ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ.

ಶಿವಮೊಗ್ಗ: ಕಲ್ಲಹಳ್ಳಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್.ರಮೇಶ್, ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ದೇಶದ ಅಭಿವೃದ್ಧಿಗೆ ಶಿಕ್ಷಕರ ಪಾತ್ರವೂ ಸಾಕಷ್ಟಿದೆ. ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಅವರು ಮಹಾನ್ ಗುರುಗಳಾಗಿದ್ದರು. ಪ್ರತಿಯೊಬ್ಬರನ್ನೂ ಸಮಾನತೆಯಿಂದ ನೋಡುತ್ತಿದ್ದರು. ಶಿಕ್ಷಕರಿಗೆ ಅವರು ಸ್ಫೂರ್ತಿದಾಯಕ ಎಂದರು.
ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಸರ್ಕಾರ, ಸಮಾಜ ಕೂಡ ಶಿಕ್ಷಕರ ನೆರವಿಗೆ ಬರಬೇಕು. ಮಕ್ಕಳನ್ನು ರಾಷ್ಟ್ರಭಕ್ತರನ್ನಾಗಿ ಮಾಡುವ ಹೊಣೆ ಶಿಕ್ಷಕರದ್ದೇ ಆಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾದುದು. ಆತ ತನ್ನ ಕರ್ತವ್ಯ ನಿಭಾಯಿಸದಿದ್ದರೆ ನಾಡಿನ ಕಟ್ಟಡವೇ ಉರುಳುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಕ್ಕಳು ಶಿಕ್ಷಕರಿಗೆ ಪ್ರೀತಿಯ ಉಡುಗೊರೆ ಕೊಡುವ ಮೂಲಕ ಕೃತಜ್ಞತೆ ಅರ್ಪಿಸಿದರು.

Related posts

ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಘೆಗೆ ಹೋಲಿಸಿ ವಿವಾದ ಸೃಷ್ಠಿಸಿದ ತಮಿಳುನಾಡು ಎಂ.ಕೆ. ಸ್ಟಾಲಿನ್​ ಪುತ್ರ ಉದಯನಿಧಿ ಸ್ಟಾಲಿನ್​.

ನ.5 ರಂದು ಬಿ. ಆರ್. ಪಿ. ಶಾಂತಿ ನಗರದ ಬಿಜಿಎಸ್ ಕುವೆಂಪು ಶಾಲೆಯ ನೂತನ ಕಟ್ಟಡ, ಮುಖ್ಯಮಂತ್ರಿಗಳಿಂದ ಉದ್ಘಾಟನೆ.

ಇತ್ತೀಚೆಗೆ ನಿಧನರಾದ ರೈತಮುಖಂಡರಿಗೆ ಶ್ರದ್ಧಾಂಜಲಿ.