ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಬಂಟವಾಳದ ಬಂಟರ ಭವನದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ನಡೆದ ಐದನೇ ಪೂರ್ವಭಾವಿ ಸಭೆ:

ಶಿವಮೊಗ್ಗ:  ವಿಶ್ವ ಬಂಟರ ಸಮ್ಮೇಳನದ ಕಾರ್ಯಕ್ರಮಗಳ ಕುರಿತ ಐದನೇ ಪೂರ್ವಭಾವಿ ಸಭೆಯು ದಿನಾಂಕ 24/09/2023 ರಂದು ಬಂಟವಾಳದ ಬಂಟರ ಭವನದ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಿತು.

ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಕಾರ್ಯಕ್ರಮದ ಕರಪತ್ರವನ್ನು ಅನಾವರಣಗೊಳಿಸಲಾಯಿತು.
ಸಭೆಯಲ್ಲಿ ತುಳುನಾಡಿನ ಪ್ರತಿಷ್ಠಿತ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ದೇವಿಚರಣ್ ಶೆಟ್ಟಿ ಬೆಳಪು ಇವರನ್ನು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ನೂತನ ಪೋಷಕರಾಗಿ ಸೇರ್ಪಡೆಯಾದ  ಸುಧಾಕರ್ ಪೂಂಜ,  ಜಗನ್ನಾಥ್ ಚೌಟ, ಲೋಕೇಶ್ ಶೆಟ್ಟಿ ಮತ್ತು ಸುರೇಶ್ ರೈ ಮಕರಜ್ಯೋತಿ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ  ಐಕಳ ಹರೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷ  ಕರ್ನಿರೆ ವಿಶ್ವನಾಥ್ ಶೆಟ್ಟಿಯವರನ್ನು ಬಂಟರ ಸಂಘ ಬಂಟ್ವಾಳ ತಾಲೂಕಿನ ಅಧ್ಯಕ್ಷ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ  ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ ಹಾಗೂ ಕಾರ್ಯದರ್ಶಿ ಜಗನ್ನಾಥ್ ಚೌಟರು ಪ್ರಿತಿಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ  ಕರ್ನೂರು ಮೋಹನ್ ರೈ ಸಹ ಸಂಚಾಲಕರು ಸಾಂಸ್ಕೃತಿಕ ಸಮಿತಿ,  ರೋಷನ್ ಕುಮಾರ್ ಶೆಟ್ಟಿ ಸಹ ಸಂಚಾಲಕರು ಕ್ರೀಡಾ ಸಮಿತಿ, ಮಹಿಳಾ ವಿಭಾಗದ ಸದಸ್ಯರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Related posts

ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ: ನನ್ನ ಪ್ರಯತ್ನ ಫಲಿಸಿಲ್ಲ – ಮಾಜಿ ಸಚಿವ ಶ್ರೀರಾಮುಲು

ವಿದ್ಯೆಯೊಂದಿಗೆ ಸಂಸ್ಕಾರ ನೀಡುವ ಆದಿಚುಂಚನಗಿರಿ ಸಂಸ್ಥೆ- ಸಂಸದ ಬಿ.ವೈ.ರಾಘವೇಂದ್ರ ಇಂಗಿತ

ಸ್ಕೀಲ್ ಅಕಾಡೆಮಿಗೆ ಸಚಿವರ ಸಕರಾತ್ಮಕ ಸ್ಪಂದನೆ.