ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕಾರ್ಮಿಕ’ರಿಗೆ ಗಣೇಶ ಹಬ್ಬದ ಭರ್ಜರಿ ಗಿಫ್ಟ್: ಕನಿಷ್ಠ ವೇತನ 31,000ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ  ಗೌರಿ-ಗಣೇಶ ಹಬ್ಬದ ಭರ್ಜರಿ ಗಿಫ್ಟ್ ನೀಡಿದ್ದು,  ಶೀಘ್ರದಲ್ಲೇ ಕನಿಷ್ಠ ವೇತನ ಪರಿಷ್ಕರಣೆಗೆ ನಿರ್ಧಾರ ಮಾಡಿದೆ.

ಕಾರ್ಮಿಕರ ಕನಿಷ್ಠ ವೇತನ 31,000 ರೂ.ಗೆ ಹೆಚ್ಚಳ ಮಾಡಲು  ನಿರ್ಧರಿಸಿದೆ.    ರಾಜ್ಯದಲ್ಲಿ 70 ವಲಯಗಳಲ್ಲಿ ಕಾರ್ಮಿಕರು ದುಡಿಯುತ್ತಿದ್ದು, ಅವರಿಗೆ ಕನಿಷ್ಠ ವೇತನ ಕೂಡ ಸಿಗುತ್ತಿಲ್ಲ. ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇದೇ ವಾರದಲ್ಲಿ ಕನಿಷ್ಠ ವೇತನ ಜಾರಿಗೆ ಸಂಬಂಧ ಮಂಡಳಿಯನ್ನು ರಚನೆ ಮಾಡಿ, ಕ್ರಮವಹಿಸೋದಕ್ಕೆ ಮುಂದಾಗಿದೆ.

2017ರ ನಂತರ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಆಗಿಲ್ಲ.  ಈ ಹಿಂದಿನ ಸರ್ಕಾರದ ಅವಧಿಯಲ್ಲಿ ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಆಗ ಶೇ.10ರಷ್ಟು ಮಾತ್ರವೇ ವೇತನ ಪರಿಷ್ಕರಣೆ ಮಾಡಲಾಗಿತ್ತು. ಆದರೇ ಇದಕ್ಕೆ ಕಾರ್ಮಿಕ ಸಂಘಟನೆಗಳು ಒಪ್ಪದೇ, ಕೋರ್ಟ್ ಮೆಟ್ಟಿಲೇರಿ, ಅದಕ್ಕೆ ತಡೆ ಕೂಡ ತರಲಾಗಿತ್ತು.

ಇದೀಗ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕನಿಷ್ಠ ವೇತನವನ್ನು ಕಾರ್ಮಿಕರಿಗೆ 31,000 ರೂ.ಗಳಿಗೆ ನಿಗದಿ ಪಡಿಸೋದಾಗಿ ಹೇಳಿದ್ದಾರೆ. ಅದರಂತೆ ಕನಿಷ್ಠ ವೇತನ ನಿಗದಿ ಸಂಬಂಧ ಮಂಡಳಿಯನ್ನು ರಚಿಸಿ, ಪರಿಷ್ಕರಣೆಗೆ ಕ್ರಮವಹಿಸೋದಾಗಿ ತಿಳಿಸಿದ್ದಾರೆ. ಇದರಂತೆ ಕನಿಷ್ಠ ವೇತನ ಕಾರ್ಮಿಕರಿಗೆ ಜಾರಿಯಾಗಿದ್ದೇ ಆದಲ್ಲಿ, ರಾಜ್ಯದಲ್ಲಿನ ಸುಮಾರು 1.30 ಕೋಟಿ ಕಾರ್ಮಿಕರಿಗೆ ಅನುಕೂಲವಾಗಲಿದೆ.

 

Related posts

ಕಾಂಗ್ರೆಸ್ಸಿನ ಅಡಿಪಾಯ ಸೇವಾದಳ: ಸಿಎಂ ಸಿದ್ದರಾಮಯ್ಯ ನುಡಿ

ದೇಶದಲ್ಲೇ ಅತ್ಯಂತ ಶುದ್ಧಗಾಳಿ ಇರುವ ರಾಜ್ಯ ಕರ್ನಾಟಕ: ಪಟ್ಟಿಯಲ್ಲಿ ಅಗ್ರಸ್ಥಾನ

ಮಡಿಕೇರಿಯ ಗಾಂಧಿ ಮೈದಾನದಲ್ಲಿ 7 ದಿನಗಳ ಕಾಲ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ

TOD News