ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಇಸ್ರೇಲ್‌ನಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹ

ಬೆಂಗಳೂರು : ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ರಾಕೆಟ್‌ ದಾಳಿ ನಡೆಸಿದ ಕಾರಣ ಭಾರತದ ಸಾವಿರಾರು ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದೆ. ಇವರ ಮಧ್ಯ ಕನ್ನಡಿಗರು ಸಿಲುಕಿಕೊಂಡಿದ್ದು ಅವರಿಗೆ ತುರ್ತು ನೆರವು ನೀಡಿ ಅವರನ್ನು ಅಲ್ಲಿಂದ ಕರೆದುಕೊಂಡು ಬರುವ ಕೆಲಸವನ್ನು ಭಾರತ ಸರಕಾರದ ನೇತ್ರತ್ವದಲ್ಲಿ ತಕ್ಷಣದಲ್ಲಿ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾಮಹೇಶ ಜೋಶಿ ಅವರು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಮೂಲಕ ಕನ್ನಡಿಗರ ರಕ್ಷಣೆಗೆ ಮನವಿ ಮಾಡಿದ್ದಾರೆ.

ಇಸ್ರೇಲ್‌ ಮೇಲೆ ಸುಮಾರು ೫ ಸಾವಿರಕ್ಕೂ ಅಧಿಕ ರಾಕೆಟ್‌ಗಳ ಮೂಲಕ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ನಡೆಸಿದ ದಾಳಿಯ ಪರಿಣಾಮ ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆಗಳು ಹೆಚ್ಚುತ್ತಲೇ ಇದೆಟೆಲ್‌ಅವಿವ್‌ ಸೇರಿ ಇಸ್ರೇಲ್‌ನ ಹಲವು ನಗರಗಳ ಮೇಲೆ ನಡೆದ ದಾಳಿಗೆ ಜನ ಅಕ್ಷರಶಃ ನಲುಗಿ ಹೋಗಿದ್ದಾರೆಸಾವಿರಾರು ಮಂದಿ ಗಾಯಗೊಂಡು ಸಾವು ನೋವಿನಲ್ಲಿ ನರಳಾಡುತ್ತಿದ್ದಾರೆಇದೇ ಸಂದರ್ಭದಲ್ಲಿ ಇಸ್ರೇಲ್‌ನಲ್ಲಿ ಇರುವ  ಭಾರತ ಮೂಲದ ವಿದ್ಯಾರ್ಥಿಗಳು  ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಜೊತೆಗೆ ಉದ್ಯೋಗ ಅರಸಿ ಇಸ್ರೇಲ್‌ಗೆ ತೆರಳಿದ್ದ ಭಾರತೀಯರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆಅವರಲ್ಲಿ ಕನ್ನಡಿಗರು ಇರುವುದು ಕನ್ನಡಿಗರಿಗೆ ಕಳವಳದ ಸಂಗತಿಯಾಗಿದೆ.

ಇಸ್ರೇಲ್‌ನ ಹೆರಾತ್‌ ವಿಶ್ವವಿದ್ಯಾಲಯ ಸೇರಿದಂತೆ  ಹಲವೆಡೆ ಓದುತ್ತಿರುವ ನಮ್ಮ ವಿದ್ಯಾರ್ಥಿಗಳು ಉಗ್ರರ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ನಿರಾಶ್ರಿತರಾಗಿದ್ದುಇಸ್ರೇಲ್‌ ಸೇನೆಯ ಆಶ್ರಯದಲ್ಲಿದ್ದಾರೆ. ಸ್ಥಳದಲ್ಲಿ ಸಿಲುಕಿದ ನಮ್ಮ ವಿದ್ಯಾರ್ಥಿಗಳು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅಲ್ಲಿ ಇರಲು ತಮಗೆ ಭಯವಾಗುತ್ತಿದೆ. ನಮ್ಮ ಪುಣ್ಯಕ್ಕೆ ಇಸ್ರೇಲ್‌ ಪೊಲೀಸರು ಸದ್ಯ ತಮಗೆ ಆಶ್ರಯ ನೀಡಿದ್ದಾರೆ. ಸದ್ಯದ ಮಟ್ಟಿಗೆ ನಾವು ಸುರಕ್ಷಿತವಾಗಿದ್ದರೂ ಭಯದಲ್ಲಿ ನಾವು ದಿನ ಕಳೆಯುತ್ತಿದ್ದೇವೆಭಾರತದ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿರುವ ವರದಿಗಳು ಪ್ರಕಟವಾಗುತ್ತಿದೆ.

