ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಗೋವಾದಲ್ಲಿ 37ನೇ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ: ಅ.8ರಂದು ತಂಡದ ಆಯ್ಕೆ ಪ್ರಕ್ರಿಯೆ-ಸ್.ಕೆ. ರಘುವೀರ್ ಸಿಂಗ್

ಶಿವಮೊಗ್ಗ: 37ನೇ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಗೋವಾದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ ಅ.8ರಂದು ಮೈಸೂರು ವಿವಿಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆಸಕ್ತ ಕುಸ್ತಿಪಟುಗಳು ಭಾಗವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಎಸ್.ಕೆ. ರಘುವೀರ್ ಸಿಂಗ್ ತಿಳಿಸಿದ್ದಾರೆ.
ಕರ್ನಾಟಕ ಕುಸ್ತಿ ಸಂಘದ ರಾಜ್ಯಾಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಅವರ ನಿರ್ದೇಶನದ ಮೇರೆಗೆ ಈ ಆಯ್ಕೆ ಪಂದ್ಯಾವಳಿ ನಡೆಯಲಿದ್ದು, ಕರ್ನಾಟಕದ ಕುಸ್ತಿಪಟುಗಳು ಮಾತ್ರ ಇದರಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸುವವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್, ಪೋಟೋ ಹಾಗೂ ಡಬ್ಲ್ಯುಎಫ್‍ಐ ಲೈಸೆನ್ಸ್ ಬುಕ್ ಕಡ್ಡಾಯವಾಗಿ ತರಬೇಕು. ಯಾವುದೇ ಸರ್ಕಾರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಇದರಲ್ಲಿ ಭಾಗವಹಿಸುವಂತಿಲ್ಲ. ಒಂದು ಕೆಜಿ ದೇಹದ ತೂಕದಲ್ಲಿ ರಿಯಾಯಿತಿ ಇರುತ್ತದೆ. ಅ.8ರ ಬೆಳಿಗ್ಗೆ 8 ಗಂಟೆಗೆ ದೇಹತೂಕವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪಂದ್ಯಾವಳಿಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಫ್ರೀಸ್ಟೈಲ್‍ನಲ್ಲಿ 57, 65, 74, 86, 97, 125 ಕೆಜಿ ಮತ್ತು ಗ್ರೀಕ್‍ರೋಮ್‍ನಲ್ಲಿ 60, 67, 77, 87, 97, 130 ಕೆಜಿ ವಿಭಾಗಗಳು, ಮಹಿಳಾ ವಿಭಾಗದಲ್ಲಿ 50, 53, 57, 62, 68, 76 ಕೆಜಿಗಳ ಕ್ರಮವಾಗಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ವಿವರಗಳಿಗೆ ದೂ. 9900711151 ಅಥವಾ 9901630383ರಲ್ಲಿ ಸಂಪರ್ಕಿಸಬಹುದಾಗಿದೆ.

Related posts

ನಾವು ಕೊಟ್ಟಿರುವ ಭರವಸೆ ಈಡೇರಿಸಿದ್ದೇವೆ: ದೇಶದ ಸದೃಢತೆಗೆ ಮಹಿಳೆಯರೇ ಕಾರಣ- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

 ನ.27 ರಂದು ಶಿರಾಳಕೊಪ್ಪ ಬಸವೇಶ್ವರ ಸಹಕಾರ ಬ್ಯಾಂಕ್ ನ 111ನೇ ವಾರ್ಷಿಕೋತ್ಸವ

ಕೇಂದ್ರ ಬರ ಅಧ್ಯಯನ  ತಂಡದ ಅಧಿಕಾರಿಗಳ ಎದುರು ರೈತ ಆತ್ಮಹತ್ಯೆಗೆ ಯತ್ನ.