ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ತಾಳಿ ಕಟ್ಟಿದ ಬೆನ್ನಲ್ಲೆ ಮದುವೆ ಡ್ರೆಸ್ ನಲ್ಲೇ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಟ್ಟ ನವವಧು…

ಶಿವಮೊಗ್ಗ: ಜೀವನದಲ್ಲಿ ಬಾಲ್ಯ,ಶಿಕ್ಷಣ ಎಷ್ಟು ಮುಖ್ಯವೋ ಮದುವೆಯೂ ಕೂಡ ಅಷ್ಟೇ ಮುಖ್ಯ. ಜೀವನದಲ್ಲಿ ಒಂದು ಬಾರಿ ಆಗುವ ವಿವಾಹವನ್ನ ಕೆಲವರು ಅದ್ದೂರಿಯಾಗಿ ಆಚರಿಸಿದರೆ ಕೆಲವರು ಸಿಂಪಲ್ ಆಗಿ ಮಾಡಿಕೊಳ್ತಾರೆ. ಈ ಅಮೃತ ಘಳಿಗೆಗೆ ಅ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಅಲ್ಲದೆ ಮದುವೆಯ ಹಿಂದಿನ ಕೆಲ ದಿನಗಳು ಮತ್ತು ಮದುವೆಯ ದಿನದಂದು ದಂಪತಿಗೆ ಯಾವುದೇ ಇನ್ನಿತರ ಕೆಲಸಗಳನ್ನು ಮಾಡಲು ಬಿಡುವುದಿಲ್ಲ. ವಧು ಮಂಟಪದಿಂದ ಸೀದಾ ವರನ ಮನೆಗೆ ಕಾಲಿಡಬೇಕು ಎಂಬ ಸಂಪ್ರದಾಯವೂ ಕೆಲ ಕಡೆ ಇದೆ. ಆದರೆ ಇಲ್ಲೊಬ್ಬರು ವಧು ವರ ತಾಳಿ ಕಟ್ಟಿದ ಬೆನ್ನಲ್ಲೆ ಮದುವೆ ಮಂಟಪದಿಂದಲೇ ಪರೀಕ್ಷೆ ಕೇಂದ್ರಕ್ಕೆ ಎಂಟ್ರಿ ಕೊಟ್ಟು ಪರೀಕ್ಷೆ ಬರೆದಿದ್ದಾರೆ.

ಶಿವಮೊಗ್ಗದ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಸತ್ಯವತಿ ಅವರು ಬೆಳಗ್ಗೆ ವರ ತಾಳಿ ಕಟ್ಟಿದ ಬಳಿಕ ಸಿದಾ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ. ಇನ್ನು ವಿಶೇಷವೆಂದರೆ ನವ ವರ ತನ್ನ ಹೆಂಡತಿಯನ್ನ ಪರೀಕ್ಷಾ ಕೇಂದ್ರದವರೆಗೆ ಬಂದು ಬಿಟ್ಟು ಹೋಗಿದ್ದಾರೆ. ನವವಧು ಪರೀಕ್ಷೆ ಬರೆದು ಮತ್ತೆ ಕಲ್ಯಾಣ ಮಂಟಪಕ್ಕೆ ತೆರಳಲಿದರು. ಪರೀಕ್ಷೆ ಮುಗಿದ ನಂತರ ಮುಂದಿನ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದಾರೆ. ಇಂದು ಎಕನಾಮಿಕ್ಸ್ ಪರೀಕ್ಷೆ ಹಿನ್ನೆಲೆ ಪರೀಕ್ಷೆ ತಪ್ಪಿಸಿಕೊಳ್ಳಲಾಗದೆಂದು ತಾಳಿ ಕಟ್ಟು ತಿದ್ದಂತೆ ನವ ವರ ವಧುವನ್ನು ಕಮಲಾ ನೆಹರು ಕಾಲೇಜಿನ ಪರೀಕ್ಷೆ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದು ಪರೀಕ್ಷೆ ಮುಗಿಯುತ್ತಿದ್ದಂತೆ ವಾಪಾಸ್ ಮಂಟಪಕ್ಕೆ ಹೋಗಿ ಮುಂದಿನ ಶಾಸ್ತ್ರಗಳನ್ನು ಮಾಡಿದ್ದಾರೆ.

ಚೆನ್ನೈ ಮೂಲದ ಪ್ರಿಯಕರ ಫ್ರಾನ್ಸಿಸ್ ನೊಂದಿಗೆ ಸತ್ಯವತಿ ಅವರು ಮನೆಯಲ್ಲೇ ಸರಳ ವಿವಾಹವಾದರು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಫ್ರಾನ್ಸಿಸ್, ಎಂಜಿನಯರ್ ಪದವೀಧರ. ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾದ ಇವರು ಇನ್ಸ್ಟಾಗ್ರಾಮ್​ನಲ್ಲಿ ಎರಡು ವರ್ಷ ಚಾಟಿಂಗ್ ಮಾಡುತ್ತ ಪ್ರೀತಿಗೆ ಜಾರಿದ್ದರು. ಸದ್ಯ ಹಿರಿಯರಿಗೆ ಒಪ್ಪಿಸಿ ಸರಳ ವಿವಾಹವಾದರು.

 

Related posts

ದೇಶ ಕಂಡ ಅತ್ಯುತ್ತಮ ನ್ಯಾಯಧೀಶರು ಡಾ.ಶಿವರಾಜ್ ಪಾಟೀಲ್- ಭಾರತ ರತ್ನ ಡಾ.ಸಿ.ಎನ್.ಆರ್.ರಾವ್ ಬಣ್ಣನೆ

ಕರ್ನಾಟಕ ಸರ್ಕಾರ ನೀರಗಂಟಿ ಸರ್ಕಾರ – ರೈತ ಮುಖಂಡ ಕುರುಬೂರು ಶಾಂತಕುಮಾರ್ ಟೀಕೆ.

ಬೆಂಗಳೂರಿನಿಂದ ಕುವೆಂಪು ವಿಮಾಣ ನಿಲ್ದಾಣಕ್ಕೆ ಬಂದಿಳಿದ ಪ್ರಥಮ ವಿಮಾನ: ಅಭಿವೃದ್ದಿಯ ವಿನೂತನ ಅಧ್ಯಾಯ ಆರಂಭ-ಸಚಿವ ಎಂ.ಬಿ.ಪಾಟಲ್*