ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಮುಂದಿನ ಎರಡು ವರ್ಷ ವರ್ಗಾವಣೆ ಸ್ಥಗಿತಕ್ಕೆ ಸರ್ಕಾರ ತೀರ್ಮಾನ..?

ಬೆಂಗಳೂರು: ರಾಜ್ಯ ಸರ್ಕಾರ ಹಲವು ಇಲಾಖೆಗಳಲ್ಲಿ ಈಗಾಗಲೇ ವರ್ಗಾವಣೆ ಮಾಡಿದ್ದು,  ಮುಂದಿನ ಎರಡು ವರ್ಷಗಳ ಕಾಲ ಸಾರ್ವತ್ರಿಕ ವರ್ಗಾವಣೆ ಸ್ಥಗಿತ ಮಾಡುವ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಸಾರ್ವತ್ರಿಕ ವರ್ಗಾವಣೆಗೆ ಮುಂದಾದರೆ ಮೂರು, ನಾಲ್ಕು ತಿಂಗಳ ಕಾಲ ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತವೆ. ವರ್ಗಾವಣೆ ಬಯಸಿದ ನೌಕರರು ಸ್ಥಳ ಹುಡುಕಿಕೊಳ್ಳುವುದರಲ್ಲಿ ಸಮಯ ಕಳೆಯುತ್ತಾರೆ. ಕಾರ್ಯಕ್ಷೇತ್ರ ಬಿಟ್ಟು ಬೆಂಗಳೂರಿಗೆ ಅಲೆದಾಡುತ್ತಾರೆ. ಹೀಗಾಗಿ ಮುಂದಿನ ಎರಡು ವರ್ಷಗಳ ಕಾಲ ವರ್ಗಾವಣೆ ಮಾಡದೆ ಅಭಿವೃದ್ಧಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಸಚಿವಾಲಯದಲ್ಲಿ ಚಿಂತನೆ ನಡೆದಿದೆ.

ವರ್ಗಾವಣೆ ಸ್ಥಗಿತ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಶೇಕಡ 6ರ ಮಿತಿಯೊಳಗೆ ವರ್ಗಾವಣೆಗೆ ಆದೇಶ ನೀಡಲಾಗಿದ್ದು, ಆ ಮಿತಿ ಮೀರಿ ವರ್ಗಾವಣೆ ನಡೆಸಲಾಗಿದೆ

ವರ್ಗಾವಣೆಗಾಗಿ ನೌಕರರು ಅಲೆದಾಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ವರ್ಗಾವಣೆ ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿ ಇದ್ದು, ಎರಡು ವರ್ಷ ವರ್ಗಾವಣೆ ನಿಷೇಧಿಸಿದರೆ ಇವೆಲ್ಲವುಗಳಿಗೆ ಕಡಿವಾಣ ಹಾಕಬಹುದು ಚಿಂತನೆ ನಡೆದಿದೆ ಎನ್ನಲಾಗಿದೆ.

 

Related posts

ಡಿಸೆಂಬರ್ 23ಕ್ಕೆ 545 ಪಿಎಸ್ ಐ ಹುದ್ದೆಗಳಿಗೆ  ಮರು‌ ಪರೀಕ್ಷೆ.

ಕ್ರೀಡೆಯಿಂದ ವಿದ್ಯಾರ್ಥಿಗಳ ದೈಹಿಕ ಸಾಮಾರ್ಥ್ಯ ವೃದ್ಧಿ- ಸುಮತಿ ಕುಮಾರಸ್ವಾಮಿ 

ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ.