ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ.

ಶಿವಮೊಗ್ಗ: ಗ್ರಾಪಂ ಮುಖ್ಯ ಪುಸ್ತಕ ಬರಹಗಾರರ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಪಂ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಹಾಗೂ ಸ್ಥಳೀಯ ಸಂಪನ್ಮೂಲಗಳ ಮಹಾ ಒಕ್ಕೂಟದಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.
ಸಂಜೀವಿನಿ ಯೋಜನೆಯಡಿ ಗ್ರಾಪಂ ಮಟ್ಟದಲ್ಲಿ ಸ್ವಸಹಾಯ ಒಕ್ಕೂಟಗಳ ಗುಂಪು ರಚಿಸಿಕೊಂಡುಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಆದರೆ ಇನ್ನೂ ಉತ್ತಮ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಗೌರವಧನವನ್ನು 20ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ 15 ಸಾವಿರ ಹೆಚ್ಚಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಏಕರೂಪ ವೇತನಶ್ರೇಣಿ ನಿಗದಿಪಡಿಸಬೇಕು. ಸೇವಾ ಹಿರಿತನದ ಮೇಲೆ ವೇತನ ನಿಗದಿಪಡಿಸಬೇಕು. ಎಂಬಿಕೆ ಮತ್ತು ಎಲ್‍ಸಿಆರ್‍ಪಿ ನೌಕರರ ಬೇಡಿಕೆ ಈಡೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ ಸೇರಿದಂತೆ ಹಲವರಿದ್ದರು.

Related posts

ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ

ಸಂಪುಟ ಪುನರ್ ರಚನೆ  ಬಗ್ಗೆ ಹೈಕಮಾಂಡ್ ತೀರ್ಮಾನ – ಸಚಿವ ದಿನೇಶ್ ಗುಂಡೂರಾವ್.

ಪತ್ರಕರ್ತರು ಸಮಾಜಮುಖಿ ಪಥದಲ್ಲಿ ಹೆಜ್ಜೆ ಇಡಬೇಕು: ಗೋಪಾಲ್‌ ಯಡಗೆರೆ.