ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ವರ್ಗಾವಣೆಗೆ ಖಂಡನೆ.

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರನ್ನು ಸರ್ಕಾರ ಜಿಲ್ಲೆಯಿಂದ ವರ್ಗಾವಣೆ ಮಾಡಿರುವುದನ್ನು ನಂದಿ ವಿದ್ಯಾಸಂಸ್ಥೆ ಹಾಗೂ ನೊಳಂಬ ಲಿಂಗಾಯತ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ನಂದಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಬಿ. ಶಂಕರಪ್ಪ ಹೇಳಿದರು.
ಅವರು ಇಂದು ಪ್ರೆಸ್ ಟ್ರಸ್ಟ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿ.ಎಸ್. ಷಡಾಕ್ಷರಿ ಅವರು ಸರ್ಕಾರಿ ನೌಕರರ ಏಳಿಗೆಗಾಗಿ ಕೆಲಸ ಮಾಡಿದ್ದಾರೆ. ಆದರೆ ಯಾರದೋ ಪೂರ್ವಗ್ರಹ ಪೀಡಿತರ ದೂರಿನಿಂದ ವರ್ಗಾವಣೆ ಮಾಡಿರುವುದು ಸರಿಯಲ್ಲ. ಮಣ್ಣಿನ ವಿಷಯಕ್ಕೆ ಸಂಬಂಧಿಸಿದಂತೆ ಇವರ ವಿರುದ್ದ ದೂರು ಇದೆ ಎಂಬ ಕೇವಲ ಕ್ಷುಲ್ಲಕ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ. ಇವರೇನು ಮಣ್ಣು ಕಾಯುವ ರಕ್ಷಕ ಅಧಿಕಾರಿಯೇ. ಉಸ್ತುವಾರಿಮಂತ್ರಿಗಳು ಯಾರದೋ ಮಾತು ಕೇಳಿ ಇವರನ್ನು ವರ್ಗಾವಣೆ ಮಾಡಿದ್ದಾರೆ. ಕೂಡಲೇ ಈ ವರ್ಗಾವಣೆಯನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್. ಷಣ್ಮುಖಪ್ಪ, ಜಗದೀಶ್, ನಟರಾಜ್, ಪರಮೇಶ್ವರಪ್ಪ, ಕಾಂತರಾಜ್, ಚಂದ್ರಪ್ಪ, ಜಯಶಂಕರ್, ಜಯರಾಜ್ ಇದ್ದರು.

Related posts

ನಾಲ್ಕು ತಲೆಮಾರಿನಿಂದಲೂ ಗಣೇಶ ಮೂರ್ತಿ ತಯಾರಿ: ವಿದೇಶಕ್ಕೂ ತಲುಪಿದ ಗಣಪನ ಮೂರ್ತಿ: ಈ ಅಪರೂಪ ಕುಟುಂಬದ ಶ್ರದ್ಧೆ ಮತ್ತು ಭಕ್ತಿಗೆ ಒಂದು ನಮನ.

*ಚಾರಣ ಕ್ಷೇತ್ರದಲ್ಲಿ ಅ.ನಾ.ವಿಜಯೇಂದ್ರರಾವ್ ಸಂಘಟನಾತ್ಮಕ ಕೆಲಸ-ಎನ್.ಗೋಪಿನಾಥ್

ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ- ಸಿಎಂ ಸಿದ್ದರಾಮಯ್ಯ ಕಿವಿಮಾತು.