ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕೇಸರಿ ಧ್ವಜ, ಬಂಟಿಂಗ್ಸ್ ಹಾಕಲು ನಿರ್ಬಂಧ ವಿಧಿಸಿಲ್ಲ- ಎಸ್ಪಿ ಮಿಥುನ್‍ ಕುಮಾರ್ ಸ್ಪಷ್ಟನೆ

ಶಿವಮೊಗ್ಗ: ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕೇಸರಿ ಧ್ವಜ, ಬಂಟಿಂಗ್ಸ್ ಹಾಕಲು ಪೊಲೀಸ್ ಇಲಾಖೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‍ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಣಪತಿ ಮೂರ್ತಿಯನ್ನು ದೇವಸ್ಥಾನಗಳಲ್ಲಿ ಮಾತ್ರ ಪ್ರತಿμÁ್ಠಪಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಬಾರದು ಎಂದು ಪೆÇಲೀಸ್ ಇಲಾಖೆಯಿಂದ ನಿಬರ್ಂಧಗಳಿವೆ ಎಂಬ ವದಂತಿ ಹರಡಲಾಗುತ್ತಿದೆ. ಆದರೆ ಅದು ತಪ್ಪು. ಪ್ರತಿಷ್ಟಾಪನೆ ಸ್ಥಳಗಳ ಬಗ್ಗೆ ಪೋಲಿಸ್ ಇಲಾಖೆಯಿಂದ ಯಾವುದೇ ನಿಬರ್ಂಧಗಳನ್ನು ವಿಧಿಸಲಾಗಿಲ್ಲ.. ಕಳೆದ ವರ್ಷದವರೆಗೆ ಅನುಸರಿಸಿದ್ದನ್ನು ಈ ವರ್ಷವೂ ಮಾಡಲಾಗುತ್ತದೆ. ಕಳೆದ ವರ್ಷ ಎಲ್ಲೆಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತೋ ಅದನ್ನು ಮುಂದುವರಿಸಲು ಸಂಘಟಕರು ಬಯಸಿದಲ್ಲಿ ಮುಂದುವರಿಸಲಾಗುವುದು.. ಪೋಲಿಸ್ ಇಲಾಖೆಯಿಂದ ಯಾವುದೇ ನಿರ್ಬಂಧವಿಲ್ಲ ಎಂದರು.
ಮಂಗಳ ವಾದ್ಯ ಬಳಸಲು ಅಡ್ಡಿ ಇಲ್ಲ. ಪೋಲಿಸ್ ಇಲಾಖೆಯಿಂದ ಅಂತಹ ಯಾವುದೇ ನಿಬರ್ಂಧಗಳನ್ನು ವಿಧಿಸಲಾಗಿಲ್ಲ. ಅಲ್ಲದೆ ಎಲ್ಲಾ ಪ್ರಮುಖ ನಾಯಕರು ಮತ್ತು ಸಮಿತಿಯ ಮುಖಂಡರು, ಹಿಂದೂ ಮುಖಂಡರು ಮತ್ತು ಮುಸ್ಲಿಂ ಮುಖಂಡರನ್ನು ಶಾಂತಿ ಸಮಿತಿ ಸಭೆಗಳಿಗೆ ಆಹ್ವಾನಿಸಲಾಗಿದೆ ಎಂದಿದ್ದಾರೆ.

ಯಾವುದೇ ಸುಳ್ಳು ಮಾಹಿತಿಯನ್ನು ಹರಡಬಾರದು.. ಯಾವುದೇ ಸ್ಪಷ್ಟೀಕರಣಗಳನ್ನು ಮಾಡಬೇಕಾದರೆ, ನ್ಯಾಯವ್ಯಾಪ್ತಿಯ ಠಾಣೆಗಳು, ಇನ್ಸ್‍ಪೆಕ್ಟರ್‍ಗಳು ಅಥವಾ ಡಿವೈಎಸ್ಪಿ ಅಥವಾ ತಮ್ಮನ್ನು ವೈಯಕ್ತಿಕವಾಗಿ ಸಂಪರ್ಕಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಳಿಸಿದ್ದಾರೆ.

Related posts

ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ರಾಜ್‌ ಕುಮಾರ್‌ ಅಪಾರ ಅಭಿಮಾನ ಇರಿಸಿದ್ದರು-ನಾಡೋಜ ಡಾ.ಮಹೇಶ ಜೋಶಿ

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಬಂಗಾರಪ್ಪನವರು – ದೀನಬಂಧು ಸೇವಾಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಅಭಿಮತ

ರಾಜ್ಯ ಸರ್ಕಾರಿ ನೌಕರರಿಗೊಂದು ಮಾಹಿತಿ: ವಿಮೆ ಮಾಡಿಸಲು ಪ್ರೆರೇಪಿಸುವಂತೆ ಆರ್ಥಿಕ ಇಲಾಖೆ ಪತ್ರ..