ಕನ್ನಡಿಗರ ಪ್ರಜಾನುಡಿ
ಕ್ರೈಮ್ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ವಕೀಲರೊಬ್ಬರ ಮೇಲೆ ಗಂಭೀರ ಸ್ವರೂಪದ  ಹಲ್ಲೆ ಆರೋಪ: ಮೂವರು ಪೊಲೀಸ್ ಸಿಬ್ಬಂದಿಗಳು ಅಮಾನತು.

ಚಿಕ್ಕಮಗಳೂರು:  ವಕೀಲರೊಬ್ಬರ ಮೇಲೆ ಗಂಭೀರ ಸ್ವರೂಪವಾಗಿ ಹಲ್ಲೆ ಮಾಡಿದ ಆರೋಪದ ಮೇಲೆ ಮೂವರು ಪೊಲೀಸ್ ಸಿಬ್ಬಂದಿಗಳನ್ನ ಅಮಾನತು ಮಾಡಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರ ಆಮ್ಟೆ ಆದೇಶಿಸಿದ್ದಾರೆ.

ವಕೀಲ ಪ್ರೀತಮ್ ಎಂಬುವವರು ಹಲ್ಲೆಗೊಳಗಾದವರು. ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ವಿಕ್ರ ಆಮ್ಟೆ ,  ನಿನ್ನೆ ಸಂಜೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಹೆಲ್ಮಟ್ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಪ್ರೀತಮ್ (ಅನ್ನುವವರ ಮೇಲೆ ಗಂಭೀರ ಸ್ವರೂಪದ  ಹಲ್ಲೆ ನಡೆಸಿರುವ ಒಬ್ಬ ಪೊಲೀಸ್ ಇನ್ಸ್ ಪೆಕ್ಟರ್, ಒಬ್ಬ ಎಎಸ್ ಐ, ಒಬ್ಬ ಹೆಡ್ ಕಾನ್ ಸ್ಟೇಬಲ್ ಹಾಗೂ ಮೂವರು ಪೊಲೀಸ್ ಪೇದೆಗಳನ್ನು ವಿರುದ್ಧ ಐಪಿಸಿ 307, 324, 504 ಮತ್ತು 506 ಸೆಕ್ಷನ್ ಗಳ ಅಡಿ ಎಫ್ ಐ ಆರ್ ದಾಖಲಿಸಿಕೊಂಡು ಅಮಾನತು ಮಾಡಲಾಗಿದೆ. ಹಾಗೆಯೇ ಮೂವರ ವಿರುದ್ದ ಇಲಾಖಾ ತನಿಖೆ ನಡೆಸುವ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಕೀಲ ಪ್ರೀತಮ್ ಅವರನ್ನು ಭೇಟಿಯಾಗಿ ಚಿಕ್ಕಮಗಳೂರಿನ ಡಿವೈ ಎಸ್ ಪಿ ಹೇಳಿಕೆ ಪಡೆದುಕೊಂಡ ಬಳಿಕ ಕ್ರಮ ಜರುಗಿಸಲಾಗಿದೆ, ತಮ್ಮ ದೂರಿನಲ್ಲಿ ವಕೀಲರು ಇಬ್ಬರ ಹೆಸರು ಮಾತ್ರ ಹೇಳಿದ್ದು ಇನ್ನಿತರರಿಂದ ಹಲ್ಲೆಯಾಗಿದೆ  ಎಂದು ಹೇಳಿದ್ದಾರೆ ಎಂದು ಎಸ್ಪಿ ವಿಕ್ರಮ ಆಮ್ಟೆ ತಿಳಿಸಿದರು.

Related posts

ವ್ಯಾಜ್ಯಮುಕ್ತ ರಾಜ್ಯಕ್ಕಾಗಿ ಮುಂದಾದ ಸರ್ಕಾರ: ಶೀಘ್ರ ಬರಲಿವೆ ಹಳ್ಳಿಕೋರ್ಟ್ ಗಳು..

ಜಗದೀಶ್.ಜಿ.ಶೇಠ್ ಗೆ ಏಕತಾ ಸಮಾಜ ಸೇವಾಶ್ರೀ ಪ್ರಶಸ್ತಿ.

ಕಾವೇರಿ ನೀರು ಹಂಚಿಕೆ ವಿವಾದ: ಕೇಂದ್ರ ಜಲ ಶಕ್ತಿ ಸಚಿವರ ಪ್ರತಿಕ್ರಿಯೆ ಸಕಾರಾತ್ಮಕ: ಸಿಎಂ ಸಿದ್ದರಾಮಯ್ಯ