ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯದ ಜನತೆಗೆ ಟೊಮ್ಯಾಟೋ ಬಳಿಕ ಇದೀಗ ಈರುಳ್ಳಿ ಬೆಲೆ ಏರಿಕೆ ಶಾಕ್..!

ಬೆಂಗಳೂರು, : ಇತ್ತೀಚೆಗೆ ಟೊಮ್ಯಾಟೋ ದರ ಗಗನಕ್ಕೇರಿ ಜನಸಾಮಾನ್ಯರು ಹೈರಣಾದರೇ ರೈತರಿಗೆ ಒಳ್ಳೆಯ ಲಾಭ ಸಿಕ್ಕಿತ್ತು. ಸುಮಾರು 200 ರಿಂದ 250 ರೂಪಾಯಿಯವರೆಗೂ ಟೊಮ್ಯೊಟೋ ಬೆಲೆ ಏರಿಕೆಯಾಗಿತ್ತು. ಇದೀಗ ಟೊಮ್ಯಾಟೋ ಬೆಲೆ 10 ರಿಂದ 20 ರೂಗೆ ಕುಸಿದರೇ ಇತ್ತ ಈರುಳ್ಳಿಯ ಬೆಲೆ ಏರಿಕೆಯತ್ತ ಸಾಗಿದೆ.

ಹೌದು ಟೊಮ್ಯಾಟೋ ಬಳಿಕ ಇದೀಗ ಗ್ರಾಹಕರಿಗೆ ಈರುಳ್ಳಿ ದರ ಏರಿಕೆ ಬಿಸಿ ತಟ್ಟಲಾರಂಬಿಸಿದೆ.  ಕಳೆದ ವಾರ 15 ರಿಂದ 20 ರುಪಾಯಿಗೆ ಸಿಗುತ್ತಿದ್ದ ಈರುಳ್ಳಿ, ಇದೀಗ ಕೆಜಿಗೆ ಏಕಾಏಕಿ 40 ರಿಂದ 45 ರೂ. ಗೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ಜಿಲ್ಲೆಗಳಿಂದ ಪೂರೈಕೆ ಬಹುತೇಕ ಕುಸಿದಿದೆ. ಅಲ್ಲದೇ ನಾಸಿಕ್ ಹಾಗೂ ಪುಣೆಯಿಂದ ಪೂರೈಕೆಯಾಗುತ್ತಿರುವುದು ಸ್ಥಗಿತವಾಗಿದೆ. ಇದರಿಂದ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.= ರಾಜ್ಯದಲ್ಲಿ ಮೊದಲು ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣದ ರಾಜ್ಯಗಳಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ನವೆಂಬರ್ ಬಳಿಕ ಗದಗ, ವಿಜಯಪುರದಿಂದ ಪೂರೈಕೆಯಾಗುತ್ತದೆ. ಆದರೆ, ಈ ವರ್ಷ ಬಿತ್ತನೆ ಕಡಿಮೆಯಾಗಿದೆ.

ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ಈ ವೇಳೆಗೆ 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ, ಶೇ. 35ರಷ್ಟು ಕಡಿಮೆ ಅಂದರೆ ನಿತ್ಯ ಸರಾಸರಿ 60 ಸಾವಿರದಿಂದ 70 ಸಾವಿರ ಚೀಲಗಳು ಮಾತ್ರ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಡು ಕೊರತೆಯಾಗುವ ಸಾಧ್ಯತೆಗಳಿವೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ನಾಸಿಕ್ ಹಾಗೂ ಪುಣೆಯಿಂದ ಪೂರೈಕೆ ಸ್ಥಗಿತವಾಗಿದ್ದರಿಂದ ಈರುಳ್ಳಿ ಸ್ಟಾಕ್ ಇಲ್ಲ. ಇತ್ತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇನ್ನು ಕೆಲ ಕಡೆ ಈರುಳ್ಳಿ ಬೆಳೆಯಲಾಗಿದೆ ಆದರೂ ಕಟಾವಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಸ್ಟಾಕ್ ಇಲ್ಲದಂತಾಗಿದೆ. ಇದರ ಮಧ್ಯೆ ಈರುಳ್ಳಿಗೆ ಬೇಡಿಕೆ ಹೆಚ್ಚಳವಾಗಿದ್ದರಿಂದ ದರ ಏರಿಕೆ ಕಂಡಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಹೆಚ್ಚಳ.

