ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಡಿಸೆಂಬರ್ 3ರಂದು ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ, `ತಾರೆ ನೀ ಮಿನುಗು’ ಪ್ರಶಸ್ತಿ ಪ್ರದಾನ.

ಶಿವಮೊಗ್ಗ: ಕೆಬಿಜೆ(ಕರೆಯಾಳ ಹಳ್ಳಿ ಬಸವನಗೌಡ ಜಯಮ್ಮ) ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಡಿಸೆಂಬರ್ 3ರಂದು ದಾವಣಗೆರೆಯ ಹೋಟೆಲ್ ಪಂಜುರ್ಲಿಯಲ್ಲಿ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ ಹಾಗೂ `ತಾರೆ ನೀ ಮಿನುಗು’ ಎಂಬ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಮೇಘಾ ಕೆ.ಸಿ. ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಬಿಜೆ ಗ್ರಾಮೀಣ ಸಂಸ್ಥೆಯು ಕಳೆದ 9ವರ್ಷಗಳಿಂದ ಶಿಕ್ಷಣ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮುಂತಾದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದರ ಮುಂದುವರಿದ ಭಾಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 50 ಜನರಿಗೆ ತಾರೆ ನೀ ಮಿನುಗು ಎಂಬ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ತಾರೆ ನೀ ಮಿನುಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ವಿವಿಧ ಸಿನಿಮಾ ತಾರೆಯರು, ಹಿರಿಯರು, ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ. ಈಗಾಗಲೇ ನಮ್ಮ ಆಯ್ಕೆ ಸಮಿತಿ ಹಲವರನ್ನು ಆಯ್ಕೆ ಮಾಡಿದೆ. ಸಮಿತಿಯು ಸಾಧಕರನ್ನು ಗುರುತಿಸಿ ಅವರ ಕ್ಷೇತ್ರಕ್ಕೆ ಹೋಗಿ ಅವರ ಸಾಧನೆಗಳನ್ನು ತಿಳಿದ ನಂತರವೇ ಪ್ರಶಸ್ತಿ ನೀಡಲಾಗುತ್ತದೆ ಎಂದರು.
ಕೆಬಿಜೆ ಗ್ರಾಮೀಣ ಸಂಸ್ಥೆಯ ಪೂರಕ ಸಂಸ್ಥೆಯಾದ ಒಬಿಎಂ ಈವೆಂಟ್ಸ್ ದಾವಣಗೆರೆ ವತಿಯಿಂದ ಡಿ.3ರ ಸಂಜೆ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿದೆ. ಆಯ್ಕೆ ಬಯಸಿ ಬಂದ ಪ್ರತಿಯೊಬ್ಬರಿಗೂ ಫ್ರೀ ಆಡಿಷನ್ ಇರುತ್ತದೆ. ಈ ಸ್ಪರ್ಧೆಯು ಐದು ವಿಭಾಗಳಲ್ಲಿ ನಡೆಯುತ್ತದೆ. ಒಂದೊಂದು ವಿಭಾಗದಿಂದ 15ರಿಂದ 20 ಸ್ಪರ್ಧಾಳುಗಳನ್ನು ಫಿನಾಲೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಭಾಗವಹಿಸಿದ 10ರ ಗುಂಪಿನಲ್ಲಿ ಆಯ್ಕೆಯಾದ ಸದಸ್ಯರಿಗೆ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ ಫಿನಾಲೆಯಲ್ಲಿ ಆಯ್ಕೆಯಾದವರು ಟಿ.ವಿ. ಶೋ, ಧಾರಾವಾಹಿಗಳು ಹಾಗೂ ಚಲನಚಿತ್ರಗಳಲ್ಲೂ ಭಾಗವಹಿಸುವ ಅವಕಾಶವಿರುತ್ತದೆ ಎಂದರು.
ಈ ಎರಡೂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಮೊ.ನಂ. 97397 48550, 81058 13692ರಲ್ಲಿ ಸಂಪರ್ಕಿಸಬಹುದು ಎಂದರು.

Related posts

ರಾಜಕಾಲುವೆ ಕಾಮಗಾರಿ ಪೂರ್ಣ: ಸಚಿವ ಬೈರತಿ ಸುರೇಶ್ ರಿಂದ ಉದ್ಘಾಟನೆ.

  ಸಮಾನತೆ ಸಂದೇಶ ಸಾರಿದ್ದು, ನುಡಿದಂತೆ ನಡೆದವರು ಬಸವಾದಿ ಶರಣರು: – ಸಿಎಂ ಸಿದ‍್ಧರಾಮಯ್ಯ.

ವಿದ್ಯಾರ್ಥಿಗಳ ಯೋಚನೆ ಆಲೋಚನೆಗಳು ದೂರದೃಷ್ಟಿಯಿಂದ ಇರಬೇಕು-ಡಾ.ಆನಂದಕುಮಾರ್ ತ್ರಿಪಾಠಿ