ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಅಗಲಿದ ಪುತ್ರನ ನೆನಪಲ್ಲಿ 500ಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಿದ ತಂದೆ!

ಮುಂಬೈ: ಪುತ್ರಶೋಕಂ ನಿರಂತರಂ ಎಂಬಂತೆ  ಪುತ್ರನನ್ನು ಕಳೆದುಕೊಂಡ ಶೋಕ ನಿರಂತರವಾಗಿರುತ್ತದೆ.  ಅಂತೆಯೇ  ಅಗಲಿದ ತನ್ನ ಪುತ್ರನ ನೆನನಪಿನಲ್ಲೇ ತಂದೆಯೊಬ್ಬರು 500ಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಿದ್ದಾರೆ.

ಪುತ್ರನು ಅಗಲಿದ ಶೋಕವನ್ನು  ತಂದೆ ಅನುಭವಿಸುತ್ತಿದ್ದು, ಅಗಲಿದ ಮಗನ ನೆನಪಲ್ಲೇ 600ಕ್ಕೂ ಅಧಿಕ ರಸ್ತೆಗುಂಡಿಗಳನ್ನು ಮುಚ್ಚಿದ್ದಾರೆ. ಮುಂಬೈನ ದಾದಾರಾವ್ ಎಂಬ ವ್ಯಕ್ತಿ ಹೀಗೆ ರಸ್ತೆಗುಂಡಿಗಳನ್ನು ಮುಚ್ಚುವ ಮೂಲಕ ಮಗನ ಅಗಲಿಕೆ ನೋವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇವರ 16 ವರ್ಷದ ಪುತ್ರ ಪ್ರಕಾಶ್ ಬಿಲ್ಹೋರ್ ಎಂಬಾತ 2015ರ ಜುಲೈನಲ್ಲಿ ಬೈಕ್ ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದನು. ಕಸಿನ್ ಜತೆ ಮುಂಬೈನ ರಸ್ತೆಯಲ್ಲಿ ಹಿಂಬದಿ ಸವಾರನಾಗಿ ಈತ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ನೀರು ತುಂಬಿದ್ದ ರಸ್ತೆಗುಂಡಿಗಿಳಿದ ಬೈಕ್ ಅಪಘಾತಕ್ಕೀಡಾಗಿ ಇಬ್ಬರೂ ಒಮ್ಮೆ ಮೇಲಕ್ಕೆ ಚಿಮ್ಮಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದ್ದರಿಂದ ಗಂಭೀರವಾಗಿ ಗಾಯಗೊಂಡ ಪ್ರಕಾಶ್ ಬ್ರೇನ್ ಡ್ಯಾಮೇಜ್ ಗೆ ಒಳಗಾಗಿ ಸಾವಿಗೀಡಾಗಿದ್ದ. ಹೆಲ್ಮೆಟ್ ಧರಿಸಿದ್ದ ಕಸಿನ್ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿ ಬಳಿಕ ಚೇತರಿಸಿಕೊಂಡಿದ್ದರು.

ಈ ಪ್ರಕರಣದಿಂದ ತೀವ್ರ ಮನನೊಂದ ದಾದಾರಾವ್, ತಮ್ಮ ಪುತ್ರನ ಅಗಲಿಕೆಯ ನೋವಿನಿಂದ ಹೊರಬರುವ ಸಲುವಾಗಿ ಮುಂಬೈನ ರಸ್ತೆಗುಂಡಿಗಳನ್ನು ಮುಚ್ಚಲು ಆರಂಭಿಸಿದರು. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಪ್ರದೇಶಗಳಲ್ಲಿನ ತ್ಯಾಜ್ಯಗಳನ್ನು ಸಂಗ್ರಹಿಸಿ, ಇದುವರೆಗೆ ಸುಮಾರು 500ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ತಮ್ಮ ಪುತ್ರನ ಅಗಲಿಕೆ ತಮ್ಮನ್ನು ತೀವ್ರವಾಗಿ ಕಾಡಿದೆ. ಆತನ ನೆನಪಲ್ಲಿ ಹಾಗೂ ಆತನ ಆತ್ಮಕ್ಕೆ ಗೌರವ ಸಲ್ಲಿಸಲು ತಾವು ಈ ಕೆಲಸ ಮಾಡುತ್ತಿರುವುದಾಗಿ ಅವರು  ತಿಳಿಸಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾ ಆ್ಯಪ್ ನಲ್ಲಿ ಮಾಡಲಾಗಿರುವ ಪೋಸ್ಟ್ವೊಂದನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು, ‘ಒಳಿತು ಮಾಡು ಮನುಸಾ’ ಎಂಬ ಕ್ಯಾಪ್ಷನ್ನೊಂದಿಗೆ ರಿ-ಪೋಸ್ಟ್ ಮಾಡಿಕೊಂಡಿದ್ದಾರೆ.

 

Related posts

ಮುಂದಿನ ಐದು ವರ್ಷಗಳು ಶಿವಮೊಗ್ಗ ನಗರ ಹೇಗಿರಬೇಕು..? ಸಲಹಾ ಸಂಗ್ರಹ ಅಭಿಯಾನಕ್ಕೆ ಚಾಲನೆ.

ಬೆಳ್ಳಂಬೆಳಿಗ್ಗೆ ತೆರಿಗೆ ವಂಚಕರಿಗೆ ಶಾಕ್:  ಬೆಂಗಳೂರಿನ 10ಕ್ಕೂ ಹೆಚ್ಚುಕಡೆಗಳಲ್ಲಿ ಐಟಿ ದಾಳಿ

ಉದ್ಯಮಿ ಬಿ.ಸಿ.ನಂಜುಂಡಶೆಟ್ಟಿಗೆ ಕರ್ನಾಟಕ ಸಾಧಕ ಪ್ರಶಸ್ತಿ.