ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ವಾಹನಗಳಿಗೂ ‘ಕ್ಯೂಆರ್ ಕೋಡ್’: ಅಪಘಾತವಾದ್ರೆ ಮನೆಯವರು, ಪೊಲೀಸ್, ಆಸ್ಪತ್ರೆಗೆ ಹೋಗುತ್ತೆ ಮೆಸೇಜ್.

ಬೆಂಗಳೂರು :  ತಂತ್ರಜ್ಞಾನ ಮುಂದುವರೆದಂತೆ ಹಲವು ಕೆಲಸಗಳು ಸುಲಭವಾಗಿದ್ದು ಎಲ್ಲಾ ಕ್ಷೇತ್ರಗಳಲ್ಲಿ ತಾಂತ್ರಿಕತೆ ಹರಡಿದೆ. ಇದೀಗ ಯಾವುದಾದರೂ ವಾಹನ ಅಪಘಾತಕ್ಕೀಡಾದರೇ ಈ ವಿಚಾರವನ್ನ ಮನೆಯವರಿಗೆ, ಪೊಲೀಸರಿಗೆ ಮತ್ತು ಆಸ್ಪತ್ರೆಗೆ ಸಂದೇಶ ರವಾನಿಸುವ ಟೆಕ್ನಾಲಜಿ ಅಭಿವೃದ್ದಿಪಡಿಸಲಾಗುತ್ತಿದೆ.

ಹೌದು ರಸ್ತೆ ಅಪಘಾತ ಸಂಭವಿಸಿದ ವೇಳೆ ತುರ್ತಾಗಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುವ ‘ರಕ್ಷಾ ಕ್ಯೂಆರ್ ಕೋಡ್’ ಸಾಫ್ಟ್ವೇರ್ ಅನ್ನು  ಹೈವೇ ಡಿಲೈಟ್ ಸಂಸ್ಥೆ ಬಿಡುಗಡೆಗೊಳಿಸಿದೆ.

ಈ ಕುರಿತು ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ರಾಜೇಶ್ ಘಟನಟ್ಟಿ, ‘ಅಪಘಾತಕ್ಕೆ ಒಳಗಾದವರ ನೆರವಿಗಾಗಿ ರಕ್ಷಾ ಕ್ಯೂಆರ್ ಕೋಡ್ ಅಭಿವೃದ್ಧಿ ಪಡಿಸಲಾಗಿದೆ. ಸ್ಥಳೀಯರು ಅಪಘಾತಕ್ಕೆ ಒಳಗಾದವರ ವಾಹನಕ್ಕೆ ಅಂಟಿಸಿರುವ ಈ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅವರ ಕುಟುಂಬದ ಸದಸ್ಯರಿಗೆ ತಿಳಿಸಬಹುದು. ಕರೆ ಮಾಡುವ ಮತ್ತು ಸ್ವೀಕರಿಸುವವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ. ಜತೆಗೆ ನಮ್ಮ ಸಂಸ್ಥೆ ಅಪಘಾತದ ಸ್ಥಳದ ಮಾಹಿತಿ ಪಡೆದು ಸ್ಥಳೀಯ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಲಾಗುತ್ತದೆ’ ಎಂದು ತಿಳಿಸಿದರು.

‘ರಕ್ಷಾ ಕ್ಯೂಆರ್ ಕೋಡ್ ಪಡೆಯಲು ವಾಹನದ ಮಾಲೀಕರಿಗೆ ಹೈವೇ ಡಿಲೈಟ್ನೊಂದಿಗೆ ವಾರ್ಷಿಕ ₹365 ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ರಕ್ತದ ಗುಂಪು, ವಾಹನದ ವಿಮೆ, ಆರೋಗ್ಯ ವಿಮೆ ಹಾಗೂ ಕುಟುಂಬದ ತುರ್ತು ಮಾಹಿತಿಯ ವಿವರಗಳನ್ನು ಇದರಲ್ಲಿ ಸೇರಿಸಬಹುದು. ಈ ಎಲ್ಲ ಮಾಹಿತಿಗಳು ಸುರಕ್ಷಿತವಾಗಿರಲಿವೆ ಎಂದರು.

 

Related posts

ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರು ಆರೋಪಿಗಳ ಬಂಧನ.

ಸಿರಿಧಾನ್ಯ ಆಹಾರ ಸ್ಪರ್ಧೆಯಲ್ಲಿ ವಾಣಿಭಟ್ ಪ್ರಥಮ.

ನನ್ನನ್ನು ತಡೆಯುವವರ ಮೇಲೆ ಸಿಟ್ಟಿಲ್ಲ. ಅವರು ನಮ್ಮ ಸ್ನೇಹಿತರೆ- ಚಕ್ರವರ್ತಿ ಸೂಲಿಬೆಲೆ.