ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ- ಎಸ್ಪಿ ಮಿಥುನ್ ಕುಮಾರ್ ಎಚ್ಚರಿಕೆ

ಶಿವಮೊಗ್ಗ: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ತಿಳಿಸಿದ್ದಾರೆ.
ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಘಟನೆ ನಡೆದ ವೇಳೆ ಎರಡು ಓಮ್ನಿ ವಾಹನಗಳು ಇದ್ದವು ಎಂದು ಹೇಳಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗಿದೆ. ಅದು ನ್ಯಾಮತಿಗೆ ಸೇರಿದ ವಾಹನಗಳಾಗಿದ್ದು, ಶಿವಮೊಗ್ಗಕ್ಕೆ ಬಂದು ರಾಗಿಗುಡ್ಡಕ್ಕೆ ಆಗಮಿಸಿದ್ದಾರೆ. ಅವರು ಬಂದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಅವರು ತಮ್ಮ ಊರಿಗೆ ಹಿಂದಿರುಗಿದ್ದಾರೆ. ಸತ್ಯವನ್ನು ಪರಿಶೀಲಿಸದೆ ಕತೆಗಳನ್ನು ಸೃಷ್ಟಿಸಬಾರದು ಎಂದು ಎಸ್‍ಪಿ ಸೂಚಿಸಿದ್ದಾರೆ.
ಘಟನೆಯಲ್ಲಿ ಎರಡೂ ಸಮುದಾಯದವರು ಸಂತ್ರಸ್ತರಾಗಿದ್ದಾರೆ. ಆರೋಪಿಗಳು ಕೂಡ ಎರಡೂ ಸಮುದಾಯದವರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ರಾಗಿಗುಡ್ಡದಲ್ಲಿ ಪೊಲೀಸರ ಗೋಲೀಬಾರ್‍ನಿಂದ ಯುವಕ ಮೃತಪಟ್ಟಿರುವುದಾಗಿ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಯಾರೂ ಸತ್ತಿಲ್ಲ. ಯಾರೋ ವ್ಯಕ್ತಿಯೊಬ್ಬ ಎಲ್ಲಿಯೋ ಬಿದ್ದಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದ ಮೂಲಕ ಎನ್‍ಕೌಂಟರ್ ಎಂದು ಬಿಂಬಿಸುತ್ತಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಇದರ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗುವುದು ಎಂದರು.

Related posts

ಕರ್ನಾಟಕ ರಾಜ್ಯೋತ್ಸವ ವಿಶಿಷ್ಟ ಆಚರಣೆ – ಯಶಸ್ವಿಗೊಳಿಸಲು ಡಿಸಿ ಮನವಿ

44 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಎಲ್ಲೆಡೆ  ಭದ್ರತೆ ಒದಗಿಸಲು ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ.

 ಡಿ.ಕೆ ಶಿವಕುಮಾರ್  ಚಾಲೇಂಜ್  ಸ್ವೀಕರಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.