ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅತ್ಯಂತ ಸಡಗರ ಸಂಭ್ರಮದಿಂದ ಹಲವು ಕಾರ್ಯಕ್ರಮಗಳ ಮೂಲಕ ಕಲಾ ದಸರಾ ಆಚರಣೆ-ಸುರೇಖಾ ಮುರುಳೀಧರ್

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿರುವ ದಸರಾ ಹಬ್ಬದ ಕಲಾ ದಸರಾವನ್ನು ಅತ್ಯಂತ ಸಡಗರ ಸಂಭ್ರಮದಿಂದ ಹಲವು ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವುದು ಎಂದು ಕಲಾ ದಸರಾದ ಅಧ್ಯಕ್ಷೆ ಸುರೇಖಾ ಮುರುಳೀಧರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅ. 18ರಿಂದ 20ರ ವರೆಗೆ ಶಿವಪ್ಪನಾಯಕ ಅರಮನೆ ಮತ್ತು ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. 18ರಂದು ಬೆಳಿಗ್ಗೆ 10 ಗಂಟೆಗೆ ಛಾಯಾಚಿತ್ರ ಪ್ರದರ್ಶನ ಮತ್ತು ಚಿತ್ರಕಲಾ ಪ್ರದರ್ಶನ ಹಾಗೂ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಇರುತ್ತದೆ. ಈ ಎರಡೂ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್‍ಕುಮಾರ್ ಉದ್ಘಾಟಿಸುವರು ಎಂದ ಅವರು, ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಜಿ.ಹೆಚ್. ಸೇರಿದಂತೆ ಮೇಯರ್ ಎಸ್.ಶಿವಕುಮಾರ್, ಆಯುಕ್ತ ಕೆ. ಮಾಯಣ್ಣಗೌಡ, ಹಾಗೂ ಕಲಾ ದಸರಾದ ಸದಸ್ಯರು ಮತ್ತು ವಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿರುತ್ತಾರೆ ಎಂದರು.
ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ವಿವಿಧ ಕಲಾತಂಡಗಳ ಕಲಾ ಜಾಥಾ ಇರುತ್ತದೆ. ಡೊಳ್ಳು ಕುಣಿತ, ವೀರಗಾಸೆ, ದೇವಿ ವೇಷಧಾರಿ, ಕೀಲುಕುದುರೆಗಳು ಇದರಲ್ಲಿ ಭಾಗವಹಿಸುತ್ತವೆ. ಸಂಜೆ 5-30ರಿಂದ ಜಯಶ್ರೀ ಶ್ರೀಧರ್ ಅವರ ಸುಗಮ ಸಂಗೀತ ಕಾರ್ಯಕ್ರಮ ಇದ್ದು, ಖ್ಯಾತ ಗಾಯಕಿ ಸುರೇಖಾ ಹೆಗಡೆ ಉದ್ಘಾಟಿಸುವರು. ಹಾಗೆಯೇ ರಾವiನ್ ಸಹೋದರಿಯರಿಂದ ವೀಣಾ ವೈವಿಧ್ಯತೆ ಇರುತ್ತದೆ ಎಂದರು.
ಅ.19ರಂದು ಶಿವಪ್ಪ ನಾಯಕ ಅರಮನೆಯಲ್ಲಿಯೇ ಸಂಜೆ 5 ಗಂಟೆಯಿಂದ `ಒಂದು ಭಜನೆ ನೂರು ಕಂಠ’ ಕಾರ್ಯಕ್ರಮದ ಅಡಿಯಲ್ಲಿ 100 ಜನರು ಭಜನಾಮೃತ ವೈಭವ ನಡೆಸಿಕೊಡುವರು. ಹಾಗೆಯೇ ಪ್ರತಿಮಾ ಕೋಡೂರು ಅವರಿಂದ ಹರಿಕಥೆ ಮತ್ತು ಅಪರೂಪದ ಹಾಗೂ ಮರೆಯಾಗುತ್ತಿರುವ ಮಾತನಾಡುವ ಗೊಂಬೆ ಕಾರ್ಯಕ್ರಮವನ್ನು ಮೈಸೂರಿನ ಸುಮಾ ರಾಜ್‍ಕುಮಾರ್ ನಡೆಸಿಕೊಡಲಿದ್ದಾರೆ. ವೇಣುವಾದನ ಕಾರ್ಯಕ್ರಮವಿರುತ್ತದೆ. ಈ ಎಲ್ಲಾ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಉದ್ಘಾಟಿಸುವರು. ಶಾಸಕರಾದ ಡಿ.ಎಸ್. ಅರುಣ್, ರುದ್ರೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ ಎಂದರು.
ಅ.20ರಂದು ಜ್ಞಾನ ದಸರಾವನ್ನು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಸಮನ್ವಯ ಟ್ರಸ್ಟ್ ಸಹಕಾರದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಒಂದು ದಿನದ ತರಬೇತಿಯಾಗಿದೆ. ನಗರದ ಎಲ್ಲಾ ಕಾಲೇಜಿನ ಪದವಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿಗಳು ಕಾರ್ಯಾಗಾರ ಉದ್ಘಾಟಿಸುವರು. ಹಲವು ಗಣ್ಯರು ಇದರಲ್ಲಿ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಭಾನುಮತಿ ವಿನೋದ್‍ಕುಮಾರ್ ಶೇಟ್, ಸದಸ್ಯೆ ಕಲ್ಪನಾ ರಮೇಶ್, ಸದಸ್ಯ ಕಾರ್ಯದರ್ಶಿ ಶಶಿಧರ್ ಎ.ಪಿ., ನಳಿನಾ, ಲೀಲಾ, ಕೆ.ಜಿ. ವೆಂಕಟೇಶ್ ಮುಂತಾದವರಿದ್ದರು.