ಇದರ ಬೆನ್ನಲೇ ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾದ ಕಾರಣ ಎರಡೂ ದೇಶಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸೂತ್ರವನ್ನು ಹೊರಡಿಸಿವೆ. ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನಲ್ಲಿರುವ ಭಾರತದ ವಿದ್ಯಾರ್ಥಿಗಳು ಹೆಚ್ಚಿನ ಮುಂಜಾಗ್ರತೆ ವಹಿಸಿ. ಯಾವುದೇ ಕಾರಣಕ್ಕೂ ಮನೆಹಾಸ್ಟೆಲ್‌ಗಳಿಂದ ಹೊರಗೆ ಬರಬೇಡಿ. ಯಾವುದೇ ತುರ್ತು ಸಂದರ್ಭದಲ್ಲಿಯೂ ನೇರವಾಗಿ ರಾಯಭಾರ ಕಚೇರಿಗಳಿಗೆ ಕರೆ ಮಾಡಿ” ಎಂದು ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಸೂಚನೆ ಹೊರಡಿಸಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಸಹ ಗಮನಿಸಿದೆಈಗಾಗಲೇ ಭಾರತೀಯ ರಾಯಭಾರ ಕಚೇರಿ ವೆಬ್‌ಸೈಟ್‌ ಮೂಲಕ ಮಾಹಿತಿಯನ್ನು ಸಹ ಕನ್ನಡ ಸಾಹಿತ್ಯ ಪರಿಷತ್ತು ಪಡೆದುಕೊಂಡಿದೆಅದರ ಪ್ರಕಾರಇಸ್ರೇಲ್‌ನಲ್ಲಿ ಭಾರತ ಮೂಲದ ೧೮ ಸಾವಿರ ಜನ ನೆಲೆಸಿದ್ದಾರೆ. ವಿದ್ಯಾರ್ಥಿಗಳುವಜ್ರದ ವ್ಯಾಪಾರಿಗಳುಐಟಿ ಉದ್ಯೋಗಿಗಳು ಇದ್ದಾರೆಈ ಪೈಕಿ ಸಾವಿರಾರು ಕನ್ನಡಿಗರು ಇಸ್ರೇಲ್‌ನಲ್ಲಿ ನೆಲೆಗೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ನಾಡೋಜ ಡಾಮಹೇಶ ಜೋಶಿ ಅವರು ಕೇಂದ್ರ ಸರಕಾರಕ್ಕೆ ವಿವರಿಸಿದ್ದಾರೆ.

ಕನ್ನಡಿಗರ ರಕ್ಷಣೆಗೆ ನಿಂತ ಕೇಂದ್ರ ಹಾಗೂ ರಾಜ್ಯ ಉಭಯ ಸರಕಾರಗಳು  ಇಸ್ರೇಲ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡುಇಸ್ರೇಲ್‌ನಲ್ಲಿ ಇರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಜಾಗರೂಕರಾಗಿ ಮರಳಿ ಕರೆಸಿಕೊಳ್ಳಬೇಕು. ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅಲ್ಲಿರುವ ನಮ್ಮವರಿಗೆ ತಿಳಿಸಿ ಅವರಿಗೆ ವಿಶ್ವಾಸ ತುಂಬಬೇಕುತುರ್ತು ಸಂಪರ್ಕಕ್ಕೆ ವಿಶೇಷ ದೂರವಾಣಿಯ ವ್ಯವಸ್ಥೆ ಮಾಡಿ ಸಂಕಷ್ಟದಲ್ಲಿ ಸಿಲುಕಿರುವವರ ಕುಟುಂಬದವರೊಂದಿಗೆ ಮಾತನಾಡಿಸಿ ಅಲ್ಲಿರುವವರಿಗೆ ಧೈರ್ಯ ತುಂಬುವ ಕೆಲಸವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾಮಹೇಶ ಜೋಶಿ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.

Related posts

545 ಪಿಎಸ್ ಐ ನೇಮಕಾತಿ ಹಗರಣ:  ಮರುಪರೀಕ್ಷೆಗೆ ಹೈಕೋರ್ಟ್ ಆದೇಶ.

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ನ.29ರವರೆಗೆ ಭಾರಿ ಮಳೆ-ಹವಮಾನ ಇಲಾಖೆ ಮುನ್ಸೂಚನೆ.

ಸಾರ್ವಜನಿಕರೇ ಗಮನಿಸಿ: 2 ಸಾವಿರ ರೂ. ಮುಖಬೆಲೆ ನೋಟು ಬದಲಿಸಲು ಸೆ.30 ಕೊನೇ ದಿನ.