ಕನ್ನಡಿಗರ ಪ್ರಜಾನುಡಿ
ಕ್ರೀಡೆದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಭಾರತದ ಮಾರಕ ಬೌಲಿಂಗ್ ಗೆ ನಲುಗಿದ ಲಂಕಾ: ಟೀಂ ಇಂಡಿಯಾ ಮುಡಿಗೆ ಏಷ್ಯಾಕಪ್ ಕಿರಿಟ..!

ಕೊಲೊಂಬೊ:   ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನ ಬಗ್ಗು ಬಡಿದು  ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಂದು ಕೊಲೊಂಬೋ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಮಾರಕ ಬೌಲಿಂಗ್‌ ತತ್ತರಿಸಿದ ದಶುನ್ ಶನಕ ನೇತೃತ್ವದ ಶ್ರೀಲಂಕಾ  ಕೇವಲ 50 ರನ್‌ಗಳಿಗೆ ಆಲೌಟ್  ಆಯಿತು. ಮೊಹಮ್ಮದ್ ಸಿರಾಜ್ ಬೌಲಿಂಗ್ ಶ್ರೀಲಂಕಾ ಬ್ಯಾಟ್ಸ್ ಮನ್ ಗಳು ತತ್ತರಿಸಿದರು.ಅದಾದ ಬಳಿಕ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ದಾಖಲೆಯ ಗೆಲುವು ಸಾಧಿಸಿದೆ.                          ಭಾರತ ತಂಡ 2023ರ ಏಷ್ಯಾಕಪ್​ ನಿರಾಶಯವಾಗಿ ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್​ಗಳಿಂದ ಗೆಲ್ಲುವ ಮೂಲಕ ದಾಖಲೆ ಬರೆದಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕೇವಲ 15.2 ಓವರ್​ಗಳಲ್ಲಿ 50 ರನ್​ಗಳಿಗೆ ಸರ್ವಪತನ ಕಂಡಿತು.

ಮೊಹಮ್ಮದ್​ ಸಿರಾಜ್ ದಾಳಿಗೆ ದಿಕ್ಕಾಪಾಲಾದ ಸಿಂಹಳೀಯ ಪಡೆ ಕೇವಲ ತರಗೆಲೆಯಂತೆ ಉದುರಿದರು. ಸಿರಾಜ್ ಕೇವಲ 21 ರನ್​ ನೀಡಿ 6 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3 ರನ್ ನೀಡಿ 3 ವಿಕೆಟ್ ಪಡೆದರು. ಬುಮ್ರಾ ಒಂದು ವಿಕೆಟ್ ಪಡೆದರು.

 

ಇನ್ನೂ ಶ್ರೀಲಂಕಾ ನೀಡಿದ 51 ರನ್​ಗಳ ಗುರಿಯನ್ನ ಭಾರತ ತಂಡ ಕೇವಲ 5 ಓವರ್​ಗಳಲ್ಲಿ ತಲುಪಿತು.  ವಿಕೆಟ್​ ನಷ್ಟವಿಲ್ಲದೆ ಗುರಿ ತಲುಪಿದ 2ನೇ ತಂಡ ಎಂಬ ವಿಶ್ವದಾಖಲೆ ತನ್ನದಾಗಿಸಿಕೊಂಡಿತು.  ಇದು ಭಾರತಕ್ಕೆ ದಕ್ಕಿದ 8ನೇ ಏಷ್ಯಾಕಪ್ ಆಗಿದೆ.

ಸಿರಾಜ್ ಮ್ಯಾಜಿಕ್….

 

ಈ ಪಂದ್ಯದಲ್ಲಿ ಶ್ರೀಲಂಕಾ ತಂಡದ ಸದ್ದನ್ನು ಸಂಪೂರ್ಣವಾಗಿ ಅಡಗಿಸಿದ್ದು ಮೊಹಮ್ಮದ್ ಸಿರಾಜ್. ಎರಡನೇ ಓವರ್ ಎಸೆದ ಸಿರಾಜ್ ಮೇಡನ್ ಓವರ್ ಮಾಡಿದ್ದರು. ನಂತರ ಇನ್ನಿಂಗ್ಸ್‌ನ ನಾಲ್ಕನೇ ಓವರ್ ಎಸೆಯಲು ಬಂದ ಸಿರಾಜ್ ಮೊದಲ ಎಸೆತದಲ್ಲಿಯೇ ಫಾತುಮ್ ನಿಸ್ಸಾಂಕ ಜಡೇಜಾ ಪಡೆದ ಅದ್ಭುತ ಕ್ಯಾಚ್‌ಗೆ ಬಲಿಯಾಗಿ ಫೆವಿಲಿಯನ್‌ಗೆ ತೆರಳಿದರು. ಓವರ್ನ ಎರಡನೇ ಎಸೆತದಲ್ಲಿ ಯಾವುದೇ ರನ್ ಹರಿದುಬಾರಲಿಲ್ಲ. ಮೂರನೇ ಎಸೆತದಲ್ಲಿ ಸದೀರ ಸಮತವಿಕ್ರಮ ಎಲ್‌ಬಿಡಬ್ಲ್ಯು ಆಗಿ ವಿಕೆಟ್ ಕಳೆದುಕೊಂಡರು. ನಂತರದ ಎಸೆತದಲ್ಲಿ ಚರಿತ ಅಸಲಂಕಾ ಇಶಾನ್ ಕಿಶನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರದ ಎಸೆತ ಎದುರಿಸಿದ ಧನಂಜಯ ಡಿಸಿಲ್ವ ಬೌಂಡರಿ ಬಾರಿಸಿದರು. ಆದರೆ ಕೊನೆಯ ಎಸೆತದಲ್ಲಿ ಅವರು ಕೂಡ ರಾಹುಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.  ನಂತರ ಕುಶಾಲ್ ಮೆಂಡಿಸ್ ಮತ್ತು ದಶುನ್ ಶನಕರನ್ನ ಔಟ್ ಮಾಡಿ 6 ವಿಕೆಟ್ ಕಿತ್ತಿದರು.

 

Related posts

ನ.೨೫  ಮುಡುಬಾದಲ್ಲಿ ಸಾಹಿತ್ಯ ಹುಣ್ಣಿಮೆ ಸಂಭ್ರಮ

ಬರ ಪರಿಸ್ಥಿತಿ ಅವಲೋಕನಕ್ಕಾಗಿ ಶೀಘ್ರದಲ್ಲೇ ರಾಜ್ಯಕ್ಕೆ ಕೇಂದ್ರ ನಿಯೋಗ…

ಕರ್ನಾಟಕದ ರೈತರು ಮತ್ತು ಜನರಿಗೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ.