ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಒಪ್ಪಂದಕ್ಕೆ ಸಹಿ: ಇನ್ಮುಂದೆ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ‘ಪದವಿ’ ಪಡೆಯಲು ಅವಕಾಶ

ಬೆಂಗಳೂರು:  ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಿಹಿಸುದ್ಧಿಯೊಂದು ಸಿಕ್ಕಿದ್ದು, ಇನ್ಮುಂದೆ  ಏಕಕಾಲದಲ್ಲಿ ಎರಡು ‘ಪದವಿ’ ಪಡೆಯಲು ಅವಕಾಶ ಸಿಗಲಿದೆ.

ಈವರೆಗೆ ಏಕಕಾಲದಲ್ಲಿ ಎರಡು ಎರಡು ಪದವಿ ಪಡೆಯೋದಕ್ಕೆ ಅವಕಾಶ ಇರಲಿಲ್ಲ. ಇದೀಗ ಇಂತಹ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಹಾಗೂ ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿವಿಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಆಸ್ಟ್ರೇಲಿಯಾದ ಸಿಡ್ನಿ ವಿವಿ ಸಹಯೋಗದೊಂದಿಗೆ ಏಕಕಾಲದಲ್ಲಿ ಉಭಯ ಪದವಿಗಳನ್ನು ನೀಡುವ ವಿನೂತನ ಪ್ರಯತ್ನಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಏಕ ಕಾಲಕ್ಕೆ ಎರಡು ಪದವಿ ಪಡೆಯೋದಕ್ಕೆ ಅವಕಾಶ ಸಿಗಲಿದೆ.

ಬೆಂಗಳೂರಿನ ಕೃಷಿ ವಿವಿ ಕ್ಯಾಂಪಸ್ ನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಎರಡೂ ವಿವಿಗಳ ಮುಖ್ಯಸ್ಥರು ಹೊಸ ಪ್ರಸ್ತಾಪಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಮಾತನಾಡಿದ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್ ವಿ ಸುರೇಶ್, ಎರಡೂ ಶಿಕ್ಷಣ ಸಂಸ್ಥೆಗಳು ಒಡಗೂಡಿ ಸಂಯೋಜಕ ಕಾರ್ಯಕ್ರಮದಲ್ಲಿ ಮೂಲಕ ಶೈಕ್ಷಣಿಕ ಉತ್ಕೃಷ್ಟತೆ, ಪ್ರಾಯೋಗಿಕ ತರಬೇತಿ ಹಾಗೂ ಜಾಗತಿಕ ದೃಷ್ಟಿಕೋನ ನೀಡುವುದರ ಜೊತೆಗೆ ಎರಡೂ ವಿವಿಗಳು ಪದವಿಗಳನ್ನು ನೀಡುತ್ತವೆ. ಒಡಂಬಡಿಕೆಯಿಂದ ಕೃಷಿ ವಿವಿಯ ವಿದ್ಯಾರ್ಥಿಗಳು ಗಡಿಯಾಚೆಗಿನ ಸೌಲಭ್ಯಗಳನ್ನು ಏಕಕಾಲದಲ್ಲಿ ಎರಡು ಸ್ನಾತಕ ಪದವಿಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಂತೆ ಆಗಿದೆ ಅಂದರು.

ಈ ಹಿನ್ನಲೆಯಲ್ಲಿ ಇನ್ಮುಂದೆ ವಿದ್ಯಾರ್ಥಿಗಳು ಬೆಂಗಳೂರು ಕೃಷಿ ವಿವಿಯಿಂದ ಪದವಿ ಜೊತೆಗೆ, ಆಸ್ಟ್ರೇಲಿಯಾ ವಿವಿಯಿಂದ ಮತ್ತೊಂದು ಪದವಿ ಸೇರಿದಂತೆ ಏಕಕಾಲಕ್ಕೆ ಎರಡು ಎರಡು ಪದವಿಗಳನ್ನು ಪಡೆಯಬಹುದಾಗಿದೆ.

 

Related posts

‘ರಸ್ತೆ ಬದಿ ಇಡ್ಲಿ ಮಾರುತ್ತಿದ್ದಾರೆ ಚಂದ್ರಯಾನ-3’ ತಂತ್ರಜ್ಞ. ಕಾರಣವೇನು..?

ಸೆ.12: ಸಾಹಿತ್ಯ ಗ್ರಾಮದಲ್ಲಿ ಶ್ರಾವಣ ಕಥಾ ಸಂಜೆ

ಅನುದಾನ ರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಎ.ಬಿ ಮತ್ತು ಸಿ ವಲಯಗಳ  ಚೆಸ್ ಮತ್ತು ಯೋಗ ಸ್ಪರ್ಧೆ ಆಯೋಜನೆ .