ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

 ಬಿಜೆಪಿಯಲ್ಲಿ  ಶಾಸಕರಿಗೆ ಉಸಿರುಗಟ್ಟುವ ವಾತಾವರಣ:  ಕಾಂಗ್ರೆಸ್ ಗೆ ಯಾರೇ ಬಂದ್ರೂ ಸ್ವಾಗತ- ಸಚಿವ ರಾಮಲಿಂಗರೆಡ್ಡಿ ಆಹ್ವಾನ.

ಬೆಂಗಳೂರು: ಶಾಸಕರಿಗೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ಈ ಕುರಿತು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಯಾರ್ಯಾರು ಬಿಜೆಪಿಗೆ ಹೋಗಿದ್ದಾರೋ ಅವರು ಕಾಂಗ್ರೆಸ್ ಗೆ ಬಂದ್ರೆ ಸ್ವಾಗತ. ಇದರಿಂದ  ಲೋಕಸಭೆ ಬಿಬಿಎಂಪಿ ಎರಡೂ ಚುನಾವಣೆಗೆ ಅನುಕೂಲವಾಗಲಿದೆ. ಕಾಲ ಬದಲಾಗುತ್ತಾ ಹೋಗುತ್ತೆ. ನಿರ್ಧಾರಗಳೂ ಬದಲಾಗುತ್ತವೆ. ಸಿದ್ದರಾಮಯ್ಯ ಅವತ್ತಿನ ಸಂದರ್ಭದಲ್ಲಿ  ಸೇರಿಸಿಕೊಳ್ಳಲ್ಲ ಎಂದಿದ್ದರು. ಆದರೆ ಇವತ್ತಿನ ಕಾಲಕ್ಕೆ ನಿರ್ಧಾರ ಬದಲಾಗಿದೆ ಎಂದರು.

ತಪ್ಪು ತಿಳುವಳಿಕೆಯಿಂದ ಕಾಂಗ್ರೆಸ್ ತೊರೆದಿದ್ದರು. ಈಗ ಕಾಂಗ್ರೆಸ್ ಪಕ್ಷವೇ ಸರಿ ಅನ್ನಿಸುತ್ತಿದೆ.   ಶಾಸಕರಿಗೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ.  ಬಿಜೆಪಿಯಲ್ಲಿ ಬೋನಿನಲ್ಲಿ ಹಾಕಿದಂತೆ ಇರುತ್ತದೆ.   ನನ್ನ ಪಕ್ಷದಲ್ಲಿ ಹಕ್ಕಿಗಳು ಸ್ವತಂತ್ರವಾಗಿ ಹಾರಾಡುತ್ತವೆ. ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Related posts

ಮೂರ್ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧ- ಡಿಸಿಎಂ ಡಿ.ಕೆ ಶಿವಕುಮಾರ್.

ಯುವ ವಿದ್ಯಾರ್ಥಿಗಳೇ ಕನ್ನಡ ಸಂಸ್ಕೃತಿ ಪರಂಪರೆಯ ರಾಯಭಾರಿಗಳು – ಡಿವಿಎಸ್ ವಿದ್ಯಾರ್ಥಿಗಳಿಂದ ಕನ್ನಡ ನಡಿಗೆ ಬೃಹತ್ ಜಾಥಾ

ಎಲ್ಲೆಂದರಲ್ಲಿ ಬೆರಳಚ್ಚು ಕೊಡುವ ಮುನ್ನ ಇರಲಿ ಎಚ್ಚರ: ಇಲ್ಲದಿದ್ರೆ ಬ್ಯಾಂಕ್ ಖಾತೆ ಖಾಲಿ ಖಾಲಿ.