ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’: ದೇವರ ಗುಡ್ಡದಲ್ಲಿ ವರ್ಷದ ‘ಭವಿಷ್ಯವಾಣಿ’ ಕಾರಣಿಕ

ಹಾವೇರಿ: ರಾಜ್ಯದ ಐತಿಹಾಸಿಕ ಶ್ರೀ ಕ್ಷೇತ್ರ ದೇವರಗುಡ್ಡದಲ್ಲಿ ದಸರಾ ಹಬ್ಬದ ವೇಳೆ ನಡೆಯುವ ಕಾರ್ಣಿಕೋತ್ಸವದಲ್ಲಿ ದೈವವಾಣಿ ನುಡಿಯುವ ಗೊರವಪ್ಪ “ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ.

ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’ ಎಂದು ಸುಕ್ಷೇತ್ರ ದೇವರ ಗುಡ್ಡದಲ್ಲಿ ಮಾಲತೇಶ ದೇವರ ಗೊರವಯ್ಯ ಕಾರಣಿಕ ನುಡಿದಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ನಾಗಪ್ಪಜ್ಜ ಉರ್ಮಿ ಗೊರವಯ್ಯ ಕಾರಣಿಕ ನುಡಿದಿದ್ದಾರೆ.     

ಪ್ರತಿ ವರ್ಷ ದಸರಾ ಹಬ್ಬದ ಆಯುಧ ಪೂಜೆಯೆಂದು ಕಾರಣಿಕ ನುಡಿಯುತ್ತಾರೆ. 9 ದಿನ ಉಪವಾಸ ಇದ್ದು ಗೊರವಯ್ಯ ಕಾರಣಿಕ ನುಡಿಯುತ್ತಾರೆ. ಕಾರಣಿಕವನ್ನು ವರ್ಷದ ಭವಿಷ್ಯವಾಣಿ ಎಂದು ಹೇಳಲಾಗುತ್ತದೆ. ಈ ಕಾರಣಿಕ ನುಡಿಯನ್ನು ಹಿರಿಯರು ಅರ್ಥೈಸಿ ಮುಂದೆ ಆಗುವುದರ ಬಗ್ಗೆ ತಿಳಿಸುತ್ತಾರೆ.

ನಾಗಪ್ಪಜ್ಜ ಉರ್ಮಿ ಗೊರವಯ್ಯಾ ನುಡಿದ ಕಾರ್ಣಿಕವನ್ನು ಬಳಿಕ ದೇಗುಲದ ಪ್ರಧಾನ ಅರ್ಚಕ ಸಂತೋಷ ಭಟ್ ವಿಶ್ಲೇಷಿಸಿದ್ದು, ಮುಕ್ಕೋಟಿ ಚಲ್ಲಿತಲೇ ಅಂದರೆ ರೈತರು ಕೋಟ್ಯಂತರ ರೂ. ಭೂಮಿಗೆ ಹಾಕುತ್ತಾರೆ. ರೈತರಿಗೆ ಲಾಭವಾಗುವ ನಿರೀಕ್ಷೆಗಳು ಕಡಿಮೆ. ಮಕ್ಕೋಟಿ ರೈತರು ನೀರಿಗಾಗಿ ಹಣ ಚಲ್ಲಿದ್ದಾರೆ. ಮಳೆ ಬೆಳೆಯಿಲ್ಲದೆ ನಷ್ಟವಾಗುವ ಸಾಧ್ಯತೆ ಇದೆ. ರಾಜ್ಯಕ್ಕೆ ವರುಣನ ಅವಕೃಪೆಯಿಂದಾಗಿ ಭೀಕರ ಬರಗಾಲ ಎದುರಾಗಬಹುದು ಎಂದು ವಿವರಿಸಿದ್ದಾರೆ.

 

Related posts

ಇನ್ಮುಂದೆ ಭೂಕಂಪಕ್ಕೂ ಮುನ್ನ ಮೊಬೈಲ್ ಗೆ ಬರುತ್ತೆ ಎಚ್ಚರಿಕೆ ಸಂದೇಶ.

ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಕರ್ನಾಟಕದ ಬಾಲಕ..

ಇತ್ತ ಗ್ಯಾಸ್ ಬೆಲೆ ಇಳಿಕೆ ಬೆನ್ನಲ್ಲೆ ಅತ್ತ ಶೀಘ್ರದಲ್ಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ?