ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಧನಾತ್ಮಕ ಚಿಂತನೆಯನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ತುಂಬಬೇಕು- ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸುವ ರೀತಿಯಲ್ಲಿ ಅಧ್ಯಾಪಕರು ಪಾಠ ಮಾಡಬೇಕು. ಧನಾತ್ಮಕ ಚಿಂತನೆಯನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ತುಂಬಬೇಕು ಎಂದು ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಹೇಳಿದ್ದಾರೆ.
ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಯೂನಿವರ್ಸಲ್ ನಾಲೇಡ್ಜ್ ಟ್ರಸ್ಟ್ ಮತ್ತು ಗ್ರಾಮ ವಿಕಾಸ ಸೊಸೈಟಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿಲೆಬಸ್ ಮುಗಿಸುವ ಒತ್ತಡ ಶಿಕ್ಷಕರಿಗಿರುತ್ತದೆ. ಶಿಕ್ಷಣ ಮತ್ತು ಶಿಕ್ಷಣೇತರ ಚಟುವಟಿಕೆಗಳನ್ನು ನಿಗದಿತ ಶೈಕ್ಷಣಿಕ ಅವಧಿಯಲ್ಲಿ ಮುಗಿಸುವ ಜವಾಬ್ದಾರಿಯ ಜೊತೆಗೆ ಉತ್ತಮ ಫಲಿತಾಂಶ ಬರಲು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಿಸುವ ಕಡೆ ಗಮನಕೊಡಬೇಕಾದ ಅವಶ್ಯಕತೆ ಇದೆ. ಇದಕ್ಕೆ ಶಿಕ್ಷಕರಲ್ಲಿ ಇಂತಹ ಕಾರ್ಯಾಗಾರಗಳು ಪ್ರಮುಖ ಪಾತ್ರ ವಹಿಸುತ್ತವೆ ಇದರ ಸದುಪಯೋಗಪಡೆದಕೊಳ್ಳಿ ಎಂದರು.
ಯೂನಿವರ್ಸಲ್ ನಾಲೇಡ್ಜ್ ಟ್ರಸ್ಟ್‍ನ ಪ್ರೊ. ಶಮ್ಮಿ ಸಿರಿ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ದೀಪ ಇದ್ದ ಹಾಗೆ. ನಾವೆಲ್ಲರೂ ಈ ಟ್ರಸ್ಟ್‍ನಲ್ಲಿ ದಂಪತಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಶೈಕ್ಷಣಿಕ ಅಭಿವೃದ್ಧಿಗಾಗಿ ನಮ್ಮ ವೃತ್ತಿಗಳಿಗೆ ರಾಜೀನಾಮೆ ನೀಡಿಇಂತಹ ನೂರಾರು ಕಾರ್ಯಾಗಾರಗಳನ್ನು ಏರ್ಪಡಿಸುತ್ತಿದ್ದೇವೆ. ಈಗಾಗಲೇ 42ಸಾವಿರ ಮಕ್ಕಳಿಗೆ ಮತ್ತು 3ಸಾವಿರ ಶಿಕ್ಷಕರಿಗೆ ತರಬೇತಿ ನೀಡಿದ್ದೇವೆ ಎಂದರು
ಧನಾತ್ಮಕ ಶಕ್ತಿಗಳು ಜೀವನದಲ್ಲಿ ಬೆಳಕು ನೀಡುವುದರ ಜೊತೆಗೆ ಒಳಗಿನಿಂದಲೇ ಸರಳ ಜೀವನವನ್ನು ಕಲಿಸುತ್ತದೆ. ಕೀಳರಿಮೆ ಹೋಗಲಾಡಿಸುತ್ತದೆ. ದೇಹದಲ್ಲಿ ಶಕ್ತಿ ಹೆಚ್ಚಿಸಿ ಆತ್ಮಸ್ಥೈರ್ಯ ಹೆಚ್ಚಿಸುವಂತಹ ತರಬೇತಿಯನ್ನು ಪರಿಣಿತರು ನಮ್ಮ ಟ್ರಸ್ಟ್ ಮೂಲಕ ಉಚಿತವಾಗಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಇಒ ಲೋಕೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಹೆಚ್. ಧರ್ಮಪ್ಪ, ಯೂನಿವರ್ಸಲ್ ನಾಲೇಡ್ಜ್ ಟ್ರಸ್ಟ್ ಮತ್ತು ಗ್ರಾಮ ವಿಕಾಸ ಸೊಸೈಟಿಯ ಪ್ರಮುಖರಾದ ಪ್ರೊ.ರೋಹನ್ ಸಿರಿ, ಅಶ್ವಿನಿ ಶೆಟ್ಟರ್ ನಾಯಕ್, ಜಗದೀಶ್ ಶೆಟ್ಟರ್ ನಾಯಕ್, ಪ್ರೊ.ಕೃಷ್ಣಾನಂದ ಶೆಣೈ, ಸುಲತಾ ಶೆಣೈ ಮತ್ತಿತರರಿದ್ದರು.

Related posts

ವಾರಕ್ಕೆ 70 ಗಂಟೆಗೂ ಹೆಚ್ಚು ದುಡಿಯುತ್ತಿದ್ದಾರೆ ಭಾರತದ ಮಹಿಳೆಯರು.

ನಾಳೆ ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್  ಬೆಂಬಲ: ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ.

ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವುದು ಮುಖ್ಯ-ಜಿ.ವಿಜಯ್‌ಕುಮಾರ್