ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ರಾಜ್ಯದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಡ ಹೆಚ್ಚಳ: ಸರ್ಕಾರಕ್ಕೆ ಶುರುವಾಯ್ತು ಟೆನ್ಷನ್.

ಬೆಂಗಳೂರು: ಬಿಹಾರದಲ್ಲಿ ಜಾತಿಗಣತಿ ವರದಿ ಪ್ರಕಟವಾಗಿದ್ದು ಈ ಬೆನ್ನಲ್ಲೆ, ಕರ್ನಾಟಕದಲ್ಲೂ ಜಾತಿ ಜನಗಣತಿ ವರದಿ ಬಿಡುಗಡೆಗೆ ಒತ್ತಡ ಹೆಚ್ಚಾಗಿದ್ದು ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಟೆನ್ಷನ್ ಶುರುವಾಗಿದೆ.

ಜಾತಿಗಣತಿ ವರದಿ ಬಿಡುಗಡೆಯಾದರೇ ಮೀಸಲು, ಒಳಮೀಸಲಾತಿಗೆ ಒತ್ತಡ ಹೆಚ್ಚಾಗಿದೆ. ಬಿಹಾರ ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ಬೆನ್ನಲ್ಲೇ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಅಂಗೀಕರಿಸಿ, ಬಿಡುಗಡೆ ಮಾಡುವಂತೆ ಕೂಗು ಕೇಳಿ ಬಂದಿದೆ. ಕಾಂತರಾಜ ನೇತೃತ್ವದ ಹಿಂದಿನ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ವರದಿಯನ್ನು ಈವರೆಗೂ ತಾಂತ್ರಿಕವಾಗಿ ಸರ್ಕಾರಕ್ಕೆ ಸಲ್ಲಿಸಲು ಆಗಿಲ್ಲ. ಹೀಗಾಗಿ ಹಾಲಿ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಕಾಂತರಾಜ ಆಯೋಗ ಸಿದ್ಧಪಡಿಸಿರುವ ವರದಿಯ ಮಾಹಿತಿ ಇಟ್ಟುಕೊಂಡೇ ಹೆಚ್ಚಾಗಿರುವ ಜನಸಂಖ್ಯೆ, ಮತ್ತಿತರ ಅಂಶ ಲೆಕ್ಕಾಚಾರ ಹಾಕಿ ಪರಿಷ್ಕರಿಸಿ, ಬರುವ ನವೆಂಬರ್ 3ನೇ ವಾರದೊಳಗೆ ಸಲ್ಲಿಸಲು ಮುಂದಾಗಿ ಎಂಬುದಾಗಿ ಹೇಳಲಾಗುತ್ತಿದೆ.

ಜಾತಿಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಅಯೋಗಕ್ಕೆ ತಿಳಿಸಲಾಗಿದೆ-ಸಿಎಂ ಸಿದ್ದರಾಮಯ್ಯ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ಧರಾಮಯ್ಯ, ಜಾತಿಗಣತಿ ವರದಿ ಸಲ್ಲಿಸಲು ಹಿಮದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದ್ದು, ವರದಿ ನೀಡಿದರೆ ಪರಿಶೀಲಿಸಲಾಗುವುದು. ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜು ಅವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದು, ವರದಿ ತಯಾರು ಮಾಡಿದ್ದರು. ವರದಿ ಸಲ್ಲಿಸಲು ಹೋದಾಗ ಅದನ್ನು ಅವರು ಸ್ವೀಕರಿಸಲಿಲ್ಲ. ಆಗಿನ ಕಾರ್ಯದರ್ಶಿಗಳು ವರದಿಗೆ ಸಹಿ ಮಾಡಿಲ್ಲ. ಈಗಿನ ಕಾರ್ಯದರ್ಶಿಗಳ ಬಳಿ ಸಹಿ ಮಾಡಿಸಿ ಅವರು ಸಲ್ಲಿಸಬೇಕು ಎಂದು ವಿವರಿಸಿದರು.

ಜಾತಿ ಗಣತಿ ಹಾಗೂ ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಬೇಕೆಂದು ನಾನೇ ಹಿಂದೆ ಆದೇಶ ಮಾಡಿದ್ದು. ಆಗ ಕಾಂತರಾಜು ಆವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ. ನಂತರ ಸಮ್ಮಿಶ್ರ ಸರ್ಕಾರ ಇರುವಾಗ ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಪುಟ್ಟರಂಗಶೆಟ್ಟಿ ಇದ್ದರು. ಆಗ ವರದಿಯನ್ನು ಪಡೆಯಲಿಲ್ಲ. ನಂತರ ಆಯೋಗಕ್ಕೆ ಜಯಪ್ರಕಾಶ್ ಹೆಗಡೆಯವರನ್ನು ಬಿಜೆಪಿ ಸರ್ಕಾರ ನೇಮಿಸಿತ್ತು. ಅವರು ವರದಿ ವರದಿಯನ್ನು ಸಲ್ಲಿಸುವಂತೆ ತಿಳಿಸಿಲಾಗಿದೆ, ಆದರೆ ಕೊಟ್ಟಿಲ್ಲ ಎಂದರು.

 

Related posts

ಸಾರ್ವಜನಿಕರು- ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಕಾರ್ಯಕ್ರಮ

ಉಭಯ ದೇಶಗಳ ನಡುವೆ ಉದ್ವಿಗ್ನತೆ: ಕೆನಡಾಗೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರಾ.

ಕಾನೂನು ಬಾಹಿರ ಸಂಘಟಿತ ಅಪರಾಧಗಳು ನಡೆಯುತ್ತಿದ್ರೆ ಡಿಸಿಪಿ-ಎಸ್ಪಿಗಳನ್ನೇ ಹೊಣೆ ಮಾಡಿ ಕ್ರಮ- ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ.