ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ರಾಜಕಾಲುವೆ ಕಾಮಗಾರಿ ಪೂರ್ಣ: ಸಚಿವ ಬೈರತಿ ಸುರೇಶ್ ರಿಂದ ಉದ್ಘಾಟನೆ.

ಶಿವಮೊಗ್ಗ: ಹೊಸಮನೆ ಬಡಾವಣೆಯ ನಾಗರಿಕರ ಬಹು ವರ್ಷಗಳ ಬೇಡಿಕೆಯಾಗಿದ್ದ ರಾಜಕಾಲುವೆ ನಿರ್ಮಾಣದ ಕಾಮಗಾರಿಯು ಮಹಾನಗರ ಪಾಲಿಕೆಯ 2022-23ರ ಎಸ್.ಎಫ್.ಸಿ ವಿಶೇಷ ಅನುದಾನದ ಒಂದು ಕೋಟಿ ರೂ. ವೆಚ್ಚದ ರಾಜಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದು. ಇದರ ಉದ್ಘಾಟನೆಯನ್ನು ಇಂದು ಬೆಳಿಗ್ಗೆ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ನೆರವೇರಿಸಿದರು.
ನಂತರ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ ರಸ್ತೆ (ಜೈಲ್ ರಸ್ತೆಯ) ಮುಖ್ಯ ಸೇತುವೆಯನ್ನು ತಕ್ಷಣವೇ ವಿಶೇಷ ಅನುದಾನ ಸಿದ್ಧಪಡಿಸಿ ನೂತನ ಸೇತುವೆ ನಿರ್ಮಾಣ ಮಾಡಲು ಹಾಗೂ ರಾಜಕಾಲುವೆ ಮೇಲ್ಭಾಗ ಕವರಿಂಗ್ ಸ್ಲಾಬ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಯುವ ಮುಖಂಡ ಕೆ.ರಂಗನಾಥ್, ಪ್ರಮುಖರಾದ ಕಲಗೋಡು ರತ್ನಾಕರ್, ಎಂ ಪ್ರವೀಣ್‍ಕುಮಾರ್, ಚಂದ್ರಶೇಖರ್, ಹೆಚ್.ಪಾಲಾಕ್ಷಿ ಎಸ್.ಎಂ.ಶರತ್, ಹೆಚ್.ಪಿ. ಗಿರೀಶ್, ಬಿ.ಲೋಕೇಶ್, ಎಸ್.ಕುಮರೇಶ್, ಇಕ್ಕೇರಿ ರಮೇಶ್, ಬಡಾವಣೆಯ ಪ್ರಮುಖರಾದ ಬಸವರಾಜ್, ಚಂದ್ರು ಗೆಡ್ಡೆ, ಪ್ರಕಾಶ್, ಕೆ.ಎಲ್.ಪವನ್ ಇನ್ನಿತರರು ಇದ್ದರು.

Related posts

ಮೊಬೈಲ್ ಬಳಕೆದಾರರಿಗೊಂದು ಸಲಹೆ: ಸ್ಮಾರ್ಟ್ ಫೋನ್ ನಿಂದ ಬರುವ ಈ ಅಪಾಯಕಾರಿ ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ..!

ಶಿವಮೊಗ್ಗದಲ್ಲಿ ಕೈಗಾರಿಕೆ ಬೆಳೆಯುವ ಸಾಮಥ್ರ್ಯ ಇದೆ : ಸಚಿವ ಮಧು ಬಂಗಾರಪ್ಪ

 ನ.27 ರಂದು ಶಿರಾಳಕೊಪ್ಪ ಬಸವೇಶ್ವರ ಸಹಕಾರ ಬ್ಯಾಂಕ್ ನ 111ನೇ ವಾರ್ಷಿಕೋತ್ಸವ