ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ.

ಶಿವಮೊಗ್ಗ,ಡಿ.02: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಆದಿ ಜಂಬವ ರಾಜ್ಯ ಸಮಿತಿ, ಜಿಲ್ಲಾ ಹೊಲೆಯ ಮಾದಿಗ ಜಾತಿಗಳ ಹಿತರಕ್ಷಣಾ ಸಮಿತಿ, ಬಿಎಸ್‍ಪಿ ಸಂಘಟನೆಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಪರಿಶಿಷ್ಟರ ಬದುಕು ಅತಂತ್ರದಲ್ಲಿದೆ. ಮಲ ಹೊರುವುದು ಸೇರಿದಂತೆ ಹೀನ ಕಸೂಬುಗಳನ್ನು ಇನ್ನು ಮಾಡುತ್ತಾ ಬಂದಿದ್ದಾರೆ. ಎಲ್ಲಾ ರಂಗಗಳಲ್ಲಿಯೂ ಹಿಂದೆ ಉಳಿದಿದ್ದಾರೆ. ಜೀವನ ಭದ್ರತೆ ಇಲ್ಲ, ಸಂವಿಧಾನಾತ್ಮಕವಾಗಿ ಸಿಗುವ ಸೌಲಭ್ಯಗಳು ದೊರೆಯುತ್ತಿಲ್ಲ, ಒಳ ಮೀಸಲಾತಿ ಜಾರಿ ಆಗಬೇಕಾಗಿದೆ. ಈ ಹಿನ್ನಲೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಜಾರಿಗೊಳಿಸಬೇಕು ಎಂದು ಧರಣಿ ನಿರತರರು ಆಗ್ರಹಿಸಿದರು.
ಪರಿಶಿಷ್ಟರಿಗೆ ಕೈಗಾರಿಕೋದ್ಯಮಕ್ಕೆ ಪೆÇ್ರೀತ್ಸಾಹ ನೀಡಬೇಕು. ಖರ್ಚಾಗದೆ ಉಳಿದ ಅನುದಾನವನ್ನು ಮುಂದಿನ ಬಜೆಟ್‍ಗೆ ಸೇರಿಸಬೇಕು. ಉಪಯೋಜನೆಗೆ ಸೇರಿಸಲು ಕಾಯ್ದೆ ರೂಪಿಸಬೇಕು. ಶೈಕ್ಷಣಿಕ ಅಸಮಾನತೆ ನಿವಾರಿಸಬೇಕು. ಕೈಗಾರಿಕೋದ್ಯಮಕ್ಕೆ ಸಾಲ ಸೌಲಭ್ಯ ನೀಡುವುದರ ಜೊತೆಗೆ ಶೇ.80ರಷ್ಟು ಸಹಾಯಧನ ನೀಡಬೇಕು, ಸ್ಥಾಪನೆಗೆ ಇರುವ ಕಠಿಣ ನಿರ್ಬಂಧಗಳನ್ನು ತೆಗೆದು ಹಾಕಬೇಕು. ಕೂಡಲೇ ವರದಿಯನ್ನು ಜಾರಿಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಮೂರು ಸಂಘಟನೆಗಳ ಪ್ರಮುಖರಾದ ಸಾವಕ್ಕನವರ್, ಅಶೋಕ್‍ಕುಮಾರ್, ಚಂದ್ರಪ್ಪ, ಪೆÇ್ರ.ರಾಚಪ್ಪ, ಚೆನ್ನವೀರಪ್ಪ ಗಾಮನಗಟ್ಟಿ, ನರಸಪ್ಪ, ಹನುಮಂತಪ್ಪ, ಶಿವಕುಮಾರ್, ಹಾರ್ನನಳ್ಳಿ ಹಳದಪ್ಪ, ಕರಿಸಬಪ್ಪ, ಎನ್.ಪ್ರಕಾಶ್, ಎ.ಡಿ.ಶಿವಪ್ಪ, ಲಕ್ಷ್ಮೀಪತಿ ಸೇರಿದಂತೆ ಹಲವರಿದ್ದರು.

Related posts

ಬಾನುಲಿ ಕ್ವಿಜ್ ವಿಜೇತರಿಗೆ ಬಹುಮಾನ ವಿತರಣೆ

‘ರಸ್ತೆ ಬದಿ ಇಡ್ಲಿ ಮಾರುತ್ತಿದ್ದಾರೆ ಚಂದ್ರಯಾನ-3’ ತಂತ್ರಜ್ಞ. ಕಾರಣವೇನು..?

 ಕಾವೇರಿ ನೀರು ವಿವಾದ:  ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿ- ಸರ್ಕಾರಕ್ಕೆ ಮಾಜಿ ಸಿಎಂ ಬಿಎಸ್ ವೈ ಆಗ್ರಹ.