ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ: ಡಿ.3 ರಂದು ಫಲಿತಾಂಶ.

ನವದೆಹಲಿ,:  ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಿಜೋರಾಂ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ.

ಇಂದು ನವದೆಹಲಿಯಲ್ಲಿ  ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ಸುದ್ದಿಗೋಷ್ಠಿಯಲ್ಲಿ  ಚುನಾವಣಾ ದಿನಾಂಕವನ್ನ ಘೋಷಿಸಿದ್ದಾರೆ. ನವೆಂಬರ್‌ 7 ರಂದು ಮಿಜೋರಾಂ ಚುನಾವಣೆ ನಡೆಯಲಿದೆ, ಛತ್ತೀಸ್‌ ಗಢದಲ್ಲಿ 2 ಹಂತದಲ್ಲಿ ನವೆಂಬರ್‌ 7 ಹಾಗೂ 17 ರಂದು ನಡೆದರೇ,  ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ 230 ಕ್ಷೇತ್ರಗಳಿಗೆ ನವೆಂಬರ್‌ 17ರಂದು ಮತದಾನ ನಡೆಯಲಿದೆ. ರಾಜಸ್ಥಾನದಲ್ಲಿ ನವೆಂಬರ್ 23 ರಂದು ಮತದಾನ ನಡೆಯಲಿದೆ. ತೆಲಂಗಾಣದಲ್ಲಿ ನವೆಂಬರ್‌ 30 ರಂದು ಮತದಾನ ನಡೆಯಲಿದ್ದು,  ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್‌ 3 ರಂದು ಪ್ರಕಟವಾಗಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.

ಈ ಐದೂ ರಾಜ್ಯಗಳಲ್ಲಿ 16.14 ಕೋಟಿ ಮತದಾರರು ಇದ್ದಾರೆ. ಮಿಜೋರಾಮ್‌ನಲ್ಲಿ 8.52 ಲಕ್ಷ, ಛತ್ತೀಸ್‌ಗಢದಲ್ಲಿ 2.03 ಕೋಟಿ, ಮಧ್ಯಪ್ರದೇಶದಲ್ಲಿ 5.6 ಕೋಟಿ, ರಾಜಸ್ಥಾನದಲ್ಲಿ 5.25 ಕೋಟಿ ಹಾಗೂ ತೆಲಂಗಾಣದಲ್ಲಿ 3.17 ಕೋಟಿ ಮತದಾರರು ಇದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

Key words: Date -announcement – five –state- assembly –elections

Related posts

ಗುರುಗಳಿಂದ ಕಲಿತ ವಿದ್ಯೆ ಶಾಶ್ವತ- ಶೃತಿ ರಾಘವೇಂದ್ರನ್

ಸರ್ಕಾರಿ ಶಾಲೆಗಳಲ್ಲಿ LKG, UKG ಆರಂಭಕ್ಕೆ ಕ್ರಮ- ಶಿಕ್ಷಣ ಸಚಿವ ಮಧು ಬಂಗಾರಪ್ಪ.

ಹೆಚ್.ಡಿಕೆ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ- ಸಚಿವ ಸಂತೋಷ್ ಲಾಡ್ ತಿರುಗೇಟು.