ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಅಕ್ಟೋಬರ್ ನಿಂದ ಸಕ್ಕರೆ ರಫ್ತು ನಿಷೇಧ…

ಬೆಂಗಳೂರು: ದೇಶದಲ್ಲಿ ನಿರೀಕ್ಷೆ ಮಳೆ ಆಗದೇ ಮಳೆ ಕೊರತೆಯಾಗಿದ್ದು ಕಬ್ಬಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ ದಿನನಿತ್ಯ ಬಳಕೆ ವಸ್ತುಗಳು ಆಹಾರ ಪದಾರ್ಥಗಳ ಬೆಲೆ ಏರಿಳಿಕೆ ಕಂಡಿದೆ.  ಈ ಸಂಬಂಧ ಭಾರತ ಸರ್ಕಾರ ಅಕ್ಟೋಬರ್ ತಿಂಗಳಲ್ಲಿ ಸಕ್ಕರೆ ರಫ್ತು ಅನ್ನು ನಿಷೇಧಿಸುವ ಸಾಧ್ಯತೆ ಇದೆ ಎಂದು ವರದಿಯಾಗದೆ

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಗರಿಷ್ಠ ಶೇಕಡಾ 7.4 ರಷ್ಟಿದ್ದದ್ದು ಶೇಕಡಾ 11.5 ಕ್ಕೆ ಏರಿಕೆ ಆಗಿದ್ದು, ಈ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತ ಹಣದುಬ್ಬರ ಹೆಚ್ಚಾಗದಂತೆ ತಡೆಯಲು ಈ ರಫ್ತು ನಿಷೇಧ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಭಾರತದ ಅನೇಕ ಕಡೆ ನಿರೀಕ್ಷಿತ ಮಳೆ ಕೊರತೆ ಉಂಟಾಗಿದೆ. ಇದರಿಂದ ಕಬ್ಬು-ಉತ್ಪಾದಿಸುವ ಪ್ರದೇಶಗಳಲ್ಲಿ ಪರಿಣಾಮ ಬೀರುತ್ತದೆ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಾನ್ಸೂನ್ ಮಳೆ ಸರಾಸರಿಗಿಂತ ಶೇಕಡಾ 50 ಪ್ರತಿಶತದಷ್ಟು ಕಡಿಮೆ ಆಗಿದೆ.

ಏಳು ವರ್ಷಗಳಲ್ಲಿ ಸಂಭವಿಸದ ಭಾರತೀಯ ಸಕ್ಕರೆ ರಫ್ತಿನ ಮೇಲಿನ ನಿಷೇಧವು ಜಾಗತಿಕ ಮಾನದಂಡದ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಅಲ್ಲದೇ ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಹಣದುಬ್ಬರ ಸಹ ಹೆಚ್ಚಿಸಬಹುದು ಎನ್ನಲಾಗುತ್ತಿದೆ.

2023-24 ಪ್ರಸಕ್ತತುವಿನಲ್ಲಿ ದೇಶದ ಸಕ್ಕರೆ ಉತ್ಪಾದನೆಯು ಶೇಕಡಾ 3.3 ರಷ್ಟು ಅಂದರೆ ಪ್ರತಿ ವರ್ಷಕ್ಕಿಂತ 31.7 ಮಿಲಿಯನ್ ಟನ್ ಗಳಿಷ್ಟು ಇಳಿಯಬಹುದು. ಭಾರತವು ಪ್ರಸಕ್ತ ಋತುವಿನಲ್ಲಿ ಕೇವಲ 6.1 ಮಿಲಿಯನ್ ಟನ್ ಸಕ್ಕರೆ ರಫ್ತು ಮಾಡಲು ಗಿರಣಿಗಳಿಗೆ ಅನುಮತಿ ನೀಡಿತ್ತು.

ಇನ್ನು ಭಾರತೀಯ ಅಧಿಕಾರಿಗಳು ಸ್ಥಳೀಯ ಸಕ್ಕರೆ ಅಗತ್ಯತೆಗಳು ಮತ್ತು ಹೆಚ್ಚುವರಿ ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಮಾಡುವಲ್ಲಿ ಆದ್ಯತೆ ನೀಡುತ್ತಿದ್ದಾರೆ. ಆದರೆ ಸರ್ಕಾರ ಸ್ಥಳೀಯ ಸಕ್ಕರೆ ಅಗತ್ಯತೆ- ಬೇಡಿಕೆ ಪೂರೈಸುವುದು ಮತ್ತು ಹೆಚ್ಚುವರಿ ಕಬ್ಬಿನಿಂದ ಎಥೆನಾಲ್ ಅನ್ನು ಉತ್ಪಾದಿಸುವಲ್ಲಿ ಗಮನ ನೀಡುತ್ತದೆ ಎಂದು ಸರ್ಕಾರಿ ಮೂಲವು ಸುದ್ದಿ ಸಂಸ್ಥೆಗೆ ತಿಳಿಸಿದೆ.

ಭಾರತದಿಂದ ರಫ್ತು ನಿಷೇಧವು ಥೈಲ್ಯಾಂಡ್ನಲ್ಲಿನ ಉತ್ಪಾದನೆ ನಿರ್ಬಂಧವು ಮತ್ತು ಉತ್ಪಾದನೆ ಕೊರತೆಯನ್ನು ಸಂಪೂರ್ಣವಾಗಿ ಸರಿದೂಗಿಸಲು ಪ್ರಮುಖ ಉತ್ಪಾದಕ ಬ್ರೆಜಿಲ್ನ ಅಸಮರ್ಥತೆಯು ಜಾಗತಿಕ ಪೂರೈಕೆಯ ಕಾಳಜಿ ಉಲ್ಬಣಗೊಳಿಸಬಹುದು. ಭಾರತ ಈ ನಿರ್ಧಾರವು ಜಾಗತಿಕ ಸಕ್ಕರೆ ಮಾರುಕಟ್ಟೆಗಳ ಮೆಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

ಆಹಾರ ಹಣದುಬ್ಬರದ ಉಂಟಾದಂತೆ ಸಂಭಾವ್ಯ ಪ್ರಭಾವ ಅರಿತು ಸರ್ಕಾರ ದೇಶದಲ್ಲಿ ಆಂತರಿಕ ಸಕ್ಕರೆ ಸರಬರಾಜು ಮತ್ತು ಸ್ಥಿರ ಬೆಲೆ ಖಚಿತಪಡಿಸಿಕೊಳ್ಳಲು ಗುರಿ ಹೊಂದಿದೆ. ಹೀಗಾಗಿ ಸಕ್ಕರೆ ರಫ್ತುವಿನ ಮೇಲೆ ನಿರ್ಬಂಧ ವಿಧಿಸಲು ಸರ್ಕಾರ ಮುಂದಾಗಿದೆ.

 

Related posts

ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ನಡೆಯಲು ಬಿಡುವುದಿಲ್ಲ- ಗೃಹ ಸಚಿವ ಪರಮೇಶ್ವರ್.

ಆದಿತ್ಯ ಎಲ್ -1 ಉಡಾವಣೆ ವೀಕ್ಷಿಸಿ ಖುಷಿಪಟ್ಟು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ ಶಾಲೆಯ ವಿದ್ಯಾರ್ಥಿಗಳು

ರುದ್ರರೂಪಿಣಿ ಸ್ನೇಹಸಂಘದ ಸಮುದಾಯ ಭವನ ಕಾಮಗಾರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