ಬಾಕ್ಸ್:
ಗೊಂಬೆ ಪ್ರದರ್ಶನ ಮತ್ತು ಸ್ಪರ್ಧೆ
ದಸರಾ ಹಬ್ಬದ ವಿಶೇಷತೆಯಿಂದ ಕೂಡಿರುವ ಗೊಂಬೆ ಪ್ರದರ್ಶನವನ್ನು ಕಲಾ ದಸರಾದಲ್ಲಿ `ಮನೆಗೊಂದು ಗೊಂಬೆ’ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಅ.18ರಂದು ಶಿವಪ್ಪ ನಾಯಕ ಅರಮನೆಯಲ್ಲಿಯೇ ಇದರ ಪ್ರದರ್ಶನವಿರುತ್ತದೆ. ನಮ್ಮ ಸಂಸ್ಕøತಿ, ಕಲೆಯನ್ನು ಸಾರುವ ಪ್ರತಿಬಿಂಬಿಸುವ ಯಾವುದೇ ಗೊಂಬೆಗಳಿದ್ದರೆ ಸಾರ್ವಜನಿಕರು ನಮಗೆ ತಲುಪಿಸಬಹುದು. ಪ್ರದರ್ಶನದ ನಂತರ ವಾರಸುದಾರರಿಗೆ ಆ ಗೊಂಬೆಗಳನ್ನು ವಾಪಾಸು ನೀಡಲಾಗುತ್ತದೆ. ಇದೊಂದು ವಿಶಿಷ್ಟ ಪ್ರದರ್ಶನವಾಗಿರುತ್ತದೆ ಎಂದು ಸುರೇಖಾ ಮುರಳೀಧರ್ ತಿಳಿಸಿದರು.
ಹಾಗೆಯೇ ಮನೆಮನೆಗಳಲ್ಲಿ ಗೊಂಬೆಗಳನ್ನು ಕೂರಿಸಲಾಗುತ್ತದೆ. ತಮ್ಮ ಮನೆಗಳಲ್ಲಿ ಕೂರಿಸಿದ್ದರೆ ಕಲಾ ದಸರಾ ಸಮಿತಿಗೆ ತಿಳಿಸಬೇಕು. ನಾವು 16 ಮತ್ತು 17ರಂದು ಯಾರು ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುತ್ತಾರೊ ಅವರ ಮನೆಗಳಿಗೆ ಹೋಗಿ ವೀಡಿಯೋ ಚಿತ್ರೀಕರಣ ಮಾಡಲಾಗುವುದು. ವಿಶೇಷವಾಗಿ ಮತ್ತು ವಿಶಿಷ್ಟವಾಗಿ ಗೊಂಬೆ ಕೂರಿಸಿದವರಿಗೆ ಬಹುಮಾನ ನೀಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಮೊ: 9481564343 / 9972260600/ 8722375475ರಲ್ಲಿ ಸಂಪರ್ಕಿಸಬಹುದು.

Related posts

11 ಶಾಸಕರು ನನ್ನ ಬಳಿ ಜೆಡಿಎಸ್-ಬಿಜೆಪಿ ಮೈತ್ರಿ ಬೇಡ ಎಂದಿದ್ದಾರೆ- ಹೊಸಬಾಂಬ್ ಸಿಡಿಸಿದ ಸಿಎಂ ಇಬ್ರಾಹಿಂ

ಆ.28 ರಿಂದ ಮೂರು ದಿನ ಚಕ್ರವರ್ತಿ ಸೂಲಿಬೆಲೆಯವರಿಂದ ಉಪನ್ಯಾಸ ಕಾರ್ಯಕ್ರಮ.

ಸಿಎಂ ಆಗಿ ಸಿದ್ಧರಾಮಯ್ಯ ಐದು ವರ್ಷ ಪೂರೈಸುತ್ತಾರೆಯೇ..? ಕೋಡಿ ಮಠದ ಸ್ವಾಮೀಜಿ ನುಡಿದ ಭವಿಷ್ಯವೇನು..?