ಕಳೆದ 15 ದಿನಗಳಿಂದ ಶಿವಮೊಗ್ಗ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ ಸುಮಾರು 25 ರಿಂದ 30 ರೂ. ಗಳಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 30 ರಿಂದ 35 ರೂ.ಗೆ ಮಾರಾಟವಾಗುತ್ತಿತ್ತು. ಸದ್ಯ ಶಿವಮೊಗ್ಗದ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 32 ರಿಂದ 35 ರೂ.ಗೆ ಏರಿಕೆಯಾಗಿದೆ. ಈ ಬಗ್ಗೆ ಈರುಳ್ಳಿ ವ್ಯಾಪಾರಿ ರಾಮು ಎನ್ನುವರು ಮಾತನಾಡಿದ್ದು, ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಶೇ 40ರಷ್ಟು ತೆರಿಗೆ ವಿಧಿಸಿದೆ. ಈ ಕ್ರಮವು ಮಹಾರಾಷ್ಟ್ರದ ಪ್ರಮುಖ ಮಾರಾಟಗಾರರ ಈರುಳ್ಳಿ ರಫ್ತಿನ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

ಕಡಿಮೆ ಬೆಳೆಯಿಂದಾಗಿ ಬೆಲೆ ಮತ್ತಷ್ಟು ಗಗನಕ್ಕೇರುವುದನ್ನು ತಡೆಯಲು ಹಾಗೂ ಕೃತಕ ಅಭಾವ ಸೃಷ್ಟಿಗೆ ಅವಕಾಶ ನೀಡದಂತೆ ಕೇಂದ್ರದ ನಾಫೆಡ್ ಹಾಗೂ ನ್ಯಾಷನಲ್ ಕೋ-ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಸಿಸಿಎಫ್) ಮೂಲಕ ಏಪ್ರಿಲ್, ಮೇ ತಿಂಗಳಲ್ಲಿ ಮಹಾರಾಷ್ಟ್ರದ ಈರುಳ್ಳಿಯನ್ನು ಖರೀದಿಸಿತ್ತು. ಅದನ್ನೀಗ ಕಳೆದ ವಾರದಿಂದ ಬೆಂಗಳೂರು ಮಾರುಕಟ್ಟೆಗೆ ಪೂರೈಸುತ್ತಿದೆ. ಈ ಈರುಳ್ಳಿಯು ನವೆಂಬರ್ ಎರಡನೇ ವಾರದವರೆಗೆ ಪೂರೈಕೆಯಾಗಬಹುದು ಎನ್ನಲಾಗುತ್ತಿದೆ.ಅಷ್ಟೊತ್ತಿಗಾಗಲೇ ಉತ್ತರ ಕರ್ನಾಟಕ, ಮಹಾರಾಷ್ಟ್ರದ ಈರುಳ್ಳಿ ಇದೇ ಪ್ರಮಾಣದಲ್ಲಿ ಬಂದರೆ ಬೆಲೆ ನಿಯಂತ್ರದಲ್ಲಿ ಇರುತ್ತದೆ. ಒಂದು ವೇಳೆ ಪೂರೈಕೆ ಕಡಿಮೆಯಾದರೆ ಈರುಳ್ಳಿ ದರ ಹೆಚ್ಚಾಗುವ ಸಾಧ್ಯತೆಗಳಿವೆ.

 

Related posts

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಅಪಾರ ಪ್ರಮಾಣದ ಹಾನಿ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಭೇಟಿ ಪರಿಶೀಲನೆ.

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ದೇವರು ಒಳ್ಳೆಯದು ಮಾಡಲಿ-ಸಚಿವ ಮಧು ಬಂಗಾರಪ್ಪ

ಭವಿಷ್ಯವು ಪ್ರಸ್ತುತದಲ್ಲಿ ನಾವು ಏನು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ- ಡಾ . ಅರುಣ್ .ಎಂ .ಎಸ್