೂ ಮೌಲ್ಯದ ಟಿಪ್ಪು ಸುಲ್ತಾನ್ ಖಡ್ಗ.

ಬೆಂಗಳೂರು: ಸ್ಥಳೀಯ ಕ್ರಿಸ್ಟೀಸ್ ಸಂಸ್ಥೆ ನಡೆಸಿದ ಹರಾಜಿನಲ್ಲಿ ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್ಗೆ ಸೇರಿದ್ದ ರತ್ನಗಳು ಮತ್ತು ಸುಂದರವಾದ ಖಡ್ಗವೊಂದು 1 ಕೋಟಿ ರು.ಗೆ ಮಾರಾಟವಾಗಿದೆ.

ಈ ಎರಡೂ ವಸ್ತುಗಳು ಸೇರಿ 15ರಿಂದ 20 ಕೋಟಿ ರು.ಗೆ ಮಾರಾಟವಾಗಬಹುದು ಎಂಬ ನಿರೀಕ್ಷೆ ಇತ್ತಾದರೂ, ನಿರೀಕ್ಷೆಗೆ ತಕ್ಕ ದರದಲ್ಲಿ ಎರಡೂ ವಸ್ತುಗಳು ಮಾರಾಟವಾಗಿಲ್ಲ.    ಈ ಎರಡೂ ವಸ್ತುಗಳನ್ನು ಖರೀದಿ ಮಾಡಿದವರ ಹೆಸರನ್ನು ಹರಾಜು ಪ್ರಕ್ರಿಯೆ ನಡೆಸಿದ ಕ್ರಿಸ್ಟೀಸ್ ಸಂಸ್ಥೆ ಬಹಿರಂಗಪಡಿಸಿಲ್ಲ.

ಪ್ರಸಿದ್ಧ ಬ್ರಿಟಿಷ್ ಹರಾಜು ಸಂಸ್ಥೆಯಾದ ಕ್ರಿಸ್ಟೀಸ್ ಹರಾಜಿನಲ್ಲಿ ಟಿಪ್ಪು ಖಡ್ಗ ಹರಾಜಾಗದೇ  ಹಾಗೆಯೇ ಉಳಿದಿತ್ತು. ಟಿಪ್ಪುವಿನ ಈ ಖಡ್ಗದ ಮೌಲ್ಯ 1.5 ಮಿಲಿಯನ್ ಪೌಂಡ್ (15 ಕೋಟಿ ರೂ.) ಮತ್ತು 2 ಮಿಲಿಯನ್ ಪೌಂಡ್ (20 ಕೋಟಿ ರೂ.) ಎಂದು ಅಂದಾಜಿಸಲಾಗಿತ್ತು.

ಶ್ರೀರಂಗಪಟ್ಟಣದ ಪತನದ ನಂತರ, ಈ ಖಡ್ಗವನ್ನು ಭಾರತದ ಮಾಜಿ ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಚಾರ್ಲ್ಸ್ ಕಾರ್ನ್ವಾಲಿಸ್ಗೆ ಉಡುಗೊರೆಯಾಗಿ ನೀಡಲಾಗಿತ್ತು.

ಮೇ ತಿಂಗಳಲ್ಲಿ ಬೊನ್ಹಾಮ್ಸ್ನ ಲಂಡನ್ ಹರಾಜಿನಲ್ಲಿ ಟಿಪ್ಪುವಿನ ಬೆಡ್ ಚೇಂಬರ್ ಖಡ್ಗವು 14 ಮಿಲಿಯನ್ ಪೌಂಡ್ (141 ಕೋಟಿ ರೂ.) ಗೆ ಮಾರಾಟವಾಯಿತು. ಅಂತಿಮವಾಗಿ ಟಿಪ್ಪುವಿನ ನಗರಕ್ಕೆ ಮುತ್ತಿಗೆ ಹಾಕಿದ ಮೇಜರ್ ಜನರಲ್ ಬೇರ್ಡ್ ಖಡ್ಗವನ್ನು ಸ್ವೀಕರಿಸಿದ್ದರು.

ಆಂಗ್ಲೋ- ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನಿಗೆ ಸೋಲಾದ ಬಳಿಕ ಈ ವಸ್ತುಗಳು ಭಾರತವನ್ನು ಆಳುತ್ತಿದ್ದ ಬ್ರಿಟಿಷರ ಪಾಲಾಗಿದ್ದವು. ಬಳಿಕ ಇವು ಕ್ರಿಸ್ಟೀನ್ ಹರಾಜು ಸಂಸ್ಥೆಯ ಪಾಲಾಗಿದ್ದವು.

ಟಿಪ್ಪು ಹುಲಿ ಕೊಲ್ಲುವ ಫೋಟೋ ನಿಷೇಧಕ್ಕೆ ನೆಟ್ಟಿಗರ ಆಗ್ರಹ

ಹುಲಿ ಉಗುರಿನ ಆಭರಣ ಹೊಂದಿರುವ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಟಿಪ್ಪು ಸುಲ್ತಾನ್ ಹುಲಿ ಜತೆಗೆ ಘರ್ಷಣೆಗಿಳಿದ ಫೋಟೋ ವೈರಲ್ ಆಗುತ್ತಿದ್ದು, ಅದನ್ನು ನಿಷೇಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಲಾಗುತ್ತಿದೆ.

ಹುಲಿ ಉಗುರಿನ ಆಭರಣ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಟರ ವಿರುದ್ಧ ದೂರುಗಳು ದಾಖಲಾಗುತ್ತಿವೆ. ಅದರ ಬೆನ್ನಲ್ಲೇ ಇದೀಗ ಟಿಪ್ಪು ಸುಲ್ತಾನ್ ಹುಲಿ ಜತೆಗೆ ಘರ್ಷಣೆಗಿಳಿದ ಫೋಟೋವನ್ನು ನಿಷೇಧಿಸುವ ಆಗ್ರಹ ಕೇಳಿಬರುತ್ತಿದೆ. ಟಿಪ್ಪು ಸುಲ್ತಾನ್ ಹುಲಿಯನ್ನು ಕೊಲ್ಲುವ ಫೋಟೋದಿಂದ ಹುಲಿ ಕೊಲ್ಲಲು ಜನರಿಗೆ ಉತ್ತೇಜನ ನೀಡಿದಂತಾಗುತ್ತದೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ.

 

Related posts

ಟ್ವಿಟ್ಟರ್ ಬಳಕೆದಾರರೇ ಗಮನಿಸಿ : ಇನ್ಮುಂದೆ ಸಿಗುತ್ತೆ ಆಡಿಯೋ ವಿಡಿಯೋ ಕಾಲ್ ಸೌಲಭ್ಯ..

ಭಾರತದ ಹಸಿರು ಕ್ರಾಂತಿಯ ಹರಿಕಾರ M.S ಸ್ವಾಮಿನಾಥನ್ ನಿಧನ

ಮೂರು ಡಿಸಿಎಂ ಹುದ್ದೆ ಬೇಡಿಕೆ ಅಭಿಪ್ರಾಯಕ್ಕೆ ನಾನು ಬದ್ಧ- ಸಚಿವ ಕೆ.ಎನ್ ರಾಜಣ್ಣ.