ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ 94ನೇ ವರ್ಷದ ಶ್ರೀ ವಿನಾಯಕೋತ್ಸವ: 21 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ.

ಶಿವಮೊಗ್ಗ: ನಗರದ ರಾಮಣ್ಣ ಶೇಷ್ಠಿ ಪಾರ್ಕ್ ನಲ್ಲಿ ಶ್ರೀ ಸರ್ವಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿ ವತಿಯಿಂದ 94ನೇ ವರ್ಷದ ಶ್ರೀ ವಿನಾಯಕೋತ್ಸವ ಆಚರಿಸಲಾಗುತ್ತಿದೆ. ಸೆ. 18ರಂದು ಶ್ರೀ ಸ್ವರ್ಣಗೌರಿ ಅಮ್ಮ ಪ್ರತಿಷ್ಠಾಪಿಸಿದ್ದು. ಆರು ದಿನಗಳ ಪೂಜಾ ಕಾರ್ಯಕ್ರಮದ ನಂತರ ಶ್ರೀ ಸ್ವರ್ಣಗೌರಿ ಅಮ್ಮನನ್ನು ಸೆ. 23ರ ರಾತ್ರಿ 8ಕ್ಕೆ ತುಂಗಾ ನದಿಯಲ್ಲಿ ವಿಸರ್ಜಿಸಲಾಗುವುದು.
ಸೆ. 18ರಂದು ಸಂಜೆ 6ಕ್ಕೆ ಶ್ರೀ ವಿನಾಯಕ ಸ್ವಾಮಿ ಪ್ರತಿಷ್ಠಾಪಿಸಿದ್ದು, ಬೇಲೂರು ಶಿಲ್ಪಕಲಾ ಮಂದಿರದಲ್ಲಿ ಶ್ರೀ ವಿನಾಯಕ ಸ್ವಾಮಿ ವಿಶೇಷ ಅಲಂಕಾರ ಮಾಡಲಾಗಿದೆ. ಶ್ರೀ ವಿನಾಯಕ ಸ್ವಾಮಿ ದೇವಸ್ಥಾನದ ಭವನದಲ್ಲಿ 21 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ ಪ್ರಸಾದ ವಿನಿಯೋಗ ಇರುತ್ತದೆ.
ಪ್ರತಿ ದಿನ ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ 7ರವರೆಗೂ ಸುಗಮ ಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ಹರಿಕಥೆ, ದಾಸವಾಣಿ, ಸವಿನೆನಪು ಹಳೇಯ ಗೀತೆ ಗಾಯನ ಕಾರ್ಯಕ್ರಮ, ಭಕ್ತಿಗೀತೆ, ಕುಚುಪುಡಿ ನೃತ್ಯ, ಭಕ್ತಿಭಾವ ಸಂಗೀತ ಕಾರ್ಯಕ್ರಮವನ್ನು ನಾಡಿನ ಹೆಸರಾಂತ ಕಲಾವಿದರು, ಪ್ರತಿಭಾವಂತರು ನಡೆಸಿಕೊಡಲಿದ್ದಾರೆ.
ಅಕ್ಟೋಬರ್ 6 ರಂದು ಬೆಳಗ್ಗೆ 9ಕ್ಕೆ ವಿಶೇಷ ಗಣಹೋಮ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರುತ್ತದೆ. ಅ. 7ಕ್ಕೆ ಶನಿವಾರ ಮಧ್ಯಾಹ್ನ ಅನ್ನ ಸಂತರ್ಪಣೆ ಇರುತ್ತದೆ. ಸಂಜೆ 7ಕ್ಕೆ ಶ್ರೀಗುರುಗಳ ಸಾನ್ನಿಧ್ಯದಲ್ಲಿ ಮಹಾಮಂಗಳಾರತಿ ಇರಲಿದೆ. ಅ. 8ರಂದು ಸಂಜೆ 6.30ಕ್ಕೆ ರಾಜಬೀದಿ ಉತ್ಸವ ನಡೆಯಲಿದೆ ಎಂದು ಶ್ರೀ ಸರ್ವಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ: ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದ 9ನೇ ತರಗತಿ ವಿದ್ಯಾರ್ಥಿನಿ.

ರಾಜ್ಯದಲ್ಲಿ ವಿದ್ಯುತ್ ಕೊರತೆ, ಲೋಡ್ ಶೆಡ್ಡಿಂಗ್: ಖಾಸಗಿಯವರು ಬೇರೆ ರಾಜ್ಯಕ್ಕೆ ವಿದ್ಯುತ್ ಮಾರುವುದಕ್ಕೆ ಬ್ರೇಕ್

ಚಾಕೊಲೇಟ್ ತಯಾರಿಕಾ ಫ್ಯಾಕ್ಟರಿ ಭೇಟಿ: ಖುದ್ಧು ತಾವೇ ಚಾಕೊಲೇಟ್ ತಯಾರಿಸಿ ಸವಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.