ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಚಾರಣದಿಂದ ಬದುಕಿನಲ್ಲಿ ವಿಶೇಷ ಮನೋಲ್ಲಾಸ-ಎಸ್.ಎಸ್.ವಾಗೇಶ್

ಶಿವಮೊಗ್ಗ: ಪ್ರತಿಯೊಬ್ಬರು ಚಾರಣ ಪ್ರವಾಸದಲ್ಲಿ ಕಾಲ ಕಾಲಕ್ಕೆ ಪಾಲ್ಗೊಳ್ಳುವುದು ಅತ್ಯಂತ ಮುಖ್ಯ ಆಗಿದ್ದು, ನಿತ್ಯದ ಕಾರ್ಯಗಳಿಂದ ಬಿಡುವು ಮಾಡಿಕೊಂಡು ಚಾರಣಗಳಲ್ಲಿ ಭಾಗವಹಿಸುವುದರಿಂದ ಬದುಕಿನಲ್ಲಿ ವಿಶೇಷ ಮನೋಲ್ಲಾಸ, ಉತ್ಸಾಹ ನಮ್ಮದಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಅಧ್ಯಕ್ಷ ಎಸ್.ಎಸ್.ವಾಗೇಶ್ ಹೇಳಿದರು.

ತರುಣೋದಯ ಘಟಕದ ಸದಸ್ಯರಿಗಾಗಿ ಏರ್ಪಡಿಸಿದ್ದ ಎರಡು ದಿನದ ಪ್ರವಾಸ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ದಿನ ಮಾಡುವ ಕೆಲಸಗಳಿಂದ ಮುಕ್ತಿ ಹೊಂದಿ ಪ್ರವಾಸ ಚಾರಣ ಹೋಗುವುದರಿಂದ ಮನಸ್ಸಿಗೆ ಹಿತ ಮತ್ತು ಸಂತೋಷ ಸಿಗುತ್ತದೆ ಎಂದು ತಿಳಿಸಿದರು.

ಪ್ರಕೃತಿ ಮಡಿಲಿನ ಜಲಪಾತಗಳಲ್ಲಿ ಎಲ್ಲಾ ವಯೋಮಾನದವರು ಮಕ್ಕಳಂತೆ ಆಟವಾಡಲು ಸಿರಿಮನೆ ಮತ್ತು ಬಂಡಜ್ಜೆ ಜಲಪಾತಕ್ಕೆ ಚಾರಣ ಏರ್ಪಡಿಸಲಾಗಿದೆ. ಶೃಂಗೆರಿ, ಕಳಸ, ಹೊರನಾಡು ಮುಂತಾದ ಪ್ರಸಿದ್ದ ಪವಿತ್ರ ಸ್ಥಳಗಳ ಭೇಟಿ ಇರಲಿದೆ. ಈ ಕಾರ್ಯಕ್ರಮದ ಮುಂದಾಳತ್ವವನ್ನು ಎಸ್.ಉಮೇಶ್ ಮತ್ತು ಮಮತ ಅವರು ವಹಿಸಿಕೊಂಡಿದ್ದು, ಕಾರ್ಯಕ್ರಮದ ರೂವಾರಿ ಸುರೇಶ್ ಕುಮಾರ್, ಮಲ್ಲಿಕಾರ್ಜುನ್ ವಹಿಸಿಕೊಂಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವೈಎಚ್‌ಎಐ ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಯಾವುದೇ ವಾಹನ ಹೋಗದ ಸ್ಥಳಗಳಿಗೆ ಒಬ್ಬ ಚಾರಣಿಗ ಹೋಗಿ ಪ್ರಕೃತಿ ಸೌಂದರ್ಯ ಸವಿಯಬಹುದಾಗಿದ್ದು, ಅರಣ್ಯ ಇಲಾಖೆಯ ಬಿಗಿ ಭದ್ರತೆಯಲ್ಲಿ ಸುಂದರ ಸ್ಥಳಗಳ ವೀಕ್ಷಣೆಗೆ ಯೂತ್ ಹಾಸ್ಟೆಲ್ಸ್ ಅನುಕೂಲ ಮಾಡಿ ಕೊಡುತ್ತಿದ್ದು, ಇದರ ಸದುಪಯೋಗವನ್ನು ನಾಗರೀಕರು ಪಡೆಯ ಬೇಕು ಎಂದು ತಿಳಿಸಿದರು.

ಡಾ. ಅಶೋಕ್, ಸುರೇಶ್, ಧಾನಮ್ಮ, ಡಾ. ಶಾಂತಾಶೇಖರ್ ಮುಂತಾದ ಐವತ್ತು ಸದಸ್ಯರ ತಂಡ ಭಾಗವಹಿಸಿತ್ತು.

Related posts

ಪ್ರಜಾಪ್ರಭುತ್ವಗಳನ್ನು ನಾಶ ಮಾಡಲು ಹಮಾಸ್ ಹಾಗೂ ರಷ್ಯಾ ಹೊರಟಿವೆ- ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ವಾಗ್ದಾಳಿ

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಎಲ್ಲ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ-ಸಚಿವ ಮಧು ಬಂಗಾರಪ್ಪ ಭರವಸೆ

ಜಗದೀಶ್.ಜಿ.ಶೇಠ್ ಗೆ ಏಕತಾ ಸಮಾಜ ಸೇವಾಶ್ರೀ ಪ್ರಶಸ್ತಿ